Advertisement

ಯಲ್ಲಾಪುರಕ್ಕೆ ಪ್ರಥಮ ಬಾರಿ ಸಚಿವ ಭಾಗ್ಯ

04:20 PM Feb 07, 2020 | Team Udayavani |

ಯಲ್ಲಾಪುರ: ಮೂರು ಬಾರಿ ಯಲ್ಲಾಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಶಿವರಾಮ ಹೆಬ್ಟಾರ ಸಚಿವರಾಗುವ ಮೂಲಕ ಈ ಕ್ಷೇತ್ರದ ಹಾಗೂ ತಾಲೂಕಿಗೆ ಪ್ರಥಮ ಸಚಿವ ಪಟ್ಟ ದೊರೆತಿದೆ.

Advertisement

2008 ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಜೆಪಿ ಅಭ್ಯರ್ಥಿ ವಿ.ಎಸ್‌.ಪಾಟೀಲ ವಿರುದ್ಧ ಸೋತಿದ್ದ ಹೆಬ್ಟಾರ್‌, 2013 ರಲ್ಲಿ ಪಾಟೀಲರನ್ನು 24,000 ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ಬೀಗಿದ್ದರು. 2018 ರ ಚುನಾವಣೆಯಲ್ಲಿ ವಿ.ಎಸ್‌. ಪಾಟೀಲ ವಿರುದ್ಧ ಮೂರನೇ ಬಾರಿ ಸ್ಪರ್ಧಿಸಿ ಕೇವಲ 1435 ಮತಗಳ ಅಂತರದಿಂದ ಗೆದ್ದ ಹೆಬ್ಟಾರ್‌, ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನರ್ಹಗೊಂಡು, ಬಿಜೆಪಿ ಸೇರಿದರು.

ಕ್ಷೇತ್ರದ ಉಪಚುನಾವಣೆಗೂ ಕಾರಣರಾದರು. 2019 ಡಿಸೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ 31406 ಭಾರೀ ಮತಗಳ ಅಂತರದ ಭಾರಿ ವಿಜಯ ಸಾಧಿಸಿದರು.

ಮೂಲತಃ ಕುಮಟಾ ನವಿಲಗೋಣದವರಾದ ಹೆಬ್ಟಾರ್‌, ಮಹಾಬಲೇಶ್ವರ ಹೆಬ್ಟಾರ್‌ ಅವರ 8 ನೇ ಮಗ. ಧರ್ಮ ಶಾಲಾದಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಸ್ಥಿತಿವಂತರಾಗಿದ್ದ ಇವರ ಕುಟುಂಬ ಅಂಕೋಲಾ ತಾಲೂಕಿನ ಶೇವ್ಕಾರದಲ್ಲಿಯೂ ಜಮೀನುಹೊಂದಿತ್ತು. ಶಿಕ್ಷಣ ಮುಗಿಸಿದ ನಂತರ ಶಿವರಾಮ ಹೆಬ್ಟಾರ್‌ 1979 ರಲ್ಲಿ ಸ್ವಂತ ಲಾರಿ ಖರೀದಿಸಿ, ಚಾಲಕರಾಗಿಯೂ ಶ್ರಮಪಟ್ಟಿದ್ದರು. ಚಿಕ್ಕ ವಯಸ್ಸಿನಿಂದಲೇ ಸಂಘಟನೆಯಲ್ಲಿಯೂ ತೊಡಗಿದ್ದರು. ಪ್ರಥಮವಾಗಿ ಎಪಿಎಂಸಿ ಚುನಾವಣೆಯಲ್ಲಿ ಇಡಗುಂದಿ ಭಾಗದ ಜನತಾ ಪಕ್ಷದ ಅಭ್ಯರ್ಥಿಯಾಗಿ ನಿಂತು ಗೆದ್ದು ನಿರ್ದೇಶಕರಾಗಿದ್ದರು.

ಮೊದಲು ಎಪಿಎಂಸಿ ಅಧ್ಯಕ್ಷರಾಗಿ, ನಂತರ ಕೆಡಿಸಿಸಿ, ಅಪೆಕ್ಸ್‌ ಬ್ಯಾಂಕ್‌ ಸೇರಿದಂತೆ ವಿವಿಧ ಸಹಕಾರಿ ಸಂಘಗಳ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದರು. ಬಿಜೆಪಿಯಿಂದ ಹೊರ ಬಂದು ಕಾಂಗ್ರೆಸ್‌ ಸೇರಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ ಮತ್ತೆ ಬಿಜೆಪಿ ಸೇರಿ ಗೆಲ್ಲುವ ಮೂಲಕ ಮಂತ್ರಿಯಾಗಿ ಬಡ್ತಿ ಪಡೆದಿದ್ದಾರೆ.

Advertisement

ಹಲವು ಪ್ರಥಮಗಳ ಸರದಾರ: ಯಲ್ಲಾಪುರ ಕ್ಷೇತ್ರ ರಚನೆಯಾದ ನಂತರ ಪ್ರಥಮ ಬಾರಿ ಸ್ಪರ್ಧಿಸಿ ಪ್ರಥಮ ಸೋಲು ಕಂಡಿದ್ದರು. ನಂತರ 2013 ರಲ್ಲಿ ಆಯ್ಕೆಯಾಗುವ ಮೂಲಕ ಯಲ್ಲಾಪುರ ಕ್ಷೇತ್ರದಲ್ಲಿ ಶಾಸಕರಾದಪ್ರಥಮ ವ್ಯಕ್ತಿ ಎನಿಸಿದರು. 2018 ರಲ್ಲಿ ಎರಡನೇ ಬಾರಿ ಆಯ್ಕೆಯಾದ ಹೆಬ್ಟಾರ ವಾಕರಸಾ ನಿಗಮದ ಅಧ್ಯಕ್ಷರಾಗುವ ಮೂಲಕ ನಿಗಮ ಮಂಡಳಿಗೆ ಆಯ್ಕೆಯಾದ ಯಲ್ಲಾಪುರದ ಮೊದಲಿಗರಾದರು. ಒಂದೂವರೆ ವರ್ಷದ ನಂತರ ರಾಜೀನಾಮೆ ನೀಡಿ ಕ್ಷೇತ್ರಕ್ಕೆ ಪ್ರಥಮ ಬಾರಿ ಉಪಚುನಾವಣೆ ಮಾಡಿಸಿದರು. ಕ್ಷೇತ್ರದಲ್ಲಿ ಅನರ್ಹರಾದ ಮೊದಲ ಶಾಸಕರೆನಿಸಿದರು. ಸಚಿವರಾದ ಯಲ್ಲಾಪುರ ತಾಲೂಕಿನ, ಕ್ಷೇತ್ರದ ಮೊದಲ ಶಾಸಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next