Advertisement

ಮಂಗಳ ಒಳಾಂಗಣ ಅನ್ವೇಷಕ: ನಾಸಾದ ಪ್ರಥಮ ಲ್ಯಾಂಡರ್‌ ನಭೋ ಮಂಡಲಕ್ಕೆ

05:48 PM May 05, 2018 | Team Udayavani |

ಕ್ಯಾಲಿಫೋರ್ನಿಯ : ಮಂಗಳ ಗ್ರಹದ ಅಂತರಂಗವನ್ನು ಅನ್ವೇಷಿಸುವ ನಾಸಾದ ಪ್ರಪ್ರಥಮ ರೋಬೋಟಿಕ್‌ ಲ್ಯಾಂಡರ್‌ ಹೊತ್ತ ಅಟ್ಲಾಸ್‌ 5 ರಾಕೆಟ್‌ ಇಂದು ಶನಿವಾರ ನಸುಕಿನ ವೇಳೆ ವ್ಯಾಂಡನ್‌ಬರ್ಗ್‌ ವಾಯು ಪಡೆ ನೆಲೆಯಿಂದ ಬಾಹ್ಯಾಕಾಶಕ್ಕೆ ಚಿಮ್ಮಿತು.

Advertisement

ಮಾರ್ಸ್‌ ಇನ್‌ಸೈಟ್‌ ಪ್ರೋಬ್‌ ಎಂದೇ ತಿಳಯಲ್ಪಟ್ಟಿರುವ ಮಂಗಳನ ಒಳಾಂಗಣವನ್ನು ಅನ್ವೇಷಿಸುವ ನಾಸಾದ ಮೊತ್ತ ಮೊದಲ ರೋಬೋಟಿಕ್‌ ಲ್ಯಾಂಡರ್‌ ಹೊತ್ತ ಅಟ್ಲಾಸ್‌ 5 ರಾಕೆಟ್‌ ಇಂದು ಶನಿವಾರ ನಸುಕಿನ 4.05ರ ವೇಳೆಗೆ (ಪಿಡಿಟಿ ಕಾಲಮಾನ) ನಭೋಮಂಡಲಕ್ಕೆ ಹಾರಿತು. 

ಇದು ಅಮೆರಿಕದ ಮೊತ್ತ ಮೊದಲ ಅಂತರ್‌-ಗ್ರಹ ಅನ್ವೇಷಕ ಬಾಹ್ಯಾಕಾಶ ನೌಕೆಯಾಗಿದ್ದು  ನಸುಕಿನ ವೇಳೆ ಹಾಸಿಗೆ ಬಿಟ್ಟು ಏಳುವವರಿಗೆ ಇಂದು ನಸುಕಿನ ವೇಳೆ ಪೆಸಿಫಿಕ್‌ ಆಗಸದಲ್ಲಿ ವರ್ಣರಂಜಿತ ಚಿತ್ರಕಲೆ ಕಂಡು ವಿಸ್ಮಯ ಪಡುವ ಅವಕಾಶ ಪ್ರಾಪ್ತವಾಯಿತು. 

19 ಮಹಡಿ ಎತ್ತರದ ಅಟ್ಲಾಸ್‌ ರಾಕೆಟ್‌ ಎರಡು ಹಂತಗಳನ್ನು ಹೊಂದಿದ್ದು  ಒಂದರಲ್ಲಿ ಲ್ಯಾಂಡರ್‌ ಮತ್ತು ಇನ್ನೊಂದರಲ್ಲಿ ಜೆಟ್‌ ಪ್ರೊಪಲ್‌ಶನ್‌ ಲ್ಯಾಬೋರೇಟರಿಯನ್ನು ಒಳಗೊಂಡಿದೆ. ಲಾಕ್‌ಹೀಡ್‌ ಮಾರ್ಟಿನ್‌ ಕಾರ್ಪ್‌ ಮತ್ತು ಬೋಯಿಂಗ್‌ ಕಂಪೆನಿಯ ಭಾಗೀದಾರಿಕೆಯ ಯುನೈಟೆಡ್‌ ಲಾಂಚ್‌ ಅಲಾಯನ್ಸ್‌ ಕೂಟ ಅಟ್ಲಾಸ್‌ 5 ರಾಕೆಟ್‌ ಉಡ್ಡಯನ ಸಂಘಟಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next