ಬೆಂಗಳೂರು: ಯುಜಿ ಸಿಇಟಿ-2021ರ ಮೊದಲನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ ಪ್ರಕಟಿಸಿದೆ.
ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಫಾರ್ಮಾ ಸೈನ್ಸ್, ಪಶು ವೈದ್ಯ, ಫಾರ್ಮಸಿ, ನ್ಯಾಚುರೋಪತಿ ಮತ್ತು ಯೋಗ ಸಹಿತ ವಿವಿಧ ಕೋರ್ಸುಗಳ ಪ್ರವೇಶಕ್ಕಾಗಿ ದಾಖಲಿಸಿರುವ ಇಚ್ಛೆ/ಆಯ್ಕೆಯನ್ನು ಪರಿಶೀಲಿಸಿ ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಆಧಾರದಲ್ಲಿ ಮೊದಲನೇ ಸುತ್ತಿನ ಸೀಟು ಹಂಚಿಕೆ ಮಾಡಲಾಗಿದೆ.
ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ನಾಲ್ಕು ಆಯ್ಕೆಗಳಿರುತ್ತವೆ. ತಮಗೆ ಸೂಕ್ತವಾದದನ್ನು ಆಯ್ಕೆ ಮಾಡಿಕೊಳ್ಳಬೇಕು. ನ.29ರ ಪೂರ್ವಾಹ್ನ 11ರಿಂದ ಡಿ.1ರ ಸಂಜೆ 5.30ರ ವರೆಗೆ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
ಇದನ್ನೂ ಓದಿ:ಹೊಸ ರೂಪಾಂತರಿಯಿಂದ ಆತಂಕ : ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ
ನ.30ರಿಂದ ಡಿ.2ರ ವರೆಗೆ ಶುಲ್ಕ ಪಾವತಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು. ಡಿ.3ರಂದು ಸಂಜೆ 5.30ರೊಳಗೆ ಪ್ರವೇಶ ಪಡೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ ಎಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.