ನರಗುಂದ: ಹೆಸರು ಬೀಜ ಬಿತ್ತನೆಯನ್ನು ಜೂನ್ ಮೊದಲ ವಾರದಲ್ಲಿ ಕೈಗೊಳ್ಳುವುದು ಸೂಕ್ತ. ತಡವಾಗಿ ಬಿತ್ತಿದ ಬೆಳೆ ಕೀಟ ಮತ್ತು ರೋಗಕ್ಕೆ ತುತ್ತಾಗುವ ಸಾಧ್ಯವಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ ಅವರು, ಕೃಷಿ ಇಲಾಖೆ ಪ್ರಸ್ತುತ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಎಲ್ಲ ತಯಾರಿ ಮಾಡಿಕೊಂಡಿದೆ.
ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿದ್ದು, ನರಗುಂದ, ಕೊಣ್ಣೂರ ರೈತ ಸಂಪರ್ಕ ಕೇಂದ್ರಗಳಿಂದ ರೈತರು ಬೀಜ ಪಡೆಯುತ್ತಿದ್ದಾರೆ. ತಾಲೂಕಿನಲ್ಲಿ ಕೃಷಿ ಪರಿಕರ ಖಾಸಗಿ ಮಾರಾಟ ಮಳಿಗೆಗಳಲ್ಲಿ ಹತ್ತಿ ಬೀಜ ಸೇರಿ ವಿವಿಧ ಬಿತ್ತನೆ ಬೀಜ ದಾಸ್ತಾನು ಇದೆ. ರೈತ ಸಂಪರ್ಕ ಕೇಂದ್ರದಲ್ಲಿ ಅವಶ್ಯಕ ಕೀಟನಾಶಕ, ಸಸ್ಯಸಂರಕ್ಷಣಾ ಔಷಧ, ಜೀವಾನು ಗೊಬ್ಬರ, ಜೈವಿಕ ಕೀಟನಾಶಕ, ಔಷ ಧ ಸಿಂಪರಣಾ ಯಂತ್ರಗಳು, ಕೆಲವು ಕೃಷಿ ಉಪಕರಣಗಳು ರಿಯಾಯತಿ ದರದಲ್ಲಿ ಲಭ್ಯವಿರುತ್ತವೆ.
ಬಿತ್ತನೆಗೆ ಶಿಫಾರಸ್ಸು: ಬಿತ್ತನೆಗೆ ಸಂಬಂಧಿಸಿದಂತೆ ಹಲವು ಸಾಗುವಳಿ ಕ್ರಮಗಳನ್ನು ಶಿಫಾರಸ್ಸು ಮಾಡಿದ್ದಾರೆ. ಹೆಸರು ಬಿತ್ತನೆ ಬೀಜಕ್ಕೆ ಈಗಾಗಲೇ ಕ್ರಿಮಿನಾಶಕ ಔಷ ಗಳಿಂದ ಉಪಚರಿಸಲಾತ್ತದೆ. ರೈತ ಸಂಪರ್ಕ ಕೇಂದ್ರದಲ್ಲಿ ದ್ರವರೂಪದ ರೈಜೋಬಿಯಂ ಬ್ಯಾಕ್ಟೇರಿಯಾ ಲಭ್ಯವಿದ್ದು, ಬಿಜೋಪಚಾರಕ್ಕೆ ಬಳಸಬಹುದಾಗಿದೆ. ಹೆಸರು ಬಿತ್ತುವ ಮೊದಲು ರೈಜೋಬಿಯಂ ದ್ರವ ಪ್ರತಿ ಕಿಲೋ ಬೀಜಕ್ಕೆ 5,10 ಮಿ.ಲೀ. ಬೆರೆಸಿ ಬೀಜೋಪಚಾರ ಮಾಡಬೇಕು. 150 ಗ್ರಾಂ. ಪಿಎಸ್‌ಪಿ, ರಂಜಕ ಕರಗಿಸುವ ಬ್ಯಾಕ್ಟೇರಿಯಾವನ್ನು ಪ್ರತಿ ಎಕರೆ ಬೀಜಕ್ಕೆ ಬಳಸಬಹ್ಮದು ಎಂದು ಹೇಳಿದ್ದಾರೆ.
ಬದುವಿನ ಮೇಲೆ ತೊಗರಿ ಬಿತ್ತನೆಗೆ ಶಿಫಾರಸ್ಸು ಮಾಡಿದ್ದು, ತೊಗರಿ ಬೀಜ ಕೂಡ ಲಭ್ಯವಿದೆ. ಪ್ರತಿ 5 ಕಿಲೋ ಪ್ಯಾಕೇಟ್ ಗೆ ಸಾಮಾನ್ಯ ರೈತರಿಗೆ ರೂ.250, ಪಜಾ/ಪಪಂ ರೈತರಿಗೆ ರೂ.188 ದರದಲ್ಲಿ ಲಭ್ಯವಿರುತ್ತದೆ. ಯಾವುದೇ ಬೆಳೆಗೆ ಜೈವಿಕ ಗೊಬ್ಬರದಿಂದ ಬಿಜೋಪಚಾರ ಮಾಡುವ ಮೂಲಕ ರಸಗೊಬ್ಬರದ ಬಳಕೆ ಶೇ.25ರಷ್ಟು ಕಡಿಮೆ ಮಾಡಬಹುದು. ಇದರಿಂದ ಬೆಳೆ ಇಳುವರಿ ಮಟ್ಟ ಹೆಚ್ಚಾಗುತ್ತದೆ. ಮೈಟಾರೈಝಿಯಂ ಜೈವಿಕ ಶಿಲಿಂಧ್ರನಾಶಕ ಲಭ್ಯವಿದ್ದು, ಶೇ.50ರ ಸಹಾಯ ಧನದಲ್ಲಿ ವಿತರಿಸಲಾಗುತ್ತದೆ. ಗೊಣ್ಣೆ ಹುಳು ಸೇರಿ ಹತ್ತು ಹಲವು ಕೀಟ ನಿಯಂತ್ರಿಸುವ ಸಾಮರ್ಥ್ಯದ ಶಿಲಿಂದ್ರನಾಶಕ ಪ್ರತಿ ಎಕರೆಗೆ 4-5 ಕಿಲೋದಂತೆ 500 ಕಿಲೋ ಕೊಟ್ಟಿಗೆ ಗೊಬ್ಬರದೊಂದಿಗೆ ಬೆರೆಸಿ ಜಮೀನಿನಲ್ಲಿ ಎರಚಬೇಕು ಎಂದು ತಿಳಿಸಿದ್ದಾರೆ