Advertisement
ಅರಮನೆ ಆವರಣದಲ್ಲಿ ಉಳಿದುಕೊಂಡಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಎಲ್ಲಾ 14 ಆನೆಗಳಿಗೂ ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇಬ್ರಿಡ್ಜ್ ನಲ್ಲಿ ಶುಕ್ರವಾರ ತೂಕ ಪರೀಕ್ಷೆ ನಡೆಯಿತು.
Related Articles
2ನೇ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಂಡಿರುವ ಭೀಮ ಒಂದು ತಿಂಗಳಲ್ಲಿ ಎಲ್ಲ ಆನೆಗಳಿಗಿಂತ ಬರೋಬ್ಬರಿ 425 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಕಳೆದ ತಿಂಗಳ ತೂಕ ಪರೀಕ್ಷೆಯಲ್ಲಿ 3,950 ಕೆ.ಜಿ ಭಾರವಿದ್ದ ಭೀಮ 4,345 ಕೆ.ಜಿ ತೂಗಿದನು. ಹಾಗಯೇ ಮಹೇಂದ್ರ 4,450 ಕೆ.ಜಿ ತೂಗುವ ಮೂಲಕ 200 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ.
Advertisement
ಉಳಿದಂತೆ ಹೆಣ್ಣಾನೆಗಳಲ್ಲಿ ಕಾವೇರಿ 3,245, ಚೈತ್ರಾ 3,235 ಹಾಗೂ ಲಕ್ಷ್ಮೀ 3,150 ಕೆ.ಜಿ ತೂಕವನ್ನು ಹೊಂದಿವೆ.ಆ.7ರಂದು 2ನೇ ತಂಡದಲ್ಲಿ ಅರಮನೆಗೆ ಆಗಮಿಸಿದ 5 ಆನೆಗಳಿಗೂ ಪರೀಕ್ಷೆ ನಡೆಸಿದ್ದು, ಶ್ರೀರಾಮ 4475, ಸುಗ್ರೀವ 4,785, ಗೋಪಿ 4,460, ಪಾರ್ಥಸಾರಥಿ 3,445 ಹಾಗೂ ಹೆಣ್ಣಾನೆ ವಿಜಯಾ 2,760 ಕೆ.ಜಿ ತೂಗಿದವು. ಗಜಪಡೆಗೆ ಪ್ರತಿವರ್ಷದಂತೆ ವಿಶೇಷ ಆಹಾರ ನೀಡಿದ್ದು, ಎಲ್ಲ ಆನೆಗಳಿಗೂ ತೂಕ ಹೆಚ್ಚಾಗಿದೆ. ಕಾಡಾನೆಯಿಂದ ದಾಳಿಗೊಳಗಾಗಿದ್ದ ಭೀಮ ಆನೆ 425 ಕೆ.ಜಿ ಹೆಚ್ಚಿಸಿಕೊಂಡಿರುವುದು ಸಂತಸ ತಂದಿದೆ. ಎರಡನೇ ತಂಡದ ಆನೆಗಳಿಗೆ ಅರಮನೆ ಆವರಣದಲ್ಲಿಯೇ ತಾಲೀಮು ನೀಡಲಾಗುತ್ತಿದ್ದು, ಸೆ.12ರ ಕುಶಾಲ ತೋಪಿನ ನಂತರ ಅರಮನೆಯಿಂದ ಬನ್ನಿಮಂಟಪದವರೆಗೂ ಎಲ್ಲ 14 ಆನೆಗಳು ನಡಿಗೆ ತಾಲೀಮಿನಲ್ಲಿ ಭಾಗಿಯಾಗಲಿವೆ.
– ಡಾ.ವಿ.ಕರಿಕಾಳನ್, ಡಿಸಿಎಫ್ ವನ್ಯಜೀವಿ ವಿಭಾಗ