Advertisement

ಶೈಕ್ಷಣಿಕ ಪ್ರಗತಿಗೆ ಪ್ರಥಮ ಆದ್ಯತೆ

11:29 AM Jun 25, 2018 | Team Udayavani |

ಹಗರಿಬೊಮ್ಮನಹಳ್ಳಿ: ಕ್ಷೇತ್ರದಲ್ಲಿ ಅವಸಾನದ ಅಂಚಿನಲ್ಲಿರುವ ಶಾಲೆಗಳ ಕೊಠಡಿಗಳನ್ನು ನೆಲಸಮಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಶಾಸಕ ಭೀಮಾನಾಯ್ಕ ಹೇಳಿದರು.

Advertisement

ಪಟ್ಟಣದ ಪಂಚಮಸಾಲಿ ಭವನದಲ್ಲಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಭಾನುವಾರ
ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಕಳೆದ ಅವಧಿಯಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ 45 ಕೋಟಿ ರೂ. ಅನುದಾನ ಬಳಸಲಾಗಿದೆ. ಕ್ಷೇತ್ರದ ಪ್ರತಿಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗುವುದು. ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕು 5ನೇ ಸ್ಥಾನಕ್ಕೆ ಕುಸಿದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ತಾಲೂಕನ್ನು ಶೈಕ್ಷಣಿಕವಾಗಿ ಮೊದಲ ಸ್ಥಾನಕ್ಕೇರಿಸಲು ಶಿಕ್ಷಕರು ಮತ್ತು ಪಾಲಕರು ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. 

ಶಿಕ್ಷಕರು ಬೋಧನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಇತರೆ ಕೆಲಸಗಳಿಗೆ ಆಸಕ್ತಿ ತೋರಬೇಡಿ ಎಂದರು. ಪಂಚಮಸಾಲಿ ಸಮಾಜದಿಂದ ನಡೆಯುತ್ತಿರುವ ಶಾಲೆಗೆ ಕಟ್ಟಡ, ಮೈದಾನ ನಿರ್ಮಾಣಕ್ಕೆ ಅಗತ್ಯ ನಿವೇಶನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ಅಶೋಕ ಬಾವಿಕಟ್ಟಿ ಮಾತನಾಡಿ, ಪಂಚಮಸಾಲಿ ಸಮಾಜ ಸರಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ನಾವು ಮುಗ್ಧರಾದಂತೆಲ್ಲ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ. ಪಂಚಮಸಾಲಿ ಸಮಾಜದ ಬಾಂಧವರು ಸಾತ್ವಿಕ ಗುಣಗಳ ಜೊತೆಗೆ ಚೆನ್ನಮ್ಮಳ ಕೆಚ್ಚೆದೆಯ ಸ್ವಭಾವ ಹೊಂದಬೇಕು. ಸಮಾಜದ ಜನತೆ ಕೃಷಿಯನ್ನೇ ನೆಚ್ಚಿಕೊಂಡಿದ್ದು ವೈಜ್ಞಾನಿಕ ಕೃಷಿ ಕಡೆ ಗಮನಹರಿಸಬೇಕು ಎಂದರು.

Advertisement

ಒಬಿಸಿ 2ಎ ಪ್ರವರ್ಗಕ್ಕೆ ಸಮಾಜವನ್ನು ಸೇರ್ಪಡೆ ಮಾಡುವವರೆಗೂ ಸಮಾಜ ಸಂಘಟಿತ ಹೋರಾಟ ನಡೆಸಬೇಕು. ಕಿತ್ತೂರು ಚನ್ನಮ್ಮಾಜಿ ಖಡ್ಗವನ್ನು ದೇಶಕ್ಕೆ ಹಿಂತಿರುಗಿಸಬೇಕಿದೆ. ನಮ್ಮ ಮೇಲೆ ನಮಗೆ ನಂಬಿಗೆ ಬರಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ. ವಿದ್ಯಾರ್ಥಿಗಳು ಏಕಾಗ್ರತೆ ವೃದ್ಧಿಸಿಕೊಳ್ಳುತ್ತಾ ಹಂತಹಂತವಾಗಿ ಗುರಿ ಸಾಧನೆ ಮಾಡಬೇಕು ಎಂದರು.

ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ್‌ ಮಾತನಾಡಿ,ಪಂಚಮಸಾಲಿ ಸಮಾಜ
ಈಗಾಗಲೇ ಒಟ್ಟು 650 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದೆ. ಪ್ರತಿವರ್ಷ ಸಾಮೂಹಿಕ ವಿವಾಹ ಸೇರಿ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಸಮಾಜದ ಶಾಲೆಗೆ ಅಗತ್ಯ ನಿವೇಶನದ ಅಗತ್ಯತೆ ಇದೆ. ಈ ಕಾರ್ಯಕ್ರಮ ಎಲ್ಲ ಮಕ್ಕಳಿಗೂ ಪ್ರೇರಣೆಯಾಗಲಿ ಎಂದರು.

ಸಮಾಜದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 85ಕ್ಕೂ ಅಧಿಕ ಅಂಕ ಪಡೆದ 25 ಮತ್ತು ಪಿಯುಸಿ 20 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ರಾಜ್ಯ ಗೌರವಾಧ್ಯಕ್ಷ ಬಾವಿಬೆಟ್ಟಪ್ಪ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಕೆಪಿಸಿಸಿ ಎಸ್‌ಟಿ ಘಟಕದ ಉಪಾಧ್ಯಕ್ಷ ಪವಾಡಿ ಹನುಮಂತಪ್ಪ, ಹುಡೇದ ಗುರುಬಸವರಾಜ, ನೌಕರರ
ಸಂಘದ ಕಾರ್ಯದರ್ಶಿ ರವಿ ಉತ್ತಂಗಿ, ಆರ್‌. ಕೊಟ್ರಗೌಡ, ಎಪಿಎಂಸಿ ಅಧ್ಯಕ್ಷ ಅಳವಂಡಿ ವೀರಣ್ಣ, ಪುರಸಭೆ ಅಧ್ಯಕ್ಷ ಟಿ. ರಾಘವೇಂದ್ರ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥಗೌಡ, ವಾಲ್ಮೀಕಿ ಸಮಾಜದ ಮಾಜಿ ಅಧ್ಯಕ್ಷ ಡಿಶ್‌ ಮಂಜುನಾಥ, ಬಾಲಕೃಷ್ಣಬಾಬು, ಹಾಲ್ದಾಳ್‌ ವಿಜಯಕುಮಾರ್‌, ಸಂಘದ ಕಾರ್ಯದರ್ಶಿ ಜೆ.ಬಿ. ಶರಣಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಲೋಕಪ್ಪ, ಎಸ್‌.ಕೊಟ್ರೇಶ್‌, ಶಾರದಾ ಮಂಜುನಾಥ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next