Advertisement
ಇದಕ್ಕುತ್ತರವಾಗಿ ಆಸ್ಟ್ರೇಲಿಯ ತನ್ನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದು 13 ರನ್ ಗಳಿಸುವಷ್ಟರಲ್ಲಿ ಡೇವಿಡ್ ವಾರ್ನರ್ ಅವರ ವಿಕೆಟನ್ನು ಕಳೆದುಕೊಂಡಿದೆ. ಮೊದಲ 25 ಓವರ್ ಮುಗಿದಾಗ ಆಸ್ಟ್ರೇಲಿಯ ಮೂರು ವಿಕೆಟಿಗೆ 108 ರನ್ ಗಳಿಸಿದೆ. ಸ್ಮಿತ್ 40 ರನ್ನುಗಳೊಂದಿಗೆ ಆಡುತ್ತಿದ್ದಾರೆ.
ಆರಂಭಿಕ ರೋರಿ ಬರ್ನ್ಸ್ ಅವರ ಚೊಚ್ಚಲ ಶತಕದಿಂದಾಗಿ ಇಂಗ್ಲೆಂಡ್ ಸುಸ್ಥಿತಿಗೆ ತಲುಪುವಂತಾಯಿತು. ಆಸ್ಟ್ರೇಲಿಯ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಅವರು ರನ್ ಪೇರಿಸುತ್ತ ಹೋದರು. ಜೋ ರೂಟ್ ಜತೆ ದ್ವಿತೀಯ ವಿಕೆಟಿಗೆ ಶತಕದ ಜತೆಯಾಟ ನಡೆಸಿದರು. ಆರನೆಯವರಾಗಿ ಔಟಾಗುವ ಮೊದಲು ಅವರು 312 ಎಸೆತ ಎದುರಿಸಿದ್ದು 17 ಬೌಂಡರಿ ನೆರವಿನಿಂದ 133 ರನ್ ಗಳಿಸಿದ್ದರು. ರೂಟ್ ಮತ್ತು ಬೆನ್ ಸ್ಟೋಕ್ಸ್ ಕೂಡ ಅರ್ಧಶತಕ ಹೊಡೆದು ತಂಡದ ಮೊತ್ತವನ್ನು ಏರಿಸಲು ನೆರವಾದರು. 300 ರನ್ ತಲುಪಿದ ವೇಳೆ ತಂಡ 8 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಬೌಲರ್‌ಗಳಾದ ಕ್ರಿಸ್ ವೋಕ್ಸ್ ಮತ್ತು ಸ್ಟುವರ್ಟ್ ಬ್ರಾಡ್ ಭರ್ಜರಿ ಆಟವಾಡಿದ್ದರಿಂದ ಇಂಗ್ಲೆಂಡಿನ ಮುನ್ನಡೆ 90ರವರೆಗೆ ಏರುವಂತಾಯಿತು. ಅವರಿಬ್ಬರು 9ನೇ ವಿಕೆಟಿಗೆ 65 ರನ್ ಪೇರಿಸಿದ್ದರು. ವೋಕ್ಸ್ 37 ರನ್ ಗಳಿಸಿ ಅಜೇಯರಾಗಿ ಉಳಿದರು.
Related Articles
ಆಸ್ಟ್ರೇಲಿಯ 284 ಮತ್ತು 1 ವಿಕೆಟಿಗೆ 17; ಇಂಗ್ಲೆಂಡ್ 374 (ರೋರಿ ಬರ್ನ್ಸ್ 133, ರೂಟ್ 57, ಬೆನ್ ಸ್ಟೋಕ್ಸ್ 50, ಕ್ರಿಸ್ ವೋಕ್ಸ್ 37 ಔಟಾಗದೆ, ಪ್ಯಾಟ್ ಕಮಿನ್ಸ್ 84ಕ್ಕೆ 3, ನಥನ್ ಲಿಯೋನ್ 112ಕ್ಕೆ 3).
Advertisement