Advertisement

ಸಹ್ಯಾದ್ರಿಯ ಅಸ್ಮತ್‌ ಶರ್ಮೀನ್‌ಗೆ ಪ್ರಥಮ ರ್‍ಯಾಂಕ್‌, 13 ಚಿನ್ನದ ಪದಕ

02:11 AM Apr 01, 2021 | Team Udayavani |

ಮಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ನಡೆಸಿದ ಪರೀಕ್ಷೆಗಳಲ್ಲಿ ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ನ ಅಸ್ಮತ್‌ ಶರ್ಮೀನ್‌ ಟಿ.ಎಸ್‌. ಅವರು ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ.

Advertisement

9.42ರ ಸಿಜಿಪಿಎ ಗಳಿಸಿರುವ ಅಸ್ಮತ್‌ ಒಟ್ಟು 13 ಚಿನ್ನದ ಪದಕಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಎ. 3ರಂದು ಬೆಳಗಾವಿಯ ವಿಟಿಯುನಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಅವರು ಕುಲಾಧಿಪತಿ ವಜುಭಾç ವಾಲಾ ಅವರಿಂದ ಪದವಿ ಮತ್ತು ಪದಕಗಳನ್ನು ಸ್ವೀಕರಿಸಲಿದ್ದಾರೆ.

ಬೆಳಗಾವಿಯ ವಿಟಿಯು 203 ಅಂಗಸಂಸ್ಥೆಗಳಲ್ಲಿ ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಅಸ್ಮತ್‌  ಅವರು ಸಹ್ಯಾದ್ರಿ ಕಾಲೇಜ್‌

ಆಫ್‌ ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ಗೆ ಪ್ರಶಸ್ತಿಗಳನ್ನು ತಂದಿದ್ದಾರೆ. ಪ್ರಸ್ತುತ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿ ದ್ದಾರೆ. ಅವರು ಕಾಸರಗೋಡಿನ ಶರೀಫ್‌ – ಶಹೀದಾ ದಂಪತಿಯ ಪುತ್ರಿ.

ಚಿನ್ನದ ಪದಕಗಳು :

Advertisement

ಅಸ್ಮತ್‌ ಪಡೆದ ಚಿನ್ನದ ಪದಕಗಳೆಂದರೆ ಶ್ರೀ ನಿಜಗುನಪ್ಪ ಗುರುಲಿಂಗಪ್ಪ ಹಕ್ಕಪಕ್ಕಿ ಚಿನ್ನದ ಪದಕ, ಆರ್‌.ಎನ್‌. ಶೆಟ್ಟಿ ಚಿನ್ನದ ಪದಕ, ಸರ್‌.ಎಂ. ವಿಶ್ವೇಶ್ವರಯ್ಯ ಸಹಕಾರ ಬ್ಯಾಂಕ್‌ ಚಿನ್ನದ ಪದಕ, ಎನ್‌. ಕೃಷ್ಣಮೂರ್ತಿ ಸ್ಮಾರಕ ಚಿನ್ನದ ಪದಕ, ಜೈನ ವಿಶ್ವವಿದ್ಯಾಲಯದ ಚಿನ್ನದ ಪದಕ, ಡಾ| ಎಂ.ಸಿ. ಶ್ರೀನಿವಾಸ್‌ ಮೂರ್ತಿ ಸ್ಮಾರಕ ನಗದು ಪ್ರಶಸ್ತಿ, ಎರ್‌.ಎಚ್‌.ಎಸ್‌. ಸಿದ್ದಲಿಂಗಯ್ಯ ಸಿವಿಲ್‌ ಎಂಜಿನಿಯರಿಂಗ್‌ ಸ್ಮಾರಕ ಪ್ರಶಸ್ತಿ (ನಗದು ಪ್ರಶಸ್ತಿ), ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಸಿಲ್ವರ್‌ ಜುಬಿಲಿ ಚಿನ್ನದ ಪದಕ, ಜ್ಯೋತಿ ಚಿನ್ನದ ಪದಕ, ಮೂರ್ತಿ ಪದಕ ಶ್ರೇಷ್ಠತೆ, ಶ್ರೀ. ಎಸ್‌. ಜಿ. ಬಾಳೇಕುಂದ್ರಿ ಚಿನ್ನದ ಪದಕ, ವಿಟಿಯು ಚಿನ್ನದ ಪದಕ ಮತ್ತು ಡಾ| (ಶ್ರೀಮತಿ) ಮಾಲತಿ ಕೇಸರಿ ಚಿನ್ನದ ಪದಕ.

ಧೀರಜ್‌ ಎಂಟನೇ ರ್‍ಯಾಂಕ್‌ :

ಕಾಲೇಜಿನ ಧೀರಜ್‌ ಎಂ. 2019-20ನೇ ಸಾಲಿನ ಎಂಬಿಎ ಪದವಿಯಲ್ಲಿ 8ನೇ ರಾಂಕ್‌ ಗಳಿಸಿದ್ದಾರೆ. ಅವರು 8.57ರ ಸಿಜಿಪಿಎ ಗಳಿಸಿದರು. ಅವರು ಪ್ರಸ್ತುತ ಕೆಪಿಎಂಜಿ ಜಿಡಿಸಿಯಲ್ಲಿ ಆಡಿಟ್‌ ಅಸೋಸಿಯೇಟ್‌ ಆಗಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಅಧ್ಯಾಪಕ ಸದಸ್ಯರು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾ ಸಿದ್ದಾರೆ.

ವಿಷಯವನ್ನು ಅರ್ಥೈಸಿ ಕೊಂಡು ಕಲಿಯುವುದು ಎಂಜಿನಿಯರಿಂಗ್‌ ಶಿಕ್ಷಣದಲ್ಲಿ ಅತಿ ಮುಖ್ಯ. ಪಾಠ ಮಾಡಿದ್ದನ್ನು ಮತ್ತು ನೋಟ್ಸ್‌ ಬರೆದದ್ದನ್ನು ಪ್ರತೀದಿನ ಮತ್ತು ಪರೀಕ್ಷೆಯ ಸಮಯದಲ್ಲಿ ಪುನರ್ಮನನ ಮಾಡಬೇಕು. ಉಪನ್ಯಾಸಕರಿಂದಲೂ ಉತ್ತಮ ಮಾರ್ಗದರ್ಶನ ದೊರೆತಿದೆ. ಸ್ವಯಂ ಅಧ್ಯಯನಕ್ಕೂ ಮಹತ್ವ ನೀಡಿದ್ದೇನೆ. ಇವೆಲ್ಲದರ ಪ್ರತಿಫಲವಾಗಿ ಪ್ರಥಮ ರ್‍ಯಾಂಕ್‌ ಬಂದಿದೆ. ಅಸ್ಮತ್‌ ಶರ್ಮೀನ್‌ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next