Advertisement

ಕಮಲ್ ಹಾಸನ್ 67ನೇ ಬರ್ತ್ ಡೇ: ವಿಕ್ರಮ್ ಚಿತ್ರದ ಟೀಸರ್ ಬಿಡುಗಡೆ

01:34 PM Nov 07, 2021 | Team Udayavani |

ಬಾಲಿವುಡ್ ನಟ ಕಮಲ್ ಹಾಸನ್ ನಾಯಕನಾಗಿ ನಟಿಸಿರುವ, ಲೊಕೇಶ್ ಕನಗರಾಜ್ ನಿರ್ದೇಶದ ಬಹು ನಿರೀಕ್ಷಿತ ಚಿತ್ರ ‘ವಿಕ್ರಮ್’ ಚಿತ್ರದ ಟೀಸರ್ ಶನಿವಾರ ಬಿಡುಗಡೆಯಾಗಿದೆ.

Advertisement

ಟೀಸರ್‍ ಗೆ ವೀಕ್ಷಕರಿಂದ ಭಾರಿ ಸ್ಪಂದನೆ ದೊರೆತಿದ್ದು, ಯೂಟ್ಯೂಬ್‍ನಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿಸುಮಾರು 52,000 ಜನರು ಲೈಕ್ ಮಾಡಿದ್ದಾರೆ.

ರಾಜಕಾರಣಿಯೂ ಆಗಿರುವ ಕಮಲ್ ಹಾಸನ್ ಅವರ ಜನ್ಮದಿನದ ಮುನ್ನಾದಿನ, ನಿರ್ದೇಶಕ ಹಾಗೂ ಚಿತ್ರ ತಂಡ ಫಸ್ಟ್ ಲುಕ್ ಬಿಡುಗಡೆ ಮಾಡಿದರು.

ಫಸ್ಟ್ ಲುಕ್ ನಲ್ಲಿ ಜೈಲಿನಲ್ಲಿ ಭಾರಿ ಗುಂಡಿನ ಮಳೆಯನ್ನು ಕಮಲ್ ಅವರು ಕಬ್ಬಿಣದ ಶೀಲ್ಡ್ ಮೂಲಕ ತಡೆಯುವ ದೃಶ್ಯಾವಳಿಗಳಿವೆ. ಇದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಕಮಲ್ ಹಾಸನ್ ಅವರು ಇಂದು(ನವೆಂಬರ್ 7) 67ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.

Advertisement

ವಿಕ್ರಮ್ ಚಿತ್ರಕ್ಕೆ ಅನಿರುದ್ದ್ ಮತ್ತು ಗಿರೀಶ್ ಗಂಗಾಧರನ್ ಛಾಯಾಗ್ರಣ, ಫಿಲೋಮಿನ್ ರಾಜ್ ಅವರ ಸಂಕಲನವಿದ್ದು, ಚಿತ್ರದ ಕಲಾ ನಿರ್ದೇಶಕ ಎನ್. ಸತೀಶ್ ಕುಮಾರ್ ಮಾಡಿದ್ಧಾರೆ.

 

Advertisement

Udayavani is now on Telegram. Click here to join our channel and stay updated with the latest news.

Next