Advertisement

ಹಣಕಾಸು ಹಂಚಿಕೆ ಕಾರ್ಯತಂತ್ರ ಕುರಿತು ಚರ್ಚೆ

07:44 AM Dec 05, 2017 | Team Udayavani |

ನವದೆಹಲಿ: ನೂತನವಾಗಿ ರಚನೆಯಾಗಿರುವ 15ನೇ ಹಣಕಾಸು ಆಯೋಗದ ಮೊದಲ ಸಭೆ ಸೋಮವಾರ ನಡೆಯಿತು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನೂಪ್‌ ಸಿಂಗ್‌, “”ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹಣಕಾಸು ಹಂಚಿಕೆ ಕುರಿತಂತೆ ರಾಜ್ಯಗಳೊಂದಿಗೆ ವ್ಯವಹರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ರಾಷ್ಟ್ರಪತಿಯಿಂದ ರವಾನಿಸಲ್ಪಟ್ಟಿರುವ ಉಲ್ಲೇಖೀತ ನಿಯಮಗಳ ಪ್ರಸ್ತಾವನೆ ಕುರಿತಂತೆಯೂ ಇಲ್ಲಿ ಚರ್ಚಿಸಲಾಯಿತು” ಎಂದು ತಿಳಿಸಿದರು.

Advertisement

ಸರ್ಕಾರದ ಆದಾಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹಂಚಿಕೆಯಾಗಬೇಕಿರುವ ಬಗ್ಗೆ ಕರಡು ಪ್ರತಿ ರೂಪಿಸುವುದು ಆಯೋಗದ ಮೊದಲ ಕಾರ್ಯವಾಗಿದ್ದು, ಈ ಕುರಿತಂತೆ ಸೋಮವಾರ ಸುದೀರ್ಘ‌ ಚರ್ಚೆ ನಡೆಸಲಾಯಿತು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಯೋಜನಾ ಆಯೋಗದ ಮಾಜಿ ಸದಸ್ಯ ಎನ್‌.ಕೆ. ಸಿಂಗ್‌ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್‌ ದಾಸ್‌ ಹಾಗೂ ಆಯೋಗದ ಇತರ ಸದಸ್ಯರಾದ ಅನೂಪ್‌ ಸಿಂಗ್‌, ಅಶೋಕ್‌ ಲಾಹಿರಿ ಹಾಗೂ ರಮೇಶ್‌ ಚಾಂದ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next