Advertisement

ಮೊದಲ ಸ್ಕಾರ್ಪೀನ್‌ ಸಬ್‌ಮರಿನ್‌ ಹಸ್ತಾಂತರ

08:30 AM Sep 22, 2017 | Karthik A |

ಹೊಸದಿಲ್ಲಿ: ಸಬ್‌ಮರಿನ್‌ಗಳ ಕೊರತೆ ಅನುಭವಿಸುತ್ತಿರುವ ಭಾರತೀಯ ನೌಕಾಪಡೆಗೆ ಶೀಘ್ರವೇ ಹೊಸ ಮಾದರಿ ಸ್ಕಾರ್ಪೀನ್‌ ಸಬ್‌ಮರಿನ್‌ ಅನ್ನು ಹಸ್ತಾಂತರಿಸಲಾಗಿದ್ದು, ಅದು ಶೀಘ್ರವೇ ಕಾರ್ಯಾರಂಭ ಮಾಡಲಾಗಿದೆ. ಅದಕ್ಕೆ ಐಎನ್‌ಎಸ್‌ ಕಲ್ವಾರಿ ಎಂದು ಹೆಸರಿಡಲಾಗಿದೆ. ಮಡಗಾಂವ್‌ನ ಹಡಗು ಕಟ್ಟೆಯಲ್ಲಿ ಇದನ್ನ ಹಸ್ತಾಂತರಿಸಲಾಯಿತು. ಬರೋಬ್ಬರಿ 17 ವರ್ಷಗಳ ಬಳಿಕ ಈ ಪ್ರಕ್ರಿಯೆ ನಡೆದಿದೆ. 23,652 ಕೋಟಿ ರೂ. ವೆಚ್ಚದಲ್ಲಿ ‘ಪ್ರಾಜೆಕ್ಟ್ -75’ ಹೆಸರಿನಡಿ ಅದನ್ನು ನಿರ್ಮಿಸಲಾಗುತ್ತಿತ್ತು. ಅದಕ್ಕೆ ಫ್ರಾನ್ಸ್‌ನ ಆರು ಡೀಸೆಲ್‌-ಎಲೆಕ್ಟ್ರಿಕ್‌ ಎಂಜಿನ್‌ಗಳನ್ನು ಅಳವಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next