Advertisement

ಶರಣ ಮೇಳ: ಪ್ರಥಮ ಬಾರಿಗೆ 111 ಅಡಿ ಉದ್ದದ ಧರ್ಮ ಧ್ವಜ ಮೆರವಣಿಗೆ

09:14 AM Jan 16, 2020 | Mithun PG |

ಕೂಡಲಸಂಗಮ: ಕೂಡಲಸಂಗಮದಲ್ಲಿ ನಡೆದ 33ನೇ ಶರಣ ಮೇಳದ ಕೊನೆಯ ದಿನವಾದ ಮಂಗಳವಾರ ರಾತ್ರಿ ಬಸವಣ್ಣ ಐಕ್ಯ ಮಂಟಪದಿಂದ ಬಸವ ಧರ್ಮ ಪೀಠದ ಮಹಾಮನೆಯವರೆಗೆ ಹಮ್ಮಿಗೊಂಡಿದ್ದ ಪಥ ಸಂಚಲನದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಆಪಾರ ಭಕ್ತರು ವಚನ ನೃತ್ಯ ಮಾಡಿ ಸಂತಸ ಪಟ್ಟರು.

Advertisement

ಪಂಥ ಸಂಚಲನದಲ್ಲಿ ಆನೆಯ ಮೇಲೆ ಬಸವಣ್ಣನವ ಮೂರ್ತಿ, ವಚನ ಸಾಹಿತ್ಯದ ಕಟ್ಟು ಹಾಗೂ ಮಂಜುನಾಥ ಬಂಡಿ ನಿರ್ಮಿಸಿದ ವಿಶ್ವದ ಅತಿ ಉದ್ದದ ಧರ್ಮ ಧ್ವಜದ ಮೇರವಣಿಗೆ ಎಲ್ಲರನ್ನು ಆಕರ್ಷಿಸಿತು. 111 ಅಡಿ ಉದ್ದದ ಕಾವಿ ಬಣ್ಣದ ಧರ್ಮ ಧ್ವಜವನ್ನು ಹಿಡಿದು ಜಯಘೋಷಗಳೊಂದಿಗೆ ಬಸವ ಭಕ್ತರು ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next