Advertisement

ಮೊದಲನೆ ಅಲೆ ತಬ್ಲಿಘಿ, ಮೂರನೆ ಅಲೆ ಕಾಂಗ್ರೆಸ್ ಹಬ್ಬಿಸುತ್ತಿದೆ: ಸಚಿವ ಸುನಿಲ್

12:00 PM Jan 12, 2022 | Team Udayavani |

ಬೆಂಗಳೂರು : ಮೇಕೆದಾಟು ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಮೇಲಾಟದಲ್ಲಿ ಕೊರೊನಾ ಹಬ್ಬಿಸುವ ಪಾದಯಾತ್ರೆ ನಡೆಸುತ್ತಿದೆ, ಮೊದಲನೆ ಅಲೆ ತಬ್ಲಿಘಿ ಹಬ್ಬಿಸಿದರೆ, ಮೂರನೆ ಅಲೆಯನ್ನ ಕಾಂಗ್ರೆಸ್ ಹಬ್ಬಿಸುತ್ತಿದೆ ಎಂದು ಸಚಿವ ಸುನಿಲ್ ಕುಮಾರ್ ಮಂಗಳವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಮೇಕೆದಾಟು ವಿಷಯದಲ್ಲಿ ಸರ್ಕಾರ ಬದ್ದವಿದೆ.ಯೋಜನೆ ಅನುಷ್ಟಾನಕ್ಕೆ ನಾವು ಕಟಿಬದ್ದರಾಗಿದ್ದೇವೆ. ರಾಜ್ಯದಲ್ಲಿ ಕೊರೊನಾ ಹರಡುತ್ತಾ ಇದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ನಾನು ಆರೋಪಿಸುತ್ತೇನೆ. ಈ ನೆಲದ ಕಾನೂನನ್ನು ಕಾಂಗ್ರೆಸ್ ಗೌರವಿಸುವುದಿಲ್ಲ. ಲಸಿಕೆ ಬಂದಾಗ ಲಸಿಕೆಯನ್ನ ತಿರಸ್ಕರಿಸಿದರು. ನೀರಿಗಾಗಿ ಅಲ್ಲ,ನಾಯಕತ್ವಕ್ಕಾಗಿ ನಡೆಯುತ್ತಿರುವ ಪಾದಾಯಾತ್ರೆ. ಜನರ ಆರೋಗ್ಯ ದೃಷ್ಟಿಯಿಂದ ಕಾಂಗ್ರೆಸ್ ನಾಯಕರಿಗೆ ಕಾಳಜಿ ಇರಲಿ ಎಂದರು.

ಸರ್ಕಾರವೇ ಕೋವಿಡ್ ಅಂಕಿ ಅಂಶ ಹೆಚ್ಚು ಮಾಡುತ್ತಿದೆ ಎಂಬ ವಿಚಾರಕ್ಕೆ ಕಿಡಿ ಕಾರಿದ ಅವರು, ಕಾಂಗ್ರೆಸ್ ಗೆ ಅಂಕಿ ಅಂಶದ ಮೇಲೆ ನಂಬಿಕೆ ಇಲ್ಲ. ಪಾದಾಯಾತ್ರೆ ಮಾಡುವ ಎಷ್ಟು ಜನರಿಗೆ ಪಾಸಿಟಿವ್ ಬಂತು. ಕಾಂಗ್ರೆಸ್ ನಾಯಕರಿಗೆ ಜವಾಬ್ದಾರಿ ಇಲ್ಲ. ಸಲಹೆ ಕೊಡಬೇಕಿದ್ದ ನಾಯಕರೆ ಮಕ್ಕಳ ಜೊತೆ ಸಭೆ ನಡೆಸಿ‌ ಕೊರೊನ ವಿಸ್ತರಣೆ ಮಾಡುತ್ತಾ ಇದ್ದಾರೆ ಎಂದರು.

ನಾಯಕರ ವಿರುದ್ದ ಕ್ರಮ ತೆಗೆದುಕೊಳ್ಳದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿಯಮಾವಳಿಗಳು ಎಲ್ಲರಿಗೂ ಒಂದೆ. ಮೊಕದ್ದಮೆ ಹಾಕಿ ಬಂಧನ ಮಾಡುವುದು ದೊಡ್ಡ ವಿಷ್ಯವಲ್ಲ. ಸರಕಾರ ನಡೆಸಿದ್ದರವರು ಅರ್ಥ ಮಾಡಿಕೊಳ್ಳಬೇಕು. ಆಗ ಇದ್ದ ಕಾಳಜಿ ಈಗ ಯಾಕೆ ವಿಪಕ್ಷಗಳಿಗೆ ಇಲ್ಲ.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನ, ತಮಿಳುನಾಡು, ಕೇರಳದಲ್ಲಿ ಕಟ್ಟುನಿಟ್ಟಿನ‌ ಕ್ರಮ ಜಾರಿ ಇದೆ. ಬಂಧನ ಮಾಡುವುದು ದೊಡ್ಡದಲ್ಲ ಎಂದರು.

ಬೆಂಗಳೂರಿನಲ್ಲಿ ಕೊರೊನ ಹೆಚ್ಚಾದರೆ ಕಾಂಗ್ರೆಸ್ ಕಾರಣ,ಈ ರೀತಿ ರಾಜಕೀಯ ಮೇಲಾಟವನ್ನು ಕಾಂಗ್ರೆಸ್ ಬಿಡಬೇಕು, ಇದರ ಮರುಚಿಂತನೆಯನ್ನು ಕಾಂಗ್ರೆಸ್ ಮಾಡಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next