Advertisement

ಗುವಾಹಟಿಯಲ್ಲಿ ಮೊದಲ ಐಪಿಎಲ್‌:ರಾಜಸ್ಥಾನ್‌ ರಾಯಲ್ಸ್‌ -ಪಂಜಾಬ್‌ ಕಿಂಗ್ಸ್‌

12:16 AM Apr 05, 2023 | Team Udayavani |

ಗುವಾಹಟಿ: ಕೂಟದ ಅತ್ಯಂತ ಪ್ರಬಲ ತಂಡವಾಗಿ ಗೋಚರಿಸುತ್ತಿರುವ ರಾಜಸ್ಥಾನ್‌ ರಾಯಲ್ಸ್‌ ತನ್ನ ಎರಡನೇ ತವರಿನಂಗಳವಾದ ಗುವಾಹಟಿಯಲ್ಲಿ ಮೊದಲ ಸಲ ಆಡಲಿಳಿಯಲಿದೆ. ಬುಧವಾರದ ಮೇಲಾಟದಲ್ಲಿ ಸಂಜು ಸ್ಯಾಮ್ಸನ್‌ ಪಡೆಯನ್ನು ಎದುರಿಸಲಿರುವ ತಂಡ ಪಂಜಾಬ್‌ ಕಿಂಗ್ಸ್‌.
ಇದು ಗುವಾಹಟಿಯಲ್ಲಿ ನಡೆಯುವ ಮೊದಲ ಐಪಿಎಲ್‌ ಪಂದ್ಯ. ಹೀಗಾಗಿ ಅಸ್ಸಾಂ ಕ್ರಿಕೆಟ್‌ ಮಂಡಳಿ ಪಂದ್ಯದ ಆರಂಭಕ್ಕೂ ಮುನ್ನ ಲೇಸರ್‌ ಶೋ, ಜಾನ ಪದ ನೃತ್ಯದೊಂದಿಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.

Advertisement

ಇವೆರಡೂ ಮೊದಲ ಪಂದ್ಯದಲ್ಲಿ ಗೆಲು ವಿನ ಸಂಭ್ರಮ ಆಚರಿಸಿದ ತಂಡ ಗಳು. ಪಂಜಾಬ್‌ ಮಳೆಪೀಡಿತ ಆಟ ದಲ್ಲಿ ಕೋಲ್ಕತಾ ನೈಟ್‌ರೈಡರ್ ವಿರುದ್ಧ ಡಿ-ಎಲ್‌ ನಿಯಮದಂತೆ 7 ರನ್ನುಗ ಳಿಂದ ರೋಚಕವಾಗಿ ಜಯಿಸಿತ್ತು. ಇನ್ನೊಂದೆಡೆ ರಾಜಸ್ಥಾನ್‌ 72 ರನ್ನುಗ ಳಿಂದ ಹೈದರಾಬಾದ್‌ ತಂಡವನ್ನು ಬಗ್ಗುಬಡಿದಿತ್ತು. ಗೆಲುವಿನ ಅಭಿಯಾನ ಮುಂದುವರಿಸುವ ತಂಡ ಯಾವುದು ಎಂಬುದು ಈ ಪಂದ್ಯದ ಕೌತುಕ.

ಪರಿಪೂರ್ಣ ಪ್ಯಾಕೇಜ್‌
ಚೊಚ್ಚಲ ಐಪಿಎಲ್‌ ಚಾಂಪಿಯನ್‌ ಹಾಗೂ ಕಳೆದ ಬಾರಿಯ ರನ್ನರ್ ಅಪ್‌ ಖ್ಯಾತಿಯ ರಾಜಸ್ಥಾನ್‌ ರಾಯಲ್ಸ್‌ ಒಂದು ಪರಿಪೂರ್ಣ ಕ್ರಿಕೆಟ್‌ ಪ್ಯಾಕೇಜ್‌ ಹೊಂದಿರುವ ತಂಡ. ಬ್ಯಾಟಿಂಗ್‌ ವಿಭಾ ಗದ ಬಲಿಷ್ಠರಾದ ಯಶಸ್ವಿ ಜೈಸ್ವಾಲ್‌, ಜಾಸ್‌ ಬಟ್ಲರ್‌, ನಾಯಕ ಸಂಜು ಸ್ಯಾಮ್ಸನ್‌ ಹೈದರಾಬಾದ್‌ ವಿರುದ್ಧ ಭರ್ಜರಿ ಅರ್ಧ ಶತಕ ಸಿಡಿಸಿದ್ದರು. ಕೆಳ ಸರದಿಯ ಸಿಮ್ರನ್‌ ಹೆಟ್‌ಮೈರ್‌ ಅತ್ಯಂತ ಅಪಾಯಕಾರಿ ಬ್ಯಾಟರ್‌. ಮಧ್ಯಮ ಕ್ರಮಾಂಕದ ದೇವದತ್ತ ಪಡಿಕ್ಕಲ್‌, ರಿಯಾನ್‌ ಪರಾಗ್‌ ಕೂಡ ಉತ್ತಮ ಪ್ರದರ್ಶನ ನೀಡಬಲ್ಲರು.

ರಾಜಸ್ಥಾನ್‌ ಬೌಲಿಂಗ್‌ ವಿಭಾಗ ಕೂಡ ಘಾತಕ. ಟ್ರೆಂಟ್‌ ಬೌಲ್ಟ್, ಜೇಸನ್‌ ಹೋಲ್ಡರ್‌, ನವದೀಪ್‌ ಸೈನಿ, ಟೀಮ್‌ ಇಂಡಿಯಾದ ಸ್ಪಿನ್‌ದ್ವಯರಾದ ಆರ್‌. ಅಶ್ವಿ‌ನ್‌, ಯಜುವೇಂದ್ರ ಚಹಲ್‌ ಅವರನ್ನು ಒಳಗೊಂಡಿದೆ. ಚಹಲ್‌ 17ಕ್ಕೆ 4 ವಿಕೆಟ್‌ ಉಡಾಯಿಸಿ ಹೈದರಾಬಾದ್‌ ತಂಡವನ್ನು ಹೆದರಿಸಿದ್ದರು. ಬೌಲ್ಟ್ ಕೂಡ ಬೊಂಬಾಟ್‌ ಬೌಲಿಂಗ್‌ ನಡೆಸಿದ್ದರು. ಸಂದೀಪ್‌ ಶರ್ಮ, ಕುಲದೀಪ್‌ ಸೇನ್‌, ಆ್ಯಡಂ ಝಂಪ, ಒಬೆಡ್‌ ಮೆಕಾಯ್‌ ಮೊದಲಾದವರು ರೇಸ್‌ನಲ್ಲಿದ್ದಾರೆ.
ರಾಜಸ್ಥಾನ್‌ ತಂಡದ ಮೊದಲ ಎದುರಾಳಿ ಹೈದರಾಬಾದ್‌ ಅಷ್ಟೇನೂ ಬಲಿಷ್ಠವಾಗಿರಲಿಲ್ಲ. ಹೀಗಾಗಿ ಪಂಜಾಬ್‌ ವಿರುದ್ಧ ನಿಜವಾದ ಸವಾಲು ಎದುರಾಗಲಿದೆ.

ಪಂಜಾಬ್‌ ಬ್ಯಾಟಿಂಗ್‌ ಓಕೆ
ಪಂಜಾಬ್‌ ಕಿಂಗ್ಸ್‌ ಅತ್ಯುತ್ತಮ ದರ್ಜೆಯ ಬ್ಯಾಟರ್‌ಗಳನ್ನು ಹೊಂದಿ ರುವ ತಂಡ. ಆದರೆ ಬೌಲಿಂಗ್‌ ವಿಷಯದಲ್ಲಿ ಇದನ್ನೇ ಹೇಳಲಾಗದು.

Advertisement
Advertisement

Udayavani is now on Telegram. Click here to join our channel and stay updated with the latest news.

Next