ನವದೆಹಲಿ: ಉದ್ಯೋಗ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಮಾತ್ರವಲ್ಲದೆ, ವೃತ್ತಿಪರತೆಯೂ ಹೆಚ್ಚುತ್ತಿದೆ. ಭಾರತೀಯ ರೈಲ್ವೆಯಲ್ಲಿ ಮಹಿಳಾ ಟಿಕೆಟ್ ಚಕ್ಕರ್ ಆಗಿರುವ ರೋಸಲಿನಾ ಅರೋಕಿಯಾ ಮೇರಿ, 1.03ಕೋಟಿ ರೂ.ದಂಡ ಸಂಗ್ರಹಿಸಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿರುವುದು ಇದಕ್ಕೊಂದು ಉತ್ತಮ ನಿರ್ದಶನ.
ದಕ್ಷಿಣ ರೈಲ್ವೆಯಲ್ಲಿ ಪ್ರಮುಖ ಟಿಕೆಟ್ ಚೆಕ್ಕಿಂಗ್ ಅಧಿಕಾರಿಯಾಗಿರುವ ಮೇರಿ, ಟಿಕೆಟ್ ಖರೀದಿಸದೆ ರೈಲಿನಲ್ಲಿ ಓಡಾಡುವ ಪ್ರಯಾಣಿಕರಿಂದ 1.03ಕೋಟಿ ದಂಡ ಸಂಗ್ರಹಿಸಿದ ಮೊದಲ ಮಹಿಳಾ ಸಿಬ್ಬಂದಿಯಾಗಿದ್ದಾರೆ.
ತಮ್ಮ ಕಟ್ಟುನಿಟ್ಟು ಕಾರ್ಯವೈಖರಿ ಇಂದ ತಮ್ಮ ವೃತ್ತಿಯನ್ನು ಸರಿಯಾಗಿ ನಿಭಾಯಿಸಿರುವ ಅವರನ್ನು ಭಾರತೀಯ ರೈಲ್ವೆ ಶ್ಲಾಘಿಸಿ, ಟ್ವಿಟರ್‌ನಲ್ಲಿ ಪ್ರಶಂಸೆಯ ಪೋಸ್ಟ್‌ಕೂಡ ಹಂಚಿಕೊಂಡಿದೆ.