Advertisement

“ಅಪರಾಧ-ಅಪಘಾತ ನಿಯಂತ್ರಣಕ್ಕೆ ಮೊದಲ ಆದ್ಯತೆ’

10:44 PM Sep 05, 2019 | Sriram |

ಕುಂದಾಪುರ: ಕುಂದಾಪುರ ಉಪವಿಭಾಗದ ನೂತನ ಎಎಸ್ಪಿಯಾಗಿ 2017ರ ಬ್ಯಾಚಿನ ಐಪಿಎಸ್‌ ಅಧಿಕಾರಿ ಹರಿರಾಂ ಶಂಕರ್‌ ಅವರು ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಇಲ್ಲಿನ ಪೊಲೀಸ್‌ ಉಪಾಧೀಕ್ಷಕರ ಕಚೇರಿಯಲ್ಲಿ ನಿರ್ಗಮನ ಡಿವೈಎಸ್ಪಿ ಬಿ.ಪಿ. ದಿನೇಶ್‌ ಕುಮಾರ್‌ ಅಧಿಕಾರ ಹಸ್ತಾಂತರಿಸಿದರು.

Advertisement

ಅಧಿಕಾರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಹರಿರಾಂ ಶಂಕರ್‌, ಕುಂದಾಪುರದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಅಪರಾಧ ಚಟುವಟಿಕೆ ನಿಯಂತ್ರಣ ಹಾಗೂ ಅಪಘಾತ ಪ್ರಕರಣಗಳು ಘಟಿಸದಂತೆ ತಡೆಯಲು ಮೊದಲ ಆದ್ಯತೆ ನೀಡಲಾಗುವುದು. ಇದರೊಂದಿಗೆ ಕಾನೂನು – ಸುವ್ಯವಸ್ಥೆಗೆ ಎಂದಿನಂತೆ ಒತ್ತು ನೀಡುತ್ತೇವೆ. ಅದಕ್ಕೂ ಮೊದಲು ಕುಂದಾಪುರ ಉಪ ವಿಭಾಗ ವ್ಯಾಪ್ತಿಯ ಬಗ್ಗೆ ತಿಳಿದುಕೊಳ್ಳುತ್ತೇನೆ. ಈ ಹಿಂದೆ ಇಲ್ಲಿ ನಡೆದಿರುವ ಕೊಲೆ, ಕಳ್ಳತನ ಮತ್ತಿತರ ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು, ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಟ್ರಾಫಿಕ್‌ ಸಮಸ್ಯೆಗೆ ಒತ್ತು
ಹೆದ್ದಾರಿ ಸಹಿತ ಕೆಲವೊಂದು ಪ್ರದೇಶದಲ್ಲಿ ಟ್ರಾಫಿಕ್‌ ಸಮಸ್ಯೆಗಳಿದ್ದು, ಅವುಗಳನ್ನು ಅಪಘಾತ ವಲಯಗಳಾಗಿ ಗೊತ್ತು ಮಾಡಿ, ತಜ್ಞರ ತಂಡದಿಂದ ಅಧ್ಯಯನ ನಡೆಸಿ, ಬ್ಲಾಕ್‌ ಸ್ಪಾಟ್‌ ಎಂದು ಗುರುತಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪ್ರಯತ್ನ ಮಾಡಲಾಗುವುದು. ಫ್ಲೆ$çಓವರ್‌, ರಸ್ತೆ ಕಾಮಗಾರಿಯು ಬಾಕಿಯಿದ್ದು, ಅದನ್ನೆಲ್ಲ ಪರಿಶೀಲಿಸಿ ಸಂಚಾರ ವ್ಯವಸ್ಥೆ ಸರಿಪಡಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ನೂತನ ಎಎಸ್ಪಿ ಹೇಳಿದರು.

2018 ರ ಮಾ. 22 ರಿಂದ ಕುಂದಾಪುರ ಉಪ ವಿಭಾಗದ ಡಿವೈಎಸ್‌ಪಿ ಆಗಿದ್ದ ಬಿ.ಪಿ. ದಿನೇಶ್‌ ಕುಮಾರ್‌ ಅವರು ಈಗ ವರ್ಗಾವಣೆಗೊಂಡಿದ್ದು, ಹೊಸ ಹುದ್ದೆಗೆ ಇನ್ನಷ್ಟೇ ನಿಯೋಜನೆಗೊಳಿಸಬೇಕಿದೆ.

ಈ ಸಂದರ್ಭದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ, ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ್‌ ಗುನಗ, ಉಪ ವಿಭಾಗದ ವಿವಿಧ ಠಾಣೆಗಳ ಎಸ್‌ಐಗಳು, ಪೊಲೀಸ್‌ ಸಿಬಂದಿ ಉಪಸ್ಥಿತರಿದ್ದರು.

Advertisement

ಹರಿರಾಂ ಶಂಕರ್‌ ಪರಿಚಯ
ಕೇರಳದ ತೃಶ್ಶೂರ್‌ ಮೂಲದ ಹರಿರಾಂ ಶಂಕರ್‌ ಅವರು 2017 ಬ್ಯಾಚಿನ ಐಪಿಎಸ್‌ ಅಧಿಕಾರಿಯಾಗಿದ್ದು, ಬೆಳಗಾವಿಯ ಅಥಣಿಯಲ್ಲಿ ಪ್ರೊಬೇಶನರಿ ಎಎಸ್ಪಿಯಾಗಿ ಕಾರ್ಯನಿರ್ವಹಿಸಿ, ಬಳಿಕ 2 ತಿಂಗಳು ಹೈದರಬಾದಿನಲ್ಲಿ 2ನೇ ಹಂತದ ತರಬೇತಿ ಮುಗಿಸಿ, ಈಗ ಕುಂದಾಪುರಕ್ಕೆ ವರ್ಗವಣೆಗೊಂಡಿದ್ದಾರೆ. ಕ್ಯಾಲಿಕಟ್‌ ಎನ್‌.ಐ.ಟಿ.ಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ ವ್ಯಾಸಂಗ ಮುಗಿಸಿ, ಸಿವಿಲ್‌ ಸರ್ವಿಸ್‌ ಪರೀಕ್ಷೆ ಬರೆದಿದ್ದರು.

2ನೇ ಐಪಿಎಸ್‌ ಅಧಿಕಾರಿ
ಕುಂದಾಪುರ ಉಪ ವಿಭಾಗದ ಮುಖ್ಯಸ್ಥರಾಗಿ 2007 ರಿಂದ ಈ ವರೆಗೆ 9 ಮಂದಿ ಕಾರ್ಯನಿರ್ವಹಿಸಿದ್ದು, ಹರಿರಾಂ ಶಂಕರ್‌ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡನೇ ಐಪಿಎಸ್‌ ಅ ಧಿಕಾರಿಯಾಗಿದ್ದಾರೆ. ಇದಕ್ಕೂ ಮೊದಲು 2010ರಿಂದ 2012 ರವರೆಗೆ ಡಾ| ರಾಮ್‌ ನಿವಾಸ್‌ ಸೆಪಟ್‌ ಎಎಸ್ಪಿಯಾಗಿದ್ದರು. 2007ರಿಂದ ಸಿ.ಕೆ. ಶಶಿಧರ್‌, ವಿಶ್ವನಾಥ್‌ ಪಂಡಿತ್‌, ಶೇಖರ ಎ. ಅಗಡಿ, ಸಿ.ಬಿ. ಪಾಟೀಲ್‌, ಎಂ. ಮಂಜುನಾಥ ಶೆಟ್ಟಿ, ಪ್ರವೀಣ್‌ ಎಚ್‌. ನಾಯಕ್‌ ಹಾಗೂ ಬಿ.ಪಿ. ದಿನೇಶ್‌ ಕುಮಾರ್‌ ಡಿವೈಎಸ್‌ಪಿಗಳಾಗ ಪದೋನ್ನತಿಗೊಂಡು ಇಲ್ಲಿ ಕಾರ್ಯನಿರ್ವಹಿಸಿದ್ದರೆ, 2012 ರಿಂದ 2013 ರವರೆಗೆ ಯಶೊದಾ ಎಸ್‌. ಒಂಟಿಗೋಡಿ ಅವರು ಕೆಎಸ್‌ಪಿಎಸ್‌ ಪರೀಕ್ಷೆ ಬರೆದು ನಿಯೋಜನೆಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next