Advertisement
ವೈವಿಧ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದೇ ಭಾರತೀಯ ಪ್ರಜಾಪ್ರಭುತ್ವದ ಮೂಲತತ್ವವಾಗಿದೆ. ಬಿಜೆಪಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅದು ಎಂದೂ ಕೂಡ ನಮ್ಮ ರಾಜಕೀಯ ವಿಚಾರಧಾರೆಯನ್ನು ಒಪ್ಪದವರನ್ನು “ಶತ್ರುಗಳು’ ಎಂದು ಭಾವಿಸಲಿಲ್ಲ. ಅದೇ ರೀತಿಯಲ್ಲೇ, “ಭಾರತೀಯ ರಾಷ್ಟ್ರೀಯತೆ’ಯ ವಿಚಾರದಲ್ಲೂ ಕೂಡ, ರಾಜಕೀಯವಾಗಿ ನಮ್ಮೊಂದಿಗೆ ಸಹಮತ ಇಲ್ಲದವರನ್ನು “ರಾಷ್ಟ್ರ ವಿರೋಧಿ’ ಎಂದು ಭಾವಿಸಲಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ವ್ಯಕ್ತಿಗತವಾಗಿ ಮತ್ತು ರಾಜಕೀಯವಾಗಿ ತನ್ನದೇ ಆದ ಆಯ್ಕೆಯ ಸ್ವಾತಂತ್ರ್ಯವಿರಬೇಕು ಎಂಬ ವಿಚಾರಕ್ಕೆ ನಮ್ಮ ಪಕ್ಷ ಬದ್ಧವಾಗಿದೆ.
Related Articles
Advertisement
ಪ್ರತಿಯೊಬ್ಬ ನಾಗರಿಕನಿಗೂ ವ್ಯಕ್ತಿಗತವಾಗಿ ಮತ್ತು ರಾಜಕೀಯವಾಗಿ ತನ್ನದೇ ಆದ ಆಯ್ಕೆಯ ಸ್ವಾತಂತ್ರ್ಯವಿರಬೇಕು ಎಂಬ ವಿಚಾರಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ಪಕ್ಷದ ಒಳಗೇ ಆಗಲಿ ಮತ್ತು ರಾಷ್ಟ್ರೀಯ ಸ್ತರದಲ್ಲೇ ಆಗಲಿ, ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವಿಯ ಸಂಪ್ರದಾಯಗಳ ರಕ್ಷಣೆಯು ಬಿಜೆಪಿಯ ಹೆಮ್ಮೆಯ ಹಾಲ್‌ಮಾರ್ಕ್ ಆಗಿದೆ. ಈ ಕಾರಣಕ್ಕಾಗಿಯೇ ಮಾಧ್ಯಮಗಳೂ ಸೇರಿದಂತೆ ನಮ್ಮ ದೇಶದ ಎಲ್ಲಾ ಪ್ರಜಾಪ್ರಭುತ್ವಿàಯ ಸಂಸ್ಥೆಗಳ ಸ್ವಾತಂತ್ರ್ಯ, ಸಮಗ್ರತೆ ಮತ್ತು ದೃಢತೆಯನ್ನು ರಕ್ಷಿಸಬೇಕು ಎಂದು ಧ್ವನಿಯೆತ್ತುವವರಲ್ಲಿ ಮೊದಲಿನಿಂ ದಲೂ ಬಿಜೆಪಿ ಮುಂಚೂಣಿಯಲ್ಲಿದೆ. ಇನ್ನು ಚುನಾವಣಾ ಸುಧಾರಣೆಗಳು, ರಾಜಕೀಯ ಮತ್ತು ಚುನಾವಣಾ ಫಂಡಿಂಗ್‌ನಲ್ಲಿ ಪಾರದರ್ಶಕತೆ ತರಬೇಕು ಎನ್ನುವುದು ನಮ್ಮ ಪಕ್ಷದ ಮತ್ತೂಂದು ಆದ್ಯತೆಯಾಗಿದೆ. ಭ್ರಷ್ಟಾಚಾರ ಮುಕ್ತ ರಾಜಕೀಯಕ್ಕೆ ಅತಿ ಅಗತ್ಯವಾದ ಅಂಶಗಳಿವು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, “ಸತ್ಯ’, “ರಾಷ್ಟ್ರನಿಷ್ಠೆ’ ಮತ್ತು “ಲೋಕತಂತ್ರ'(ಪಕ್ಷದ ಹೊರಗಿನ ಮತ್ತು ಒಳಗಿನ ಪ್ರಜಾಪ್ರಭುತ್ವ)ಗಳ ಮುಕ್ಕೂಟವೇ ನಮ್ಮ ಪಕ್ಷದ ಹೋರಾಟದ ಹಾದಿಗೆ ಮಾರ್ಗದರ್ಶಿಯಾಯಿತು. ಈ ಎಲ್ಲಾ ಮೌಲ್ಯಗಳ ಒಟ್ಟು ಮೊತ್ತವು Cultural Nationalism (ಸಾಂಸ್ಕೃತಿಕ ರಾಷ್ಟ್ರವಾದ) ಮತ್ತು good governance (ಉತ್ತಮ ಆಡಳಿತ) ಅನ್ನು ರೂಪಿಸುತ್ತವೆ. ಈ ಮೌಲ್ಯಗಳಿಗೆ ನನ್ನ ಪಕ್ಷ ಮೊದಲಿನಿಂದಲೂ ಬದ್ಧವಾಗಿದೆ. ತುರ್ತುಪರಿಸ್ಥಿತಿಯ ವಿರುದ್ಧದ ನಮ್ಮ ವೀರೋಚಿತ ಹೋರಾಟವೂ ಕೂಡ ನಿರ್ದಿಷ್ಟವಾಗಿ ಈ ಮೌಲ್ಯಗಳನ್ನೇ ಎತ್ತಿಹಿಡಿಯುವುದಕ್ಕೆ ನಡೆದಿತ್ತು.
ಭಾರತದ ಪ್ರಜಾಪ್ರಭುತ್ವಿಯ ಮಹಾಸೌಧ ವನ್ನು ಬಲಗೊಳಿಸುವುದಕ್ಕೆ ನಾವೆಲ್ಲರೂ ಸಾಂ ಕವಾಗಿ ಶ್ರಮಿಸಬೇಕು ಎನ್ನುವುದು ನನ್ನ ಪ್ರಾಮಾಣಿಕ ಬಯಕೆಯಾಗಿದೆ. ನಿಜ, ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬವೇನೋ ಸರಿ. ಆದರೆ, ಅವು ಭಾರತೀಯ ಪ್ರಜಾಪ್ರಭುತ್ವದ ಪಾಲುದಾರರಾಗಿರುವ ರಾಜಕೀಯ ಪಕ್ಷಗಳು, ಸಮೂಹ ಮಾಧ್ಯಮ, ಚುನಾವಣಾಧಿಕಾರಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮತದಾರರಿಗೆ “ಪ್ರಾಮಾಣಿಕ ಆತ್ಮಾವ ಲೋಕನದ ಸಂದರ್ಭ’ವೂ ಆಗಬೇಕು.
ಎಲ್ಲರಿಗೂ ನನ್ನ ಶುಭಾಶಯಗಳು…
ಅಡ್ವಾಣಿ ಬರಹಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿಬಿಜೆಪಿಯ ಮೂಲತತ್ವವನ್ನು, ಅದರಲ್ಲೂ “ಮೊದಲು ದೇಶ, ನಂತರ ಪಕ್ಷ, ಆಮೇಲೆ ನಾವು’ ಎಂಬುದನ್ನು ಅಡ್ವಾಣೀಜಿಯವರು ಕರಾರುವಾಕ್ಕಾಗಿ ಕಟ್ಟಿಕೊಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಳ್ಳಲು ಮತ್ತು ಅಡ್ವಾಣೀಜಿಯಂಥ ಹಿರಿಯರು ಪಕ್ಷವನ್ನು ಬಲಪಡಿಸಿದ್ದಾರೆ ಎನ್ನಲು ಹೆಮ್ಮೆಯಾಗುತ್ತದೆ.
ನರೇಂದ್ರ ಮೋದಿ ಎಲ್.ಕೆ. ಅಡ್ವಾಣಿ
ಬಿಜೆಪಿ ಹಿರಿಯ ನಾಯಕ