Advertisement

ಉಲ್ಟಾ ಹೊಡೆದ ಪಾಕ್‌, ಉಗ್ರ ಪಟ್ಟಿಯಲ್ಲಿ ಪಾತಕಿ ದಾವೂದ್‌ ಹೆಸರು!

10:18 AM Aug 24, 2020 | Nagendra Trasi |

ಇಸ್ಲಾಮಾಬಾದ್‌: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸೇರಿದಂತೆ 88 ನಿಷೇಧಿತ ಉಗ್ರ ಸಂಘಟನೆಗಳು ಹಾಗೂ ಅದರ ನಾಯಕರನ್ನು ಪಾಕಿಸ್ತಾನ ಸರ್ಕಾರವು ಹೊಸ ‘ಉಗ್ರ ನಿರ್ಬಂಧ ಪಟ್ಟಿ’ಗೆ ಸೇರಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ 1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್‌ ತನ್ನ ನೆಲದಲ್ಲೇ ಇದ್ದಾನೆ ಎಂಬುದನ್ನು ಪಾಕ್‌ ಒಪ್ಪಿಕೊಂಡಂತಾಗಿದೆ.

Advertisement

ಆತ ಎಲ್ಲಿದ್ದಾನೆಂದು ಗೊತ್ತೇ ಇಲ್ಲ ಎಂದು ಹಲವು ವರ್ಷಗಳಿಂದಲೂ ಹೇಳಿಕೊಂಡೇ ಬಂದಿದ್ದ ಪಾಕಿಸ್ತಾನ ಈಗ ಉಗ್ರ ನಿರ್ಬಂಧದ ಪಟ್ಟಿಗೆ ಆತನ ಹೆಸರನ್ನೂ ಸೇರಿಸಿರುವುದು ಆ ದೇಶದ ನಿಜ ಬಣ್ಣವನ್ನು ಬಯಲು ಮಾಡಿದೆ. ಈ ಕುರಿತು ಭಾರತದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ, ಭಾನುವಾರ ಉಲ್ಟಾ ಹೊಡೆದಿರುವ ಪಾಕ್‌ ಸರ್ಕಾರ, ದಾವೂದ್‌ ಪಾಕಿಸ್ತಾನದಲ್ಲಿಲ್ಲ. ವಿಶ್ವಸಂಸ್ಥೆ

ಒದಗಿಸಿದ ವಿವರಗಳ ಅನ್ವಯ 88 ಸಂಘಟನೆಗಳು ಹಾಗೂ ನಾಯಕರನ್ನು ನಿರ್ಬಂಧದ ಪಟ್ಟಿಗೆ ಸೇರಿಸಿದ್ದೇವೆ ಅಷ್ಟೆ ಎಂದು ಸ್ಪಷ್ಟನೆ ನೀಡಿದೆ.

ಕಪ್ಪುಪಟ್ಟಿಯಿಂದ ತಪ್ಪಿಸಿಕೊಳ್ಳಲು ಕ್ರಮ: ಅಂತಾರಾಷ್ಟ್ರೀಯ ಹಣಕಾಸು ರ್ಯಪಡೆ(ಎಫ್ಎಟಿಎಫ್)ಯ ಕಪ್ಪು ಪಟ್ಟಿಗೆ ಸೇರುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನ ತರಾತುರಿಯಲ್ಲಿ ಈ ಕ್ರಮ ಕೈಗೊಂಡಿದೆ. ಹಣಕಾಸು ಕಾರ್ಯಪಡೆಯು ವಿಧಿಸಿರುವ ನಿರ್ದೇಶನ ಗಳನ್ನು ಅಕ್ಟೋಬರ್‌ ತಿಂಗಳೊಳಗೆ ಪಾಲಿಸದೇ ಇದ್ದರೆ, ಪಾಕಿಸ್ತಾನವನ್ನು ಎಫ್ ಎಟಿಎಫ್ ಕಪ್ಪುಪಟ್ಟಿಗೆ ಸೇರಿಸುತ್ತದೆ.

ಈಗಾಗಲೇ ಉತ್ತರ ಕೊರಿಯಾ ಮತ್ತು ಇರಾನ್‌ ಇದೇ ರೀತಿ ಕಪ್ಪು ಪಟ್ಟಿಗೆ ಸೇರಿವೆ. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಡಾಯೆಷ್‌, ಅಲ್‌ಖೈದಾ, ತಾಲಿಬಾನ್‌ ಸೇರಿದಂತೆ 88 ಉಗ್ರ ಸಂಘಟನೆಗಳು ಹಾಗೂ ಹಫೀಜ್‌ ಸಯೀದ್‌, ಮಸೂದ್‌ ಅಜರ್‌, ಮುಲ್ಲಾ ಫ‌ಜುಲ್ಲಾ, ಝಕೀವುರ್‌ ರೆಹಮಾನ್‌ ಲಖ್ವಿ, ಜಲಾಲುದ್ದೀನ್‌ ಹಖಾನಿ, ದಾವೂದ್‌ ಇಬ್ರಾಹಿಂ ಸೇರಿ ದಂತೆ ಹಲವು ಉಗ್ರರನ್ನು ಪಾಕ್‌ ನಿರ್ಬಂಧದ ಪಟ್ಟಿಗೆ ಸೇರಿಸಿದೆ. ಜತೆಗೆ, ಈ ಎಲ್ಲರ ಚರ-ಸ್ಥಿರ ಆಸ್ತಿಗಳು, ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ.

Advertisement

ಸುಳ್ಳು ಹೇಳುತ್ತಾ ಬಂದಿದ್ದ ಪಾಕ್‌:

2003ರಲ್ಲಿ ಅಮೆರಿಕವು ದಾವೂದ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಿತ್ತು. ಅಂದಿನಿಂದ ಇಂದಿನವರೆಗೂ ಭಾರತವು ದಾವೂದ್‌ನನ್ನು ಹಸ್ತಾಂತರಿಸುವಂತೆ ಹಲವು ಬಾರಿ ಪಾಕಿಸ್ತಾನಕ್ಕೆ ಮನವಿ ಸಲ್ಲಿಸಿದೆ. ಅಲ್ಲದೆ, ಆತ ಕರಾಚಿಯಲ್ಲಿರುವ ಮಾಹಿತಿಯಿದೆ ಎಂದೂ ಹೇಳಿತ್ತು. ಆದರೆ, ಪಾಕ್‌ ಮಾತ್ರ ದಾವೂದ್‌ ನಮ್ಮ ನೆಲದಲ್ಲಿಲ್ಲ ಎಂದೇ ಹೇಳಿಕೊಂಡು ಬಂದಿತ್ತು.

ದಾವೂದ್‌ಗೆ 3 ಬಂಗಲೆ, ಹಲವು ಪಾಸ್‌ಪೋರ್ಟ್‌!

ಪಾಕಿಸ್ತಾನದ ನಿರ್ಬಂಧದ ಪಟ್ಟಿಯಲ್ಲಿನ ಮಾಹಿತಿಯಂತೆ ಪಾತಕಿ ದಾವೂದ್‌ ಇಬ್ರಾಹಿಂ ಹಲವು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದು, ಆತನಿಗೆ ಪಾಕಿಸ್ತಾನ ದಲ್ಲಿಯೇ 3 ಬಂಗಲೆಗಳಿವೆ. ಅಲ್ಲದೆ, ಕೋಟಿಗಟ್ಟಲೆ ವಹಿವಾಟಿನ ಅಕ್ರಮ ಉದ್ದಿಮೆಗಳನ್ನೂ ಆತ ನಡೆಸುತ್ತಿದ್ದಾನೆ. ಕರಾಚಿಯ ವೈಟ್‌ಹೌಸ್‌ನಲ್ಲಿ, ರಕ್ಷಣಾ ಗೃಹ ನಿರ್ಮಾಣ ಪ್ರಾಧಿಕಾರದ ಮನೆಗಳಿ ರುವ ಸ್ಥಳದಲ್ಲಿ ಮತ್ತು ನೂರ್‌ಬಾದ್‌ ಎಂಬಲ್ಲಿ ಈತನ ಬಂಗಲೆಗಳಿವೆ.

ಪಾಕಿಸ್ತಾನ ಸರ್ಕಾರವೇ ಆತನಿಗೆ 5 ಪಾಸ್‌ಪೋರ್ಟ್‌ಗಳನ್ನು ವಿತರಿಸಿರುವ ಕುರಿತ ವಿವರಣೆಗಳನ್ನೂ ನೀಡಲಾಗಿದೆ. ಇದೇ ವೇಳೆ, ಭಾರತದ ಭದ್ರತಾ ಸಂಸ್ಥೆಗಳ ಮಾಹಿತಿ ಪ್ರಕಾರ, ದಾವೂದ್‌ ಭಾರತ, ಪಾಕ್‌ ಹಾಗೂ ದುಬೈನಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಪಾನ್ಪೋರ್ಟ್‌ ಪಡೆದಿದ್ದಾನೆ. ಭಾರತದ 7, ದುಬೈನ 2, ಪಾಕ್‌ನ 5 ಪಾಸ್‌ಪೋರ್ಟ್‌ಗಳನ್ನು ಆತ ಹೊಂದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next