Advertisement

ದೇಶದಲ್ಲಿಯೇ ಪ್ರಥಮ!;ನಮಾಜ್‌ಗೆ ಜಮಿತಾ ನೇತೃತ್ವ

11:26 AM Jan 28, 2018 | Team Udayavani |

ಮಲಪ್ಪುರಂ: ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೇರಳದಲ್ಲಿ ಮುಸ್ಲಿಂ ಮಹಿಳೆ ಜಮಿತಾ (34)ಎಂಬುವರು ಶುಕ್ರವಾರ (ಜ.26)ದ ನಮಾಜ್‌ (ಜುಮಾ)ನ ನೇತೃತ್ವ ವಹಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

Advertisement

 ಬಹುತೇಕ ಸಂದರ್ಭಗಳಲ್ಲಿ ಜುಮಾವನ್ನು ಪುರುಷ ಧರ್ಮ ಗುರುಗಳೇ ನಡೆಸಿಕೊಡುತ್ತಾರೆ. ಆದರೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಇಮಾಮ್‌ ಆಗಿರುವ ಜಮಿತಾ ಅವರು ಈ ಕಾರ್ಯ ನಡೆಸಿಕೊಟ್ಟಿದ್ದಾರೆ.  ಕುರಾನ್‌ ಸುನ್ನತ್‌ ಸೊಸೈಟಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅವರು, ವೃತ್ತಿಯಲ್ಲಿ ಅಧ್ಯಾಪಕಿಯಾಗಿದ್ದಾರೆ. ಮೂಲತಃ ಅವರು ತಿರುವನಂತಪುರದವರು. ಕೆಲ ವರ್ಷಗಳ ಹಿಂದೆ ಜಮಿತಾರಿಗೆ ಬೆದರಿಕೆ ಕರೆಗಳೂ ಬಂದಿದ್ದವು.

 ಶುಕ್ರವಾರ ನಡೆದ ಪ್ರಾರ್ಥನೆಯಲ್ಲಿ ಸುಮಾರು 80 ಮಂದಿ ಭಾಗವಹಿಸಿದ್ದರು. ಕುರಾನ್‌ ಸುನ್ನತ್‌ ಸೊಸೈಟಿಯ ಕಾರ್ಯಾಲಯದಲ್ಲಿ ಈ ಪ್ರಾರ್ಥನೆ ನಡೆದಿದೆ.ಈ ಬಗ್ಗೆ ಮಾತನಾಡಿದ ಅವರು, “ಕುರಾನ್‌ನಲ್ಲಿ ಎಲ್ಲೂ ಮಹಿಳೆಯರ ಬಗ್ಗೆ ತಾರತಮ್ಯ ಮಾಡಲಾಗಿಲ್ಲ. ಜತೆಗೆ ಇಮಾಮ್‌ ಆಗಿ ಕರ್ತವ್ಯ ನಿರ್ವಹಿಸಬಾರದು ಎಂದು ಹೇಳಿಲ್ಲ. ಇದೇ ಮೊದಲ ಬಾರಿಗೆ ನಾನು ಪ್ರಾರ್ಥನೆಯ ನೇತೃತ್ವ ವಹಿಸುತ್ತಿದ್ದೇನೆ. ನಮ್ಮ ಕಚೇರಿಯಲ್ಲಿ ಪ್ರತಿ ಶುಕ್ರವಾರ ಈ ರೀತಿ ಪ್ರಾರ್ಥನೆ ನಡೆಸಿಕೊಡುತ್ತಿದ್ದೇನೆ’ ಎಂದು ಜಮಿತಾ ಹೇಳಿದ್ದಾರೆ. 

ಮಸೀದಿಯಲ್ಲಿಯೇ ಶುಕ್ರವಾರದ ಪ್ರಾರ್ಥನೆ ನಡೆಯಬೇಕು ಎಂಬ ನಿಯಮ ಇಲ್ಲ ಎಂದೂ ಅವರು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಎಲ್ಲರ ಜತೆ ಚರ್ಚೆ ನಡೆಸಿಯೇ ಪ್ರಾರ್ಥನೆಯ ನೇತೃತ್ವ ವಹಿಸಿದ್ದಾಗಿ ಹೇಳಿದ್ದಾರೆ ಜಮಿತಾ. ಈ ಬೆಳವಣಿಗೆ ಕೇರಳದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next