Advertisement
ಎರಡು ಸದಸ್ಯತ್ವದ ದ.ಕ. ಸ್ಥಳೀಯಾಡಳಿತ ಚುನಾ ವಣ ಕೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಒಂದೊಂದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಒಟ್ಟು 6,046 ಮತ ದಾರರಲ್ಲಿ ಬಿಜೆಪಿ 3,592, ಕಾಂಗ್ರೆಸ್-1,900, ಎಸ್‌ಡಿಪಿಐ 220 ಹಾಗೂ ಜೆಡಿಎಸ್, ಪಕ್ಷೇತರರು ಸೇರಿ 328 ಮತದಾರರಿದ್ದಾರೆ.
Related Articles
Advertisement
ಹಿಂದಿನ ಚುನಾವಣೆಯ ಹಿನ್ನೋಟದ.ಕ. ಸ್ಥಳೀಯಾಡಳಿತ ಚುನಾವಣ ಕ್ಷೇತ್ರಕ್ಕೆ 2015ರ ಡಿ.27ರಂದು ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಬ್ಬರು ಬಂಡಾಯ ಅಭ್ಯರ್ಥಿಗಳು ಸೇರಿದಂತೆ ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದರು. ದ.ಕ.ದಲ್ಲಿ 3,844 ಹಾಗೂ ಉಡುಪಿ ಜಿಲ್ಲೆಯಲ್ಲಿ 2,715 ಸೇರಿ ಒಟ್ಟು 6,559 ಮತದಾರರಿದ್ದರು. ಇದರಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ ಸುಮಾರು 3,500 ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಂಖ್ಯೆ ಸುಮಾರು 2,800 ಆಗಿತ್ತು. ಚಲಾಯಿತ ಮತಗಳಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಯವರು 2,977, ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿಯವರು 2,237 ,ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕೆ. ಜಯಪ್ರಕಾಶ ಹೆಗ್ಡೆ 459 ಮತಗಳನ್ನು ಪಡೆದಿದ್ದರು. ಮತ ಚಲಾವಣೆ
ವಿಧಾನ ಪರಿಷತ್ ಚುನಾವಣೆಯಲ್ಲಿ ಮತಯಂತ್ರಗಳಿರುವುದಿಲ್ಲ. ಬದಲಿಗೆ, ಮತಪತ್ರಗಳಲ್ಲಿ ನಡೆಯುತ್ತಿದ್ದು ಪ್ರಾಶಸ್ತ್ಯದ ಮತಗಳಿರುತ್ತವೆ. ಸ್ಥಳೀಯ ಪ್ರಾಧಿಕಾರದ ಸದಸ್ಯ ಮತದಾರರು ಮತಪತ್ರದಲ್ಲಿ ಪ್ರಾಶಸ್ತ್ಯದ ಮತವನ್ನು 1,2,3 ಸಂಖ್ಯೆಗಳಲ್ಲಿ ಮತಗಟ್ಟೆಯಲ್ಲಿ ನೀಡುವ ಸ್ಕೇಚ್ ಪೆನ್ನಿನಲ್ಲಿ ಗುರುತು ಹಾಕಬೇಕು. 1 ಪ್ರಾಶಸ್ತ್ಯ ಮತವನ್ನು ಹಾಕದೆ 2,3, ಇತ್ಯಾದಿ ಸಂಖ್ಯೆಗಳಲ್ಲಿ ಗುರುತಿಸಿದಲ್ಲಿ ಅವರ ಮತವು ತಿರಸ್ಕರಿಸಲ್ಪಡುತ್ತದೆ. ಆದರೆ ಕೇವಲ 1 ಪ್ರಾಶಸ್ತ್ಯವನ್ನು ಮಾತ್ರ ದಾಖಲಿಸಿ ಇತರ ಪ್ರಾಶಸ್ತ್ಯ ಮತಗಳನ್ನು ದಾಖಲಿಸದಿದ್ದರೆ ಆ ಮತ ಸಿಂಧುವಾಗುತ್ತದೆ. ಪ್ರಾಶಸ್ತ್ಯವನ್ನು ಸಂಖ್ಯೆಯಲ್ಲಿ ಮಾತ್ರ ಬರೆಯಬೇಕು. ಅಕ್ಷರದಲ್ಲಿ ಬರೆಯಬಾರದು.