Advertisement

ಈಡನ್‌ ಗಾರ್ಡನ್ಸ್‌ನಲ್ಲಿ ಮೊದಲ ಡೇ ನೈಟ್‌ ಟೆಸ್ಟ್‌?

09:45 AM Oct 29, 2019 | Sriram |

ಹೊಸದಿಲ್ಲಿ: ಭಾರತದಲ್ಲಿ ಮೊದಲ ಡೇ ನೈಟ್‌ ಪಂದ್ಯಕ್ಕೆ ಕಾಲ ಸನ್ನಿಹಿತವಾದಂತಿದೆ. ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯುವ ಭಾರತ-ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್‌ ಪಂದ್ಯವನ್ನು ಹೊನಲು ಬೆಳಕಿನಲ್ಲಿ ಆಡಿಸುವ ಕುರಿತು ಬಿಸಿಸಿಐ ಯೋಚಿಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಜತೆ ಚರ್ಚೆ ನಡೆಸಿದೆ.

Advertisement

ಸೌರವ್‌ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಡೇ ನೈಟ್‌ ಟೆಸ್ಟ್‌ ಕುರಿತು ಒಲವು ತೋರಿದ್ದು, ನಾಯಕ ವಿರಾಟ್‌ ಕೊಹ್ಲಿ ಕೂಡ ಇದಕ್ಕೆ ಸಮ್ಮತಿಸಿದ್ದಾಗಿ ಈಗಾಗಲೇ ವರದಿಯಾಗಿದೆ.

“ಬಿಸಿಸಿಐ ಡೇ ನೈಟ್‌ ಟೆಸ್ಟ್‌ ಆಯೋಜಿಸುವ ಕುರಿತು ಚರ್ಚಿಸಿದೆ. ಈ ಬಗ್ಗೆ ಆಲೋಚಿಸಿ ಕೂಡಲೇ ನಿರ್ಧಾರ ತೆಗೆದುಕೊಳ್ಳಲಿದ್ದೇವೆ’ ಎಂದು ಬಾಂಗ್ಲಾ ಕ್ರಿಕೆಟ್‌ ಮಂಡಳಿಯ ಮುಖ್ಯಸ್ಥ ಅಕ್ರಮ್‌ ಖಾನ್‌ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಾಂಗ್ಲಾ ಕ್ರಿಕೆಟ್‌ ಮಂಡಳಿ ಮುಖ್ಯಸ್ಥ ನಿಜಾಮುದ್ದೀನ್‌ ಚೌಧರಿ, “ಮೊದಲು ಆಟಗಾರರು ಮತ್ತು ತಂಡದ ಆಡಳಿತ ಮಂಡಳಿ ಜತೆ ಚರ್ಚಿಸಬೇಕಿದೆ. ಏಕೆಂದರೆ ಇದಕ್ಕೆ ಪಿಂಕ್‌ ಬಾಲ್‌ನಲ್ಲಿ ಆಡಿದ ಅನುಭವ ಬೇಕು. ಇದಕ್ಕೆ ಸೂಕ್ತ ಅಭ್ಯಾಸದ ಅಗತ್ಯವಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next