Advertisement
ತಾಲೂಕಿನ ಕನ್ಯಾಕೋಳೂರ ಗ್ರಾಮದ ಸರ್ವೇ ನಂ. 393ರ ಬಳಿ ಸೇತುವೆ ಬಾಂದಾರ ನಿರ್ಮಾಣ ಮತ್ತು ನಿಜಶರಣಅಂಬಿಗರ ಚೌಡಯ್ಯನವರ ಭವನ, ಉರ್ದು ಶಾಲಾ ಕೋಣೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ
ಅವರು ಮಾತನಾಡಿದರು.ಚ ಅಂದಾಜು ಕನ್ಯಾಳೂರ ಗ್ರಾಮ ವ್ಯಾಪ್ತಿ ಜನರಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಈ ಭಾಗದ ರೈತಾಪಿ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಜಮೀನಿಗೆ ನೀರು ಸೇರಿದಂತೆ, ಈ ಭಾಗದ ಅಂತರಜಲ ಮಟ್ಟ ಹೆಚ್ಚಳವಾಗಲಿದೆ. ಅಂದಾಜು 185 ಎಕರೆ ಪ್ರದೇಶ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಸೇತುವೆ ನಿರ್ಮಾಣದಿಂದ ಕನ್ಯಾಕೋಳೂರ, ಅನವಾರ ಹಯ್ನಾಳ (ಕೆ) ಗ್ರಾಮಗಳ ನಡುವೆ ಜನರ ಸಂಪರ್ಕ ಕಲ್ಪಿಸಲು ಈ ಸೇತುವೆ ನೆರವಾಗಲಿದೆ ಎಂದು ತಿಳಿಸಿದರು.