Advertisement
ಸಂಸ್ಥೆಯ ಇನ್ನೋರ್ವ ಮೈಸ್ ವಿದ್ಯಾರ್ಥಿ ಅದಿತ್ ಮಧುಕರ್ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ¨ªಾರೆ. ಭಾರತ ಸರಕಾರದ ಮಾನ್ಯತೆ ಪಡೆದ ಎನ್‌ಐಒಎಸ್ (ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್) ಶಿಕ್ಷಣ ಸಂಸ್ಥೆ 1991ರಲ್ಲಿ ಆರಂಭಗೊಂಡಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಇದರ ಸಹ ಸಂಸ್ಥೆಗಳಿವೆ. ಇದರ ಮೂಲಕ ದೇಶದ ಎಷ್ಟೋ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ (ಸೆಕೆಂಡರಿ), 12ನೇ ತರಗತಿ (ಸೀನಿಯರ್ ಸೆಕೆಂಡರಿ) ಪರೀಕ್ಷೆಯನ್ನು ಎನ್‌ಐಒಎಸ್ ಮೂಲಕ ಬರೆದು ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಿದೆ.
ಬಿಸಿನೆಸ್ ಸ್ಟಡೀಸ್, ಭಾರತದ ಸಂಸ್ಕೃತಿ ಮತ್ತು ನಾಗರಿಕತೆ, ಅಕೌಂಟೆನ್ಸಿ, ಸಮಾಜಶಾಸ್ತ್ರ, ಪೈಂಟಿಂಗ್, ಹೋಮ್‌ಸೈನ್ಸ್, ಡೇಟಾ ಎಂಟ್ರಿ ಇವುಗಳಲ್ಲಿ ಕನಿಷ್ಠ 4 ವಿಷಯ ಮತ್ತು ಭಾಷಾ ವಿಷಯದಲ್ಲಿ ಕನಿಷ್ಠ 1 ವಿಷಯ ಆಯ್ಕೆ ಮಾಡಿ ಒಟ್ಟಿಗೆ 5 ಪಠ್ಯ ವಿಷಯಗಳಲ್ಲಿ ಮೆಟ್ರಿಕ್ ಶಿಕ್ಷಣವನ್ನು ಸುಲಭದಲ್ಲಿ ಪೂರ್ತಿಗೊಳಿಸಬಹುದು. ಇದೇ ರೀತಿಯಲ್ಲಿ 12ನೇ ತರಗತಿಯಲ್ಲಿ ಸಹ ಕನಿಷ್ಠ 5 ವಿಷಯ ಆಯ್ಕೆ ಮಾಡಬಹುದು. ಇಲ್ಲಿಯೂ ಕೂಡ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಬಹುದು. ಭಾಷಾ ಮಾಧ್ಯಮದಲ್ಲಿ ಇಂಗ್ಲಿಷ್, ಕನ್ನಡ, ಹಿಂದಿ ಮತ್ತಿತರ ಭಾಷೆಗಳಲ್ಲೂ ಬರೆಯುವ ಅವಕಾಶವಿದೆ. ಈ ಎಲ್ಲ ಅನುಕೂಲತೆಗಳು ಇಲ್ಲಿ ಲಭ್ಯ. ಎನ್‌ಐಒಎಸ್ ಸರ್ಟಿಫಿಕೆಟ್‌ನಿಂದ ದೇಶ-ವಿದೇಶದ ಎಲ್ಲ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯಬಹುದು.
Related Articles
Advertisement
ವಿದ್ಯೆ ಎಲ್ಲರ ಹಕ್ಕು, ಎಲ್ಲ ಮಕ್ಕಳಿಗೆ ಅವರ ಇಚ್ಛಾನುಸಾರವಾಗಿ ಕಲಿಯಲು ಅವಕಾಶ ಕಲ್ಪಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಮಕ್ಕಳು ಮಾನಸಿಕವಾಗಿ ನೊಂದು ಶಾಲೆ ಬಿಟ್ಟರೆ ಅವರ ವಿದ್ಯಾಭ್ಯಾಸ ಕುಂಠಿತವಾಗಬಾರದು. ಈ ಉದ್ದೇಶದಿಂದ ಉಡುಪಿ ಪರಿಸರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಂಸ್ಥೆ ಈ ಕಾರ್ಯವನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಉಡುಪಿಯ ಮೈಸ್ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲೆ ಸುಪ್ರೀತಾ ಅಮೀನ್ ತಿಳಿಸಿದ್ದಾರೆ.