Advertisement

Mollywood: ಫಸ್ಟ್‌ ಲುಕ್‌ ರಿಲೀಸ್‌ ಮಾಡಿ ಹೈಪ್‌ ಹೆಚ್ಚಿಸಿದ ಮೋಹನ್‌ ಲಾಲ್‌ ʼಲೂಸಿಫರ್-2ʼ

05:58 PM Nov 11, 2023 | Team Udayavani |

ಕೊಚ್ಚಿ: ಮೋಹನ್‌ ಲಾಲ್‌ ವೃತ್ತಿ ಬದುಕಿನ ದೊಡ್ಡ ಹಿಟ್‌ ಗಳಲ್ಲಿ ಒಂದಾಗಿರುವ ʼ ಲೂಸಿಫರ್ʼ ಸಿನಿಮಾದ ಸೀಕ್ವೆಲ್‌ ಸಟ್ಟೇರಿದ ದಿನದಿಂದ ಸದ್ದು ಮಾಡುತ್ತಿದೆ. ಇದೀಗ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಮಾಡಿ ಕುತೂಹಲ ಹೆಚ್ಚಿಸಿದೆ.

Advertisement

ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿ ಗೆದ್ದ ಸಿನಿಮಾ ʼಲೂಸಿಫರ್ʼ ಎರಡನೇ ಭಾಗಕ್ಕೆ ʼ ಲೂಸಿಫರ್- ಎಂಪುರಾನ್ʼ ಎಂದು ಟೈಟಲ್‌ ಇಡಲಾಗಿದೆ.

ʼಲೂಸಿಫರ್‌ʼನಲ್ಲಿ ಮೋಹನ್‌ಲಾಲ್‌ ಸ್ಟೀಫನ್ ನೆಡುಂಪಲ್ಲಿ ಎಂಬ ರಾಜಕಾರಣಿಯ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದ ಕಥೆಯಲ್ಲಿ ನಡೆಯುವ ಕೆಲ ಘಟನೆಗಳ ಬಳಿಕ ಸ್ಟೀಫನ್ ನೆಡುಂಪಲ್ಲಿ ಪಾತ್ರಕ್ಕೆ ಖುರೇಷಿ ಅಬ್ರಾಮ್ ಎನ್ನುವ ಹೆಸರು ಕೂಡು ಇರುವುದು ಗೊತ್ತಾಗುತ್ತದೆ. ಇದೇ ಪಾತ್ರದ ಸುತ್ತ ಎರಡನೇ ಭಾಗದ ಕಥೆ ಸಾಗಲಿದೆ.

ಮೋಹನ್‌ ಲಾಲ್‌ ಬೆಂಕಿಯಿಂದ ಹೊತ್ತಿಕೊಂಡಿದ್ದ ಟ್ರಕ್‌ಗಳ ಮಧ್ಯದಲ್ಲಿ ಕೈಯಲ್ಲಿ ಮಿಷನ್‌ ಗನ್‌ ಹಿಡಿದು ನಿಂತಿರುವುದನ್ನು ಪೋಸ್ಟರ್‌ ನಲ್ಲಿ ತೋರಿಸಲಾಗಿದೆ.

ಮಲಯಾಳಂ , ತಮಿಳು ,ತೆಲುಗು, ಕನ್ನಡ ಹಾಗೂ ಹಿಂದಿಯಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

Advertisement

ಸದ್ಯ ಈ ವರ್ಷ ಮೋಹನ್‌ ಲಾಲ್‌ ಅವರ ʼನೆರೂʼ ಸಿನಿಮಾ ರಿಲೀಸ್‌ ಆಗಲಿದೆ. ಈ ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗಲಿದೆ. ಇದಾದ ಬಳಿಕ ಲಿಜೋ ಜೋಸ್ ಪೆಲ್ಲಿಸ್ಸೆರಿ ʼಮಲೈಕೊಟ್ಟೈ ವಾಲಿಬನ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next