Advertisement

Rajasthan New CM: ಭಜನ್ ಲಾಲ್ ಶರ್ಮಾಗೆ ‘ರಾಜ’ ಪಟ್ಟ

04:34 PM Dec 12, 2023 | keerthan |

ಜೈಪುರ: ಭಾರತೀಯ ಜನತಾ ಪಕ್ಷದ ಮತ್ತೊಂದು ಅಚ್ಚರಿಯ ನಡೆಯಲ್ಲಿ ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ನೇಮಕವಾಗಿದ್ದಾರೆ.

Advertisement

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಗೆಲುವು ಸಾಧಿಸಿತ್ತು. ಕೆಲವು ದಿನಗಳ ಆಯ್ಕೆ ಕಸರತ್ತಿನ ಬಳಿಕ ಇಂದು ಬಿಜೆಪಿ ವರಿಷ್ಠರು ಭಜನ್ ಲಾಲ್ ಶರ್ಮಾ ಅವರನ್ನು ನೂತನ ಸಿಎಂ ಆಗಿ ಆಯ್ಕೆ ಮಾಡಿದ್ದಾರೆ.

56 ವರ್ಷದ ಭಜನ್ ಲಾಲ್ ಶರ್ಮಾ ಅವರು ಸಂಗನೆರ್ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಮೊದಲ ಅವಕಾಶದಲ್ಲಿಯೇ ಅವರು ಸಿಎಂ ಸ್ಥಾನಕ್ಕೇರಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಭೈರ್ವಾ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next