ಭೋಪಾಲ್: ಭಾರತ್ ಬಯೋಟೆಕ್ ಕಂಪನಿ ತಯಾರಿಸಿರುವ ಮೂಗಿನ ಮೂಲಕ ನೀಡುವ ಮೊದಲ ಕೊರನಾ ಲಸಿಕೆ “ಇನ್ಕೊವಾಕ್’ ಇನಾóನೇಸಲ್ ಲಸಿಕೆಯನ್ನು ಜ.26ರಂದು ಬಿಡುಗಡೆಗೊಳಿಸಲಾಗುವುದು ಎಂದು ಭಾರತ್ ಬಯೋಟೆಕ್ ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಎಲ್ಲಾ ತಿಳಿಸಿದ್ದಾರೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮೌಲಾನಾ ಅಜಾದ್ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ವಿದ್ಯಾರ್ಥಿಗೊಂದಿಗಿನ ಸಂವಾದದ ವೇಳೆ ಮಾತನಾಡಿದ ಅವರು, “ಗಣರಾಜ್ಯೋತ್ಸವ ದಿನವಾದ ಜ.26ರಂದು ದೇಶೀಯವಾಗಿ ತಯಾರಿಸಿರುವ ನೇಸಲ್ ಲಸಿಕೆ ಬಿಡುಗಡೆಗೊಳಿಸಲಾಗುವುದು,’ ಎಂದರು.
“ಇನ್ಕೊವಾಕ್’ ಇನಾನೇಸಲ್ ಲಸಿಕೆಯ ಒಂದು ಡೋಸ್‌ಗೆ ಸರ್ಕಾರಕ್ಕೆ 325 ರೂ. ಹಾಗೂ ಖಾಸಗಿ ಲಸಿಕಾ ಕೇಂದ್ರಗಳಿಗೆ ಒಂದು ಡೋಸ್‌ಗೆ 800 ರೂ.ಗೆ ಮಾರಾಟ ಮಾಡಲಾಗುವುದು ಎಂದು ಡಿಸೆಂಬರ್‌ನಲ್ಲಿ ಭಾರತ್ ಬಯೋಟೆಕ್ ಕಂಪನಿ ತಿಳಿಸಿತ್ತು.