Advertisement

Brain: ಮೊದಲ ಬಾರಿಗೆ ಮನುಷ್ಯನ ಮೆದುಳಿಗೆ ಚಿಪ್‌ ಅಳವಡಿಕೆ

01:00 AM Jan 31, 2024 | Team Udayavani |

ಸ್ಯಾನ್‌ಫ್ರಾನ್ಸಿಸ್ಕೋ: ಜಗತ್ತಿನ ನಂ.1 ಉದ್ಯಮಿ ಎಲಾನ್‌ ಮಾಸ್ಕ್ ನೇತೃತ್ವದ ನ್ಯೂರಾಲಿಂಕ್‌ ಸ್ಟಾರ್ಟ್‌ಅಪ್‌ ಕಂಪೆನಿ ಮೊದಲ ಬಾರಿಗೆ ಮನುಷ್ಯನ ಮೆದು ಳಿಗೆ ಕೃತಕ ಬುದ್ಧಿ ಮತ್ತೆಯುಳ್ಳ ಚಿಪ್‌ ಅಳವಡಿಸಿ ಯಶ ಸ್ವಿಯಾಗಿದೆ. ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಮಸ್ಕ್ ಬರೆದುಕೊಂಡಿದ್ದಾರೆ.

Advertisement

“ನರರೋಗಿಯ ಮೆದುಳಿಗೆ ರೊಬೋ ಟಿಕ್‌ ಚಿಪ್‌ ಅಳವಡಿಸಲಾಗಿದ್ದು, ಆ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾನೆ. ಈ ಪ್ರಯೋಗವು, ನರರೋಗ ಹಾಗೂ ಪಾರ್ಕಿನ್‌ಸನ್‌ ರೋಗಿಗಳಿಗೆ ನೆರವಾಗಲಿದೆ. ಇದೊಂದು ಭರವಸೆಯ ಪ್ರಯೋಗ’ ಎಂದು ತಿಳಿಸಿದ್ದಾರೆ. ಈ ಚಿಪ್‌ ಯಾವುದೇ ವೈಯರ್‌ ಸಹಾಯವಿಲ್ಲದೇ ಕಂಪ್ಯೂಟರ್‌ ಅಥವಾ ಸ್ಮಾರ್ಟ್‌ಫೋನ್‌ ಜತೆ ಸಂಪರ್ಕವನ್ನು ಹೊಂದಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next