Advertisement

First Night With Devva: ಟೀಸರ್‌ನಲ್ಲಿ ಫ‌ಸ್ಟ್‌ ನೈಟ್‌ ವಿತ್‌ ದೆವ್ವ

05:54 PM Feb 28, 2024 | Team Udayavani |

ಪ್ರಥಮ್‌ ನಾಯಕರಾಗಿರುವ ನವೀನ್‌ ಬೀರಪ್ಪ ನಿರ್ಮಾಣದ ಹಾಗೂ ಪಿ.ವಿ.ಆರ್‌. ಸ್ವಾಮಿ ನಿರ್ದೇಶನದ “ಫ‌ಸ್ಟ್‌ ನೈಟ್‌ ವಿತ್‌ ದೆವ್ವ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

Advertisement

ಬಹಳ ಆಸೆಯಿಂದ ಮದುವೆಯಾದ ಹುಡುಗನಿಗೆ ತನ್ನ ಮೊದಲ ರಾತ್ರಿ ನಡೆಯುತ್ತಿರುವುದು ದೆವ್ವದ ಜೊತೆಗೆ ಎಂದು ತಿಳಿದಾಗ ಏನೆಲ್ಲಾ ಆಗುತ್ತದೆ? ಎಂಬುದೆ ಚಿತ್ರದ ಕಥಾಸಾರಾಂಶ. ಈ ಚಿತ್ರದಲ್ಲಿ ನಗುವಿಗೆ ಬರವಿಲ್ಲ. ಹಾರರ್‌, ಕಾಮಿಡಿ, ಆ್ಯಕ್ಷನ್‌ ಹಾಗೂ ಸೆಂಟಿಮೆಂಟ್‌ ಚಿತ್ರದಲ್ಲಿದೆ ಎನ್ನುವುದು ತಂಡದ ಮಾತು.

ನಿಖಿತ, ಜೀವಿತ ಹಾಗೂ ಸುಶ್ಮಿತ ಮೂವರು ನಾಯಕಿಯರು. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ರಮೇಶ್‌ ಭಟ್‌, ಹರೀಶ್‌ ರಾಜ್‌ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರುವ ಸಿದ್ಧತೆ ನಡೆಯತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next