ಬೆಳಗಾವಿ: ಅನರ್ಹತೆ ಶಿಕ್ಷೆಗೆ ಗುರಿಯಾಗಿರುವ ಬೆಳಗಾವಿ ಜಿಲ್ಲೆಯ ಮೂವರು ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಮೊದಲ ದಿನ ಸೋಮವಾರ ಒಟ್ಟು ಒಂಬತ್ತು ಉಮೇದುವಾರರು ನಾಮಪತ್ರ ಸಲ್ಲಿಸಿದ್ದಾರೆ. ಈ ಎಲ್ಲ ನಾಮಪತ್ರಗಳು ಕಾಂಗ್ರೆಸ್ ಪಕ್ಷದಿಂದ ಸಲ್ಲಿಕೆಯಾಗಿರುವುದು ವಿಶೇಷ.
ಮೊದಲ ದಿನ ಅಥಣಿ ಕ್ಷೇತ್ರಕ್ಕೆ ನಾಲ್ವರು ಕಾಂಗ್ರೆಸ್‌ದಿಂದ ನಾಮಪತ್ರ ಸಲ್ಲಿಸಿದರೆ, ಕಾಗವಾಡ ಕ್ಷೇತ್ರದಿಂದ ಐವರು ಅಭ್ಯರ್ಥಿಗಳು ಕಾಂಗ್ರೆಸ್ ಹೆಸರಿನಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಆದರೆ ತೀವ್ರ ಕುತೂಹಲ ಕೆರಳಿಸಿರುವ ಗೋಕಾಕ ಕ್ಷೇತ್ರದಿಂದ ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಕಾಗವಾಡ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ದಿಗ್ವಿಜಯ ಪವಾರ ದೇಸಾಯಿ(ಅಥಣಿ), ಚಂದ್ರಕಾಂತಇಮ್ಮಡಿ(ಬಾಳಿಗೇರಿ), ಓಂಪ್ರಕಾಶ ಪಾಟೀಲ (ಶಿವನೂರ), ಬಾಬಾಸಾಹೇಬ ಶಿಂದೆ(ಅನಂತಪುರ), ರವೀಂದ್ರ ಗಾಣಿಗೇರ(ಐನಾಪೂರ) ನಾಮಪತ್ರ ಸಲ್ಲಿಸಿದ್ದಾರೆ. ಅಥಣಿ ಕ್ಷೇತ್ರದಿಂದ ಮಾಜಿ ಶಾಸಕ ಶಹಜಹಾನ್ ಡೊಂಗರಗಾವ್, ಸತ್ಯೆಪ್ಪ ಬೀರಪ್ಪ ಬಾಗೆನ್ನವರ, ಸಿದ್ರಾಮಗೌಡ ಪುರುಷೋತ್ತಮ ಪಾಟೀಲ, ಗಜಾನನ ಬಾಲಚಂದ್ರ ಮಂಗಸೂಳಿ ನಾಮಪತ್ರ ಸಲ್ಲಿಸಿದ್ದಾರೆ.
ಅಥಣಿ ಮತ್ತು ಕಾಗವಾಡ ವಿಧಾನಸಭಾ ಮತ ಕ್ಷೇತ್ರಗಳಿಗೆ ಅ. 21ರಂದು ನಡೆಯಲಿರುವ ಉಪ ಚುನಾವಣೆಗಾಗಿ ಸೋಮವಾರ ಕಾಂಗ್ರೆಸ್ ಪಕ್ಷದಿಂದ 9 ನಾಮ ಪತ್ರಗಳು ಸಲ್ಲಿಕೆಯಾಗಿವೆ. ಅಥಣಿ ಮಿನಿ ವಿಧಾನಸಭೆಯಲ್ಲಿ ಅಥಣಿಯಿಂದ ನಾಲ್ಕು ಜನ ಕಾಂಗ್ರೆಸ್ ಪಕ್ಷದಿಂದ ನಾಮಪತ್ರಗಳನ್ನು ಸಲ್ಲಿಸಿದ್ದರೆ ಇನ್ನು ಕಾಗವಾಡದಿಂದ ಕಾಂಗ್ರೆಸ್ ಪಕ್ಷದಿಂದ 5 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮ ಪತ್ರ ಸಲ್ಲಿಕೆಯ ಮೊದಲ ದಿನವಾದ ಸೋಮವಾರ ಅಥಣಿ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಶಹಜಾನ ಡೊಂಗರಗಾಂವ, ಸತ್ಯಪ್ಪ ಬಾಗೇನ್ನವರ, ಸಿದ್ರಮಗೌಡ ಪಾಟೀಲ(ಸುರೇಶ ಪಾಟೀಲ ಹಾಗೂ ಗಜಾನನ ಮಂಗಸೂಳಿ ನಾಮಪತ್ರ ಸಲ್ಲಿಸಿದ್ದಾರೆ.
ಅದೇ ರೀತಿಯಾಗಿ ಕಾಗವಾಡ ವಿಧಾನಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಾ ಆಕಾಂಕ್ಷಿಗಳಾಗಿ ಚಂದ್ರಕಾಂತ ಇಮಡಿ, ದಿಗ್ವಿಜಯ ಪವಾರದೇಸಾಯಿ, ರವೀಂದ್ರ ಗಾಣಗೇರ, ಓಂಪ್ರಕಾಶ ಪಾಟೀಲ ಹಾಗೂ ದಾದಾಸಾಬ ಸಿಂಧೆ ನಾಮ ಪತ್ರವನ್ನು ಸಲ್ಲಿಸಿದ್ದಾರೆ.ಈ ವೇಳೆ ಸತ್ಯಾಪ್ಪ ಬಾಗೇನ್ನವರ, ಸುರೇಶಗೌಡ ಪಾಟೀಲ, ಶಿವು ಗುಡ್ಡಾಪುರ, ಲೇನಿನ ಹಳಿಂಗಳಿ, ಮಾಂತೇಶ ಬಾಡಗಿ, ಅನೀಲ ಬಜಂತ್ರಿ, ಮಂಜು ಹೋಳಿಕಟ್ಟಿ, ರಫೀಕ ಪಟೇಲ ಸೇರಿದಂತೆ ಅನೇಕರು ಇದ್ದರು.