Advertisement

ಕಾಫಿನಾಡು ಚಿಕ್ಕಮಗಳೂರಲ್ಲಿ ವರ್ಷದ ಮೊದಲ ಮಳೆ…ಜನ ಫುಲ್‌ ಖುಷ್‌

04:41 PM Mar 14, 2023 | Team Udayavani |

ಚಿಕ್ಕಮಗಳೂರು : ಕಾಫಿನಾಡಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಬಿಸಿಲಿನಿಂದ ತತ್ತರಿಸಿದ್ದ ಮಲೆನಾಡಿಗೆ ವರುಣದೇವ ತಂಪೆರೆದಿದ್ದಾನೆ. ಕಳಸ ತಾಲೂಕಿನ ಹೊರನಾಡು ಸುತ್ತಮುತ್ತ ಮಧ್ಯಾಹ್ನದ ನಂತರ ಉತ್ತಮ ಮಳೆಯಾಗಿದೆ. ಬಲಿಗೆ, ಹೊರನಾಡು, ಕಳಸ, ಹೊನ್ನೆ ಕಾಡು ಮುನ್ನುರ್ ಪಾಲ್, ಹಳುವಳ್ಳಿಯಲ್ಲಿ ಮಳೆಯಿಂದ ಮಲೆನಾಡಿಗರಲ್ಲಿ ಸಂತಸ ತಂದಿದೆ.

Advertisement

ಮಳೆಗಾಗಿ ನಾಳೆ ಕಳಸೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗೆ ಸ್ಥಳಿಯರು ಮುಂದಾಗಿದ್ದರು. ಪೂಜೆಗೂ ಮುನ್ನ ವರ್ಷದ ಮೊದಲ ವರುಣ ಸಿಂಚನವಾಗಿದೆ.  ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ವರ್ಷದ ಮೊದಲ ಮಳೆಗೆ ಜನ ಫುಲ್‌ ಖುಷ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next