Advertisement

ಮೂರು ವ್ಯಕ್ತಿಗಳ ಡಿಎನ್‌ಎಯುಳ್ಳ ಮಗು ಜನನ!

08:30 PM May 10, 2023 | Team Udayavani |

ಲಂಡನ್‌: ಜಗತ್ತಿನಲ್ಲೇ ಮೊದಲ ಬಾರಿಗೆ ಯುನೈಟೆಂಡ್‌ ಕಿಂಗ್‌ಡಂ(ಯುಕೆ)ನಲ್ಲಿ ಮೂವರು ವ್ಯಕ್ತಿಗಳ ಡಿಎನ್‌ಎ ಮೂಲಕ ಶಿಶುವೊಂದು ಜನಿಸಿದೆ!

Advertisement

ಮಗುವು ಶೇ.99ರಷ್ಟು ಡಿಎನ್‌ಎಯನ್ನು ತನ್ನ ಹೆತ್ತವರಿಂದ (ಅಪ್ಪ-ಅಮ್ಮ) ಪಡೆದರೆ, ಶೇ.0.1ರಷ್ಟು ಡಿಎನ್‌ಎಯನ್ನು ಮೂರನೇ ವ್ಯಕ್ತಿಯಿಂದ(ದಾನಿ ಮಹಿಳೆ) ಪಡೆದಿದೆ ಎಂದು ಯು.ಕೆ. ಹ್ಯೂಮನ್‌ ಫ‌ರ್ಟಿಲೈಸೇಷನ್‌ ಆ್ಯಂಡ್‌ ಎಂಬ್ರಯಾಲಜಿ ಅಥಾರಿಟಿ(ಎಚ್‌ಎಫ್ಇಎ) ತಿಳಿಸಿದೆ.

ಅಪಾಯಕಾರಿ ಮೈಟೋಕಾಂಡ್ರಿಯಾದ ಕಾಯಿಲೆಯಿಂದ ಮಗುವನ್ನು ರಕ್ಷಿಸುವ ಸಲುವಾಗಿ ಈ ವಿಶಿಷ್ಟವಾದ ಫ‌ಲವತ್ತತೆ ವಿಧಾನವನ್ನು ಬಳಸಿಕೊಳ್ಳಲಾಗಿದೆ. ಮೂರನೇ ಡಿಎನ್‌ಎ ಇದ್ದರೂ, ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಹೆತ್ತವರ ಡಿಎನ್‌ಎಯೇ ಪರಿಣಾಮ ಬೀರಲಿದೆ ಎಂದು ಪ್ರಾಧಿಕಾರ ಹೇಳಿದೆ.

ಈ ವಿಧಾನದಲ್ಲಿ, ಫ‌ಲಿತ ಅಂಡಾಣುವಿನಲ್ಲಿರುವ ನ್ಯೂಕ್ಲಿಯರ್‌ ಡಿಎನ್‌ಎಯನ್ನು ಆರೋಗ್ಯಪೂರ್ಣ ಮೈಟೋಕಾಂಡ್ರಿಯಾವನ್ನು ಹೊಂದಿರುವ ದಾನಿಯ ಅಂಡಾಣುವಿಗೆ ಜೋಡಿಸಲಾಗುತ್ತದೆ. ಒಟ್ಟಿನಲ್ಲಿ, ಇಲ್ಲಿ ತಾಯಿಯ ಅಂಡಾಣು, ತಂದೆಯ ವೀರ್ಯಾಣು ಮತ್ತು ದಾನಿಯ ಅಂಡಾಣುವನ್ನು ಸೇರಿಸಿ ಐವಿಎಫ್ ವಿಧಾನದ ಮೂಲಕ ಈ ಶಿಶುವಿಗೆ ಜನ್ಮ ನೀಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next