ಕೋಲಾರ: ಕಸಾಪ ತನ್ನ 105 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಗರದ ಟಿ. ಚೆನ್ನಯ್ಯ ರಂಗಮಂದಿರದಲ್ಲಿ ಶನಿವಾರ ವಿದ್ಯುಕ್ತವಾಗಿ ಆರಂಭವಾಯಿತು.
ಸಂಸದ ಎಸ್. ಮುನಿಸ್ವಾಮಿ ಸಮ್ಮೇಳನ ಉದ್ಘಾಟನೆ ಮಾಡಿದರು. ಸ್ಥಳೀಯ ಐತಿಹಾಸಿಕ ಪೌರಾಣಿಕ ಹಿನ್ನೆಲೆ ಸಾಹಿತ್ಯವಾಗಿ ಪ್ರಕಟವಾಗಬೇಕು. ಈ ವಿಚಾರಗಳು ಪಠ್ಯವಾಗಬೇಕು. ಯುವ ಸಾಹಿತಿಗಳನ್ನು ಪ್ರೋತ್ಸಾಹಿಸಬೇಕು ಎಂದು ಎಸ್. ಮುನಿಸ್ವಾಮಿ ಹೇಳಿದರು.
ಸಮ್ಮೇಳನ ಸರ್ವಾಧ್ಯಕ್ಷ ಡಾ.ಎಲ್.ಹನುಮಂತಯ್ಯ, ದಲಿತ ಸಾಹಿತ್ಯಕ್ಕೆ ಶರಣರ ಚಳವಳಿ, ದಲಿತ ಹೋರಾಟ ಮತ್ತು ಕುವೆಂಪು ಸಾಹಿತ್ಯ ಪ್ರೇರಣೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷ ಮನು ಬಳಿಗಾರ ಪ್ರಾಸ್ತಾವಿಕ ಮಾತನಾಡಿದರು.
ಸಮ್ಮೇಳನದಲ್ಲಿ ಐದು ದಲಿತ ಸಂಪುಟಗಳ ಬಿಡುಗಡೆ ಮಾಡಲಾಯಿತು. ತುಂತುರು ಮಳೆ ಸಮ್ಮೇಳನಕ್ಕೆ ಅಡ್ಡಿಯಾದರೂ ಉತ್ಸಾಹ ಹುರುಪು ಕಡಿಮೆ ಆಗಿರಲಿಲ್ಲ.