Advertisement

ಫ‌ಸ್ಟ್‌ ಓಟ್‌ ಬೆಸ್ಟ್‌ ಓಟ್‌

11:51 AM Apr 19, 2019 | Team Udayavani |

ಮೊದಲ ಬಾರಿಗೆ ತುಂಬಾ ಉತ್ಸುಕನಾಗಿ ಓಟ್‌ ಮಾಡಿದೆ. ಇವಿಎಂ ಒತ್ತಿದ ನಂತರ ವಿವಿಪ್ಯಾಟ್‌ ನಲ್ಲಿ ತಕ್ಷಣ ಚೀಟಿ ಬರಲಿಲ್ಲ. ನಂತರ ಬಂತು. ನನಗೆ ಖುಷಿಯಾಗಿದೆ.
● ಎ.ಎಸ್‌.ಮೋಹನ್‌, ವಿದ್ಯಾರ್ಥಿ.

Advertisement

ಮೊದಲ ಬಾರಿಗೆ ಇವಿಎಂ ನೋಡಿದಾಗ ಯಾರಿಗೆ ಓಟ್‌ ಮಾಡಬೇಕೆಂದು ತಿಳಿಯಲಿಲ್ಲ. ಒಂದು ಸೆಕೆಂಡ್‌ ಯೋಚಿಸಿ ಸೂಕ್ತ ಅಭ್ಯರ್ಥಿಗೆ ಇವಿಎಂ ಗುಂಡಿ ಒತ್ತಿದೆ.
●ಡಿ.ಸಾಧ್ವಿಕಾ, ವಿದ್ಯಾರ್ಥಿನಿ.

ಮೊದಲ ಬಾರಿಗೆ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗಿರುವುದಕ್ಕೆ ಸಂತಸವಾಗುತ್ತಿದೆ. ಕುಟುಂಬದವರೊಂದಿಗೆ ಹೋಗಿ ಹಕ್ಕು ಚಲಾವಣೆ ಮಾಡಿದ ಸಂಭ್ರಮವಿದೆ.
●ಕೆ.ಎಸ್‌.ಸಿಂಚನ, ವಿದ್ಯಾರ್ಥಿನಿ.

ಮತಗಟ್ಟೆಗೆ ಹೋಗುವವರೆಗೂ ಗೊಂದಲವಿತ್ತು. ಅಭ್ಯರ್ಥಿಗಳು ಮತ್ತು ಅವರ ಪಕ್ಷ, ಚಿಹ್ನೆ ಎಲ್ಲವೂ ಇವಿಎಂನಲ್ಲಿ ಹೇಗೆ ಜೋಡಿಸಿ ದ್ದಾರೆ, ನೋಡಿ ನನಗೆ ಖುಷಿಯಾಯಿತು.
●ಅಮೋಘ…, ವಿದ್ಯಾರ್ಥಿ

ಮೊಟ್ಟ ಮೊದಲು ಓಟ್‌ ದೇಶಕ್ಕಾಗಿ ಹಾಕಿದ್ದು ನನ್ನಲ್ಲಿ ಹೆಮ್ಮೆ ಮೂಡಿಸಿದೆ. ಹಕ್ಕು ಚಲಾವಣೆ ರಾಜ್ಯ, ದೇಶದ ಭವಿಷ್ಯ ಉತ್ತಮ ಗೊಳಿಸುವ ನಂಬಿಕೆ ಜನರಲ್ಲಿ ಬರಬೇಕಿದೆ.
●ನಿತಿನ್‌, ವಿದ್ಯಾರ್ಥಿ.

Advertisement

ನೋಟ ಆಯ್ಕೆ ಇವಿಎಂನಲ್ಲಿ ಹೇಗೆ ನಮೂದಿಸಿರುತ್ತಾರೆ ಎಂದು ತಿಳಿಯುವ ಕುತೂಹಲ ಪೂರ್ಣಗೊಂಡಿತು. ಮೊದಲ ಬಾರಿಗೆ ಮತ ಚಲಾಯಿಸಿ ಪುನೀತನಾದೆ.
●ಭರತ್‌, ವೈದ್ಯಕೀಯ ವಿದ್ಯಾರ್ಥಿ.

ತಂಗಿಯೊಂದಿಗೆ ಹೋಗಿ ತೋರು ಬೆರಳಿಗೆ ಮೊದಲ ಬಾರಿಗೆ ಮಸಿ ಬಳಿದುಕೊಂಡು ಖುಷಿಪಟ್ಟೆ. ಆಧಾರ್‌
ಕಾರ್ಡ್‌ ಮತ್ತು ಓಟರ್‌ ಐಡಿ ತೆಗೆದುಕೊಂಡು ಹೋಗುವುದು ತಿಳಿಯದೆ ಗೊಂದಲವಾಯಿತು.
●ದೀಕ್ಷಿತ್‌, ವಿದ್ಯಾರ್ಥಿ.

ಮತ ಚಲಾಯಿಸುವುದರ ಬಗ್ಗೆ ಬಹಳ ದಿನಗಳಿಂದ ಕುತೂಹಲವಿತ್ತು. ಕಳೆದ ಒಂದುವಾರದಿಂದ ಮತದಾನ ಮಾಡುವುದರ ಬಗ್ಗೆ ಮನೆಯವರನ್ನು ಕೇಳಿ ತಿಳಿದು ಕೊಂಡಿದ್ದೆ. ಈಗ ಸಂತಸವಾಗಿದೆ.
●ಎಚ್‌.ಎನ್‌.ರಮೇಶ್‌, ವಿದ್ಯಾರ್ಥಿ

ಮೊದಲ ಬಾರಿ ಮತದಾನ ಮಾಡುತ್ತಿರುವುದರಿಂದ ಸಹಜವಾಗೇ ಗೊಂದಲವಿತ್ತು. ಹೇಗೆ ಮತದಾನ
ಮಾಡುವುದು ಎನ್ನುವುದು ಗೊತ್ತಿರಲಿಲ್ಲ. ಮತದಾನ ಮಾಡಿದ್ದು ಖುಷಿಯಾಗಿದೆ.
●ನರಸಿಂಹ ಮೂರ್ತಿ, ವಿದ್ಯಾರ್ಥಿ

ನಮ್ಮ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ಕುತೂಹಲವಿತ್ತು.
ಅತ್ಯಂತ ಜಾಣ್ಮೆಯಿಂದ ಆಯ್ಕೆ ಮಾಡಿದ್ದೀನಿ ಎನ್ನುವ ವಿಶ್ವಾಸವಿದೆ.
●ಮಂಜುನಾಥ್‌, ವಿದ್ಯಾರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next