Advertisement
ಯುಎಇಯಲ್ಲಿ ಹಿಂದೂ ಮೊದಲ ದೇಗುಲವಿದು. ಇದನ್ನು ಉಕ್ಕು ಮತ್ತು ಕಬ್ಬಿಣ ಬಳಕೆ ಮಾಡದೆಯೇ ಭಾರತೀಯ ಸಾಂಪ್ರದಾಯಿಕ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ಹಾರು ಬೂದಿಯಿಂದ ನಿರ್ಮಿಸಲಾದ ಕಾಂಕ್ರೀಟ್ ಬಳಸ ಲಾಗುತ್ತಿದೆ. ಬೋಚಾಸನಸ್ವಾಮಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸತ್ (ಬಿಎಪಿಎಸ್) ಅದರ ಹೊಣೆ ಹೊತ್ತುಕೊಂಡಿದೆ. ಗುರುವಾರ ನಿರ್ಮಾಣ ಆರಂಭವಾಗಿದ್ದು, ಯುಇಎ ಮತ್ತು ಇತರ ಅರಬ್ ರಾಷ್ಟ್ರಗಳಿಂದ ಬಂದ ಸಾವಿರಾರು ಭಾರತೀಯರು ಈ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಂಡರು.
ಕಾಮಗಾರಿಯ ಬಗ್ಗೆ ವಿವರಣೆ ನೀಡಿರುವ ಸಮಿತಿ ವಕ್ತಾರ ಅಶೋಕ್ ಕೋಟೆಚಾ, ದೇಗುಲದ ಅಡಿಪಾಯಕ್ಕೆ ಕಬ್ಬಿಣ, ಉಕ್ಕು ಬಳಸುತ್ತಿಲ್ಲ. ಹಾರು ಬೂದಿಯ ಕಾಂಕ್ರೀಟ್ ಬಲಿಷ್ಠವಾಗಿದ್ದು, ರಾಸಾಯನಿಕ ಪ್ರತಿರೋಧ ಗುಣ ಹೊಂದಿ ರುವುದರಿಂದ ಬಾಳಿಕೆ ಹೆಚ್ಚು ಎಂದಿದ್ದಾರೆ.
Related Articles
ನಿರ್ಮಾಣ ಆರಂಭದ ವೇಳೆ ಯುಎಇಯಲ್ಲಿ ಭಾರತದ ರಾಯಭಾರಿ ಪವನ್ ಕಪೂರ್ ಮತ್ತು ದುಬಾೖಯಲ್ಲಿರುವ ಭಾರತದ ದೂತಾವಾಸ ಕಚೇರಿಯ ಕಾನ್ಸುಲ್ ಜನರಲ್ ವಿಪುಲ್, ಭಾರತೀಯ ವ್ಯಾಪಾರ ಸಮುದಾಯದ ಪ್ರಮುಖ ಸದಸ್ಯರು ಮತ್ತು ಸಮುದಾಯ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ), ದುಬಾೖ ಮತ್ತು ಅಬುಧಾಬಿಯ ಸದಸ್ಯರು ಹಾಜರಿದ್ದರು.
Advertisement