Advertisement

ನಿರಾಳವಾಗಿದ್ದ ರಾಮನಗರದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆ?

12:37 PM May 25, 2020 | keerthan |

ರಾಮನಗರ: ಇದುವರೆಗೆ ಒಂದೇ ಒಂದು ಕೋವಿಡ್ 19 ಪಾಸಿಟಿವ್ ಪ್ರಕರಣ ಇಲ್ಲದ ರಾಮನಗರ ಜಿಲ್ಲೆಯಲ್ಲೂ ಒಂದು ಪ್ರಕರಣ ಪತ್ತೆಯಾಗಿದೆ ಎಂದು ವರದಿಯಾಗಿದೆ.

Advertisement

ಚೆನ್ನೈನಿಂದ ಮಾಗಡಿಗೆ ಆಗಮಿಸಿರುವ ಮೂರು ವರ್ಷದ ಮಗುವೊಂದರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಸದ್ಯ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆಗೆ ದಾಖಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿಗಳು ಈ ವಿಚಾರವನ್ನು ದೃಢೀಕರಿಸಿಲ್ಲ. ಮಾಗಡಿ ಮೂಲದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರೊಬ್ಬರಿಗೂ ಕೋವಿಡ್ 19 ಸೋಂಕು ತಗುಲಿದ್ದು ತುಮಕೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next