Advertisement

ವಾರದಲ್ಲಿ ಮೊದಲ ಸಭೆ: ನ್ಯಾ.ನಾಗಮೋಹನ ದಾಸ್‌

06:25 AM Dec 25, 2017 | Team Udayavani |

ಬೆಂಗಳೂರು: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅಲ್ಪ ಸಂಖ್ಯಾತ ಮಾನ್ಯತೆ ನೀಡುವ ಕುರಿತು ಪರಿಶೀಲಿಸಲು
ರಚನೆಯಾಗಿರುವ ಸಮಿತಿಯ ಮೊದಲ ಸಭೆಯನ್ನು ಒಂದು ವಾರದಲ್ಲಿ ಕರೆಯುವುದಾಗಿ ನ್ಯಾ.ನಾಗಮೋಹನ್‌ ದಾಸ್‌ ಹೇಳಿದ್ದಾರೆ. 

Advertisement

“ಉದಯವಾಣಿ’ ಜೊತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಿರುವ ಬಗ್ಗೆ ಅಧಿಕೃತ ಆದೇಶ ಬಂದಿಲ್ಲ. ಆದರೆ, ಅಧಿಕಾರಿಗಳು ದೂರವಾಣಿ ಮೂಲಕ ಮಾಹಿತಿ ತಿಳಿಸಿದ್ದಾರೆ. ಆದೇಶ ಬಂದ ಮೇಲೆ ಒಂದು ವಾರದಲ್ಲಿ ಸಮಿತಿ ಸದಸ್ಯರ ಸಭೆ ಕರೆದು, ಮುಂದಿನ ನಡೆಯನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.

ಲಿಂಗಾಯತ ಮತ್ತು ವೀರಶೈವ ಎಂಬ ಭಿನ್ನಾಭಿಪ್ರಾಯ ಇರುವುದರಿಂದ ಈ ಬಗ್ಗೆ ಕೂಲಂಕಶ ಅಧ್ಯಯನ ನಡೆಸಿ ವರದಿ
ನೀಡುವುದು ಸವಾಲಿನ ಕೆಲಸ. ಸಮಿತಿಯಲ್ಲಿರುವ ಸದಸ್ಯರು ಸಾಕಷ್ಟು ವಿಷಯ ತಜ್ಞರಿದ್ದಾರೆ. ಅಲ್ಲದೇ ವೀರಶೈವ ಅಥವಾ
ಲಿಂಗಾಯತದ ಪರವಾಗಿ ಬೇಡಿಕೆ ಇಟ್ಟಿರುವವರಿಗೆ ಅವರ ಅಭಿಪ್ರಾಯ ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು
ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇದನ್ನು ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆಂದು ಹೇಳಿದ್ದಾರೆ.

ಸಮಿತಿಯ ಸದಸ್ಯರಾಗಿರುವ ಎಸ್‌.ಜಿ. ಸಿದ್ದರಾಮಯ್ಯ ಅವರು, ನಾವು ಯಾವುದೇ ಪಕ್ಷದ ದಾಸರಲ್ಲ. ನಾವು ಸಾಹಿತ್ಯ
ಸೇವಕರು, ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಂತೆ ನಮ್ಮ ಮುಂದೆ ಸಾಕಷ್ಟು ಚರಿತ್ರೆಯಿದೆ. ವಚನ ಚಳವಳಿ ಸಂದರ್ಭದಲ್ಲಿ ಹುಟ್ಟಿದ ಕೃತಿಗಳು, ಶೂನ್ಯ ಸಂಪಾದನೆ, ಆ ಸಂದರ್ಭದಲ್ಲಿ ಹುಟ್ಟಿಕೊಂಡ ಶೈವ, ವಿಶಿಷ್ಠಾದ್ವೆ„ತ ಸಿದಾಟಛಿಂತಗಳು ಇವೆ. ಅವೆಲ್ಲ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರ ನಿಗದಿ ಪಡಿಸಿರುವ ಕಾಲಮಿತಿಯೊಳಗೆ ವರದಿ ನೀಡಲು ಪ್ರಯತ್ನಿಸಲಾಗುವುದೆಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next