Advertisement

ಮೊದಲ ಹಂತಕ್ಕೆ ಹಿಂಸೆಯ ಛಾಯೆ

12:20 PM Apr 13, 2019 | Team Udayavani |

ಹೊಸದಿಲ್ಲಿ: ಹಿಂಸಾಚಾರ, ಸಾವು-ನೋವು, ಇವಿಎಂ ಲೋಪ, ಮತದಾರರ ಆಕ್ರೋಶ, ನಕ್ಸಲ್‌ ದಾಳಿಯಂಥ ಘಟನೆಗಳಿಗೆ ಸಾಕ್ಷಿ ಯಾಗುವ ಮೂಲಕ ಪ್ರಸಕ್ತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ತೆರೆಬಿದ್ದಿದೆ.

Advertisement

ಕಾಶ್ಮೀರದಿಂದ ಅಂಡಮಾನ್‌- ನಿಕೋಬಾರ್‌ ದ್ವೀಪದವರೆಗೆ ದೇಶದ 18 ರಾಜ್ಯಗಳು, ಎರಡು ಕೇಂದ್ರಾಡ ಳಿತ ಪ್ರದೇಶಗಳ 91 ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲಪ್ರದೇಶ ಮತ್ತು ಒಡಿಶಾ ವಿಧಾನಸಭೆಗಳಿಗೆ ಗುರು ವಾರ ಮತದಾನ ನೆರವೇರಿತು. ಆದರೆ ಹಲವು ರಾಜ್ಯಗಳಲ್ಲಿ ನಡೆ ದಂತಹ ಅಹಿತಕರ ಘಟನೆಗಳು ಪ್ರಜಾ ತಂತ್ರ ಹಬ್ಬದ ಸಂಭ್ರಮದಲ್ಲಿ ಕಪ್ಪುಚುಕ್ಕೆ ಮೂಡಿಸಿದವು.

ಆಂಧ್ರಪ್ರದೇಶದಲ್ಲಿ ಟಿಡಿಪಿ- ವೈಎಸ್ಸಾರ್‌ ಕಾಂಗ್ರೆಸ್‌ ಕಾರ್ಯ ಕರ್ತರ ನಡುವಿನ ಘರ್ಷಣೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ.
ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ಅಸ್ಸಾಂನಲ್ಲಿ ನಕ್ಸಲರು ಸ್ಫೋಟಕ ಸ್ಫೋಟಿಸಿ ಮತದಾರರಲ್ಲಿ ಭೀತಿ ಹುಟ್ಟಿಸಿದರು. ಜಮ್ಮು- ಕಾಶ್ಮೀರ, ಅರುಣಾಚಲ ಪ್ರದೇಶ ಗಳಲ್ಲೂ ಗಲಾಟೆ ನಡೆದು ಕೆಲವರು ಗಾಯಗೊಂಡಿದ್ದಾರೆ.

ಇದೇ ವೇಳೆ, ಹಲವು ರಾಜ್ಯಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟ, ಯಂತ್ರ ಗಳಲ್ಲಿ ದೋಷ ಕಾಣಿಸಿ ಕೊಂಡ ಹಾಗೂ ಮತ ದಾರರ ಪಟ್ಟಿ ಯಲ್ಲಿ ಹೆಸರೇ ಇಲ್ಲದೆ ನಾಗರಿಕರು ಕಿಡಿ ಕಿಡಿಯಾದಂಥ ಘಟನೆಗಳೂ ನಡೆದಿವೆ. ಆಂಧ್ರ ದಲ್ಲಿ ಅಭ್ಯರ್ಥಿಯೇ ಇವಿಎಂ ಎತ್ತಿ ಬಿಸಾಕಿ, ಪೊಲೀಸರ ಅತಿಥಿಯಾಗಿದ್ದಾರೆ. ಉತ್ತರಪ್ರದೇಶದ ಕೈರಾನಾದಲ್ಲಿ ಗುರುತಿನ ಚೀಟಿಯನ್ನೇ ತರದ ಕೆಲವರು, ಬಲವಂತವಾಗಿ ಹಕ್ಕು ಚಲಾಯಿಸಲು ಮತಗಟ್ಟೆಯೊಳಗೆ ನುಗ್ಗಿದ್ದು, ಅವರನ್ನು ಬಿಎಸ್‌ಎಫ್ ಯೋಧರು ಗಾಳಿಯಲ್ಲಿ ಗುಂಡು ಹಾರಿಸಿ ಚದುರಿಸಿದ್ದಾರೆ.

ಮಹಾರಾಷ್ಟ್ರದಲ್ಲಿ 39 ದೂರುಗಳು
ಮಹಾರಾಷ್ಟ್ರದ 6 ಲೋಕಸಭಾ ಕ್ಷೇತ್ರಗಳ ಕೆಲವು ಮತಗಟ್ಟೆಗಳ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷ ಕಂಡುಬಂದಿದ್ದು, ಚುನಾವಣ ಆಯೋಗಕ್ಕೆ ಕಾಂಗ್ರೆಸ್‌ 39 ದೂರು ನೀಡಿವೆ. ನಾಗಪುರ, ಚಂದ್ರಾಪುರ, ವಾರ್ಧಾ, ರಾಮ್‌ಟೆಕ್‌ ಸಹಿತ ಹಲವು ಪ್ರದೇಶಗಳ ಮತಗಟ್ಟೆಗಳಿಂದ ಇಂಥ ದೂರು ಗಳು ಬಂದಿವೆ. ಇದು ನ್ಯಾಯಸಮ್ಮತ ಮತ್ತು ಮುಕ್ತ ಚುನಾ ವಣೆ ಯಲ್ಲಿ ನಡೆದ ಹಸ್ತಕ್ಷೇಪ ಎಂದು ಕಾಂಗ್ರೆಸ್‌ ಆರೋಪಿಸಿದೆ.

Advertisement

ಅನಂತಪುರದಲ್ಲಿ ಹಿಂಸಾಚಾರ; ಮೂವರ ಸಾವು
ಆಂಧ್ರಪ್ರದೇಶದಲ್ಲಿ ನಡೆದ ಘರ್ಷಣೆ ಹಿಂಸೆಗೆ ತಿರುಗಿದ್ದು, ಮೂವರ ಸಾವಿನಲ್ಲಿ ಅಂತ್ಯವಾಗಿದೆ. ಇಲ್ಲಿನ ಅನಂತಪುರ ಜಿಲ್ಲೆಯ ತಡಿಪತ್ರಿ ಅಸೆಂಬ್ಲಿ ಕ್ಷೇತ್ರ ವ್ಯಾಪ್ತಿಯ ವೀರಪುರ ಗ್ರಾಮದಲ್ಲಿ ಆಡಳಿತಾರೂಢ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಮತ್ತು ವಿಪಕ್ಷ ವೈಎಸ್ಸಾರ್‌ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳವು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ, ವೈಎಸ್ಸಾರ್‌ ಕಾಂಗ್ರೆಸ್‌ ನಾಯಕ ಪುಲ್ಲ ರೆಡ್ಡಿ ಮತ್ತು ಟಿಡಿಪಿ ನಾಯಕ ಸಿದ್ದ ಭಾಸ್ಕರ್‌ ರೆಡ್ಡಿ ಮೃತಪಟ್ಟಿದ್ದಾರೆ. ಘಟನೆ ಖಂಡಿಸಿರುವ ಸಿಎಂ ಚಂದ್ರಬಾಬು ನಾಯ್ಡು, ಚುನಾವಣೆಯಲ್ಲಿ ಗೆಲುವು ಸಾಧಿಸಲು ವೈಎಸ್ಸಾರ್‌ ಕಾಂಗ್ರೆಸ್‌ ಹಿಂಸೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ವೈಎಸ್ಸಾರ್‌ಸಿ ನಾಯಕರು, ಟಿಡಿಪಿ ಬೆಂಬಲಿಗರು ಚುನಾವಣ ಅಕ್ರಮದಲ್ಲಿ ತೊಡಗಿದ್ದರು ಎಂದಿದ್ದಾರೆ. ಏಲೂರು ನಗರದಲ್ಲೂ ಗಲಾಟೆ ನಡೆದಿದ್ದು, ಟಿಡಿಪಿ ನಡೆಸಿದ ಹಲ್ಲೆಯಿಂದ ವೈಎಸ್ಸಾರ್‌ಸಿ ಕಾರ್ಯಕರ್ತರೊಬ್ಬರು ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next