Advertisement

ಜ.15ರಿಂದ ಪ್ರಥಮ ಪಿಯುಸಿ, 9 ನೇ ತರಗತಿ ಆರಂಭಿಸುವ ಸಾಧ್ಯತೆ: ಸುರೇಶ್ ಕುಮಾರ್

05:21 PM Dec 31, 2020 | Team Udayavani |

ಬೆಂಗಳೂರು: ಜನವರಿ 15 ರ ನಂತರ ಪ್ರಥಮ ಪಿಯುಸಿ ಹಾಗೂ 9 ನೇತರಗತಿ ಆರಂಭಿಸಲು ತಜ್ಞರ ಸಲಹೆ ಪಡೆದು ತೀರ್ಮಾನ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

Advertisement

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಲೆ ತೆರೆಯುವುದು ಅಗ್ನಿಪರೀಕ್ಷೆಯಲ್ಲ. ಇದು ನಮ್ಮ ಕರ್ತವ್ಯ. ಇದು ಪ್ರತಿಷ್ಠೆಯಲ್ಲ. ನಮ್ಮ ಜವಾಬ್ದಾರಿಯಾಗಿದೆ ಎಂದರು.

ವಿದ್ಯಾಗಮ ಆರಂಭ ಮಾಡುವ ಬಗ್ಗೆ ಹೈಕೋರ್ಟ್ ಸಲಹೆ ರೂಪದಲ್ಲಿ ಮಾರ್ಗದರ್ಶನ ನೀಡಿದೆ. ಕೋವಿಡ್ ಕಡಿಮೆ ಇರುವ ಜಿಲ್ಲೆಗಳಲ್ಲಿ ತರಗತಿಗಳನ್ನು ತೆರೆಯುವ ಬಗ್ಗೆ ಆಲೋಚಿಸುವಂತೆ ಸೂಚಿಸಿದೆ ಎಂದರು.

ಇದನ್ನೂ ಓದಿ:ಮಕ್ಕಳ ಸುರಕ್ಷತೆ ಜವಾಬ್ದಾರಿ ನಮ್ಮದು, ಧೈರ್ಯವಾಗಿ ಶಾಲೆಗೆ ಕಳಿಸಿ: ಸುರೇಶ್ ಕುಮಾರ್ ಮನವಿ

ಎಸ್ಎಸ್ಎಲ್ ಸಿ -ಪಿಯುಸಿ ಮಕ್ಕಳಿಗೆ ಹಿಂದಿನ ವರ್ಷದ ಬಸ್ ಪಾಸ್ ಬಳಸಲು ಅವಕಾಶವಿದೆ. ಸಾರಿಗೆ ಇಲಾಖೆ ಇದಕ್ಕೆ ಸಹಕಾರ ನೀಡಲಿದೆ ಎಂದರು.

Advertisement

ಖಾಸಗಿ ಶಾಲೆಗಳ ಸಂಘಟನೆಗಳ ಜೊತೆ ಮಾತನಾಡಿದ್ದೆನೆ. ಕ್ಯಾಮ್ಸ್ ಸಂಘಟನೆಯವರು ಪಾಲಕರಿಗೆ ತೊಂದರೆಯಾಗದಂತೆ ರೀತಿಯಲ್ಲಿ ಶುಲ್ಕದ ಬಗ್ಗೆ   ತೀರ್ಮಾನಿಸಿದ್ದಾರೆ. ಪಾಲಕರು ಮತ್ತು ಶಾಲಾ ಆಡಳಿಯ ಮಂಡಳಿಗಳ ಸಭೆ ನಡೆಸಿ ಸಹಕಾರ ನೀಡಲಾಗುವುದು. ಖಾಸಗಿ ಶಾಲೆಗಳ ಲೈಸೆನ್ಸ್ ರದ್ದು ಮಾಡುವ ಬಗ್ಗೆ ಆಲೋಚನೆಯಿಲ್ಲ ಎಂದರು.

ಸಿಲೆಬಸ್ ಬಗ್ಗೆ ಯಾವುದೇ ಗೊಂದಲವಿಲ್ಲ. ನಾಳೆಯಿಂದ ತರಗತಿ ಆರಂಭವಾದರೂ ದಿನಕ್ಕೆ ನಾಲ್ಕು ಕ್ಲಾಸ್ ಮಾತ್ರ ನಡೆಯುತ್ತವೆ.  ಒಂದು ವಾರದಲ್ಲಿ ಪಿಯುಸಿ, ಎಸ್ ಎಸ್ ಎಲ್ ಸಿ ತಾತ್ಕಾಲಿಕ ವೇಳಾ ಪಟ್ಟಿ ಪ್ರಕಟ ಮಾಡಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next