Advertisement

ಸಂಸ್ಥೆ ಅಭಿವೃದ್ಧಿ ಹೊಂದಿ ಗ್ರಾಹಕರ ಮನೆ-ಮನ ಬೆಳಗಲಿ: ಹರೀಶ್‌ ಜಿ. ಅಮೀನ್‌

12:29 PM Nov 10, 2021 | Team Udayavani |

ವಿಲೇಪಾರ್ಲೆ: ಕೋವಿಡ್‌ ಕಠಿನ ಸಮಯಲ್ಲೂ ಅಪಾರ ಪರಿಶ್ರ ಮದ ಮೂಲಕ ತನ್ನ ವ್ಯವಹಾರವನ್ನು ಮುಂದುವರಿಸಿಕೊಂಡು ಬಂದಿರುವ ವಿಲೇಪಾರ್ಲೆ ಪಶ್ಚಿಮದ ಎಸ್‌ವಿ ರೋಡ್‌ನ‌ ಶ್ರೀ ಬಾಲಾಜಿ ಸಿಲ್ಕ್ ಹೌಸ್‌ ಗಣ್ಯರ ಸಮ್ಮುಖದಲ್ಲಿ  ಪ್ರಥಮ ವಾರ್ಷಿಕ ಸಂಭ್ರಮವನ್ನು ಮಂಗಳವಾರ ಅದ್ದೂರಿಯಾಗಿ ಆಚರಿಸಿಕೊಂಡಿತು. ಸ್ಥಾಪನೆಯಾದ ಒಂದೇ ವರ್ಷದಲ್ಲಿ ಮಹಾನಗರದ ಗ್ರಾಹಕರನ್ನು ತನ್ನತ್ತ ಆಕರ್ಷಿಸಿಕೊಂಡ ಬಾಲಾಜಿ ಸಿಲ್ಕ್ ಹೌಸ್‌ನಲ್ಲಿ ಪ್ರಪ್ರಥಮ ವಾರ್ಷಿ ಕೋತ್ಸವ ಸಮಾರಂಭವನ್ನು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

Advertisement

ಈ ಸಂದರ್ಭ ಸಂಸ್ಥೆಯ ಮಾಲಕರಾದ ರಮಾನಾಥ ಕೋಟ್ಯಾನ್‌ ಮತ್ತು ಸಹೋದರರ ಯಶಸ್ಸಿನ ಸಾಧನೆಯನ್ನು ಅಭಿನಂದಿಸಿ ಮಾತನಾಡಿದ ಹರೀಶ್‌ ಜಿ. ಅಮೀನ್‌, ಮಹಾನಗರದಲ್ಲಿ  ದಕ್ಷಿಣ ಕನ್ನಡಿಗರು ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಹೊಟೇಲ್‌ ಉದ್ಯಮ. ಆದರೆ ಕೋಟ್ಯಾನ್‌ ಸಹೋದರರು ಒಂದು ವಿಶೇಷ ಪರಿಕಲ್ಪನೆಯ ವಸ್ತ್ರ ವಿನ್ಯಾಸ ಉದ್ಯಮ ನಡೆಸಿ ಆ ಮೂಲಕ ಅದನ್ನು ಯಶಸ್ಸಿನತ್ತ ಕೊಂಡೊ

ಯ್ದ ಕಾರ್ಯ ಮೆಚ್ಚುವಂಥದ್ದಾಗಿದೆ. ಉದ್ಯಮವನ್ನು ಸಂತೃಪ್ತಿ, ಸಮೃದ್ಧತೆಯತ್ತ ಕೊಂಡೊಯ್ಯುವ ಜಾಣತನ ಕೋಟ್ಯಾನ್‌ ಸಹೋದರರಲ್ಲಿದೆ. ಮುಂದೆಯೂ ಅವರ ವಸ್ತ್ರ ವಿನ್ಯಾಸದ ಪರಿಕಲ್ಪನೆಯ ಬ್ರಾಂಡ್‌ ದೇಶದ ಉದ್ದಗಲಕ್ಕೂ ಹರಡಲಿ. ದೇಶಾದ್ಯಂತ ಇನ್ನಷ್ಟು ಗ್ರಾಹಕರನ್ನು ಆಕರ್ಷಿಸಿ ಯಶಸ್ವಿ ಉದ್ಯಮಿಗಳಾಗಿ ಮೆರೆದು ಅವರಿಂದ ಸ್ವಜಾತಿ ಬಾಂಧವರ ಕೀರ್ತಿ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಮಹಾರಾಷ್ಟ್ರ ಸೇವಾ ಸಂಘದ ಅಧ್ಯಕ್ಷ ಡಾ| ಹರೀಶ್‌ ಬಿ. ಶೆಟ್ಟಿ  ಮಾತನಾಡಿ, ಓರ್ವ ಛಲವಾದಿ ವ್ಯಕ್ತಿ ಎಲ್ಲ ಸವಾಲುಗಳನ್ನು ಎದುರಿಸಲು ಸಾಧ್ಯ ಎನ್ನುವುದಕ್ಕೆ ಈ ಸಂಸ್ಥೆಯ ಮಾಲಕ ರಮಾನಾಥ ಕೋಟ್ಯಾನ್‌ ಸಾಕ್ಷಿಯಾಗಿದ್ದಾರೆ. ಹಲವಾರು ಸಮಸ್ಯೆ, ಏಳು-ಬೀಳುಗಳ ನಡುವೆ ಮತ್ತೆ ತಲೆ ಎತ್ತಿ ನಿಲ್ಲಬಲ್ಲ ವ್ಯಕ್ತಿತ್ವ ಅವರದ್ದಾಗಿದೆ. ಅವರ ಈ ವ್ಯಕ್ತಿತ್ವವೆ ಅವರ ಯಶಸ್ಸಿಗೆ ಕಾರಣವಾಗಿದೆ. ವಸ್ತ್ರ ಉದ್ಯಮದಲ್ಲಿ ಸ್ಪರ್ಧಾತ್ಮಕ ಮಾರುಕಟ್ಟೆಗಳ ನಡುವೆ ವ್ಯವಹಾರ ನಡೆಸಲು ಸೃಜನಶೀಲತೆ, ಗಟ್ಟಿತನ ಮುಖ್ಯ ಎಂದು ತಿಳಿಸಿ ಅಭಿನಂದಿಸಿದರು.

ಇನ್ನೋರ್ವ ಅತಿಥಿ, ಹೈಕೋರ್ಟ್‌ ನ್ಯಾಯವಾದಿ ಪ್ರದೀಪ್‌ ಶೆಟ್ಟಿ  ಮಾತನಾಡಿ, ಉದ್ಯಮ ಯಶಸ್ವಿಯಾಗಬೇಕಾದರೆ ಅಲ್ಲಿ ಸಫಲತೆಯ ಅಂಕಿಅಂಶಗಳ ಪರಿಗಣನೆ ಅತೀ ಮುಖ್ಯವಾಗಿದೆ. ಉದ್ಯಮವನ್ನು ಕಾಯಕವಾಗಿ ಸ್ವೀಕರಿಸಿ ಅದನ್ನು ಸಫಲತೆಯತ್ತ ಕೊಂಡೊಯ್ಯುವ ಜಾಣತನ ರಮಾನಾಥ ಕೋಟ್ಯಾನ್‌ ಮತ್ತು ಸಹೋದರರಲ್ಲಿ ಕಾಣಬಹುದು. ಕುಟುಂಬದ ಸಾಂಘಿಕ ಶ್ರಮ ಈ ಯಶಸ್ಸಿಗೆ ಕಾರಣವಾಗಿದೆ. ಈ ಸಂಸ್ಥೆಯ ಇನ್ನಷ್ಟು ಶಾಖೆಗಳು ದೇಶಾದ್ಯಂತ ಪ್ರಾರಂಭವಾಗಲಿ ಎಂದು ಹಾರೈಸಿದರು.

Advertisement

ಚಿಕ್ಕುವಾಡಿ ವೆಲ್ಫೇರ್‌ ಅಸೋಸಿ ಯೇಶನ್‌ನ ಸೂರ್ಯಕಾಂತ್‌ ಗಾಯ ಕ್ವಾಡ್‌ ಮಾತನಾಡಿ, ಬಾಲಾಜಿ ಸಿಲ್ಕ್ ಹೌಸ್‌ನ ವಾರ್ಷಿಕ ಸಂಭ್ರಮ ಅಭಿನಂದ ನೀಯ. ಸರಳ ವ್ಯಕ್ತಿತ್ವದ ರಮಾನಾಥ ಕೋಟ್ಯಾನ್‌ ಅವರು ವಸ್ತ್ರ ವಿನ್ಯಾಸದ ಬಗ್ಗೆ ವಿಶೇಷ ಅನುಭವ ಉಳ್ಳವರು. ತಂದೆಯಿಂದ ಬಳುವಳಿಯಾಗಿ ಬಂದ ಕಾಯಕವನ್ನು ಯಶಸ್ಸಿನತ್ತ ಕೊಂಡೊ ಯ್ಯುವ ವ್ಯಕ್ತಿ. ಅವರೊಂದಿಗೆ ಅವರ ಸಹೋದರರ ಸಹಕಾರದಿಂದ ಬಾಲಾಜಿ ಸಿಲ್ಕ್ ಹೌಸ್‌ ಗ್ರಾಹಕರನ್ನು ಆಕರ್ಷಿಸುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯ ಮಾಲಕರಾದ ರಮಾನಾಥ ಕೋಟ್ಯಾನ್‌ ಮಾತನಾಡಿ, ಶ್ರೀ ಬಾಲಾಜಿ ಕ್ರಿಯೇಶನ್‌ ಇದರ ಟಿ ಆ್ಯಂಡ್‌ ಸಿ ಬ್ರಾಂಡೆಡ್‌ ಉಡುಗೆ ಬಹು ಪ್ರಸಿದ್ಧಿ ಪಡೆದಿದ್ದು, ಅವಿಭಜಿತ ದಕ್ಷಿಣ ಕನ್ನಡದ ಕುಂದಾಪುರದಿಂದ ಪುತ್ತೂರಿನವರೆಗೆ ಐವರು ಗ್ರಾಹಕರದಲ್ಲಿ ನಾಲ್ವರು ನಮ್ಮ ಬ್ರಾಂಡ್‌ ಉಪಯೋಗಿಸುವವರು. ಕಳೆದ 22 ವರ್ಷಗಳಿಂದ ಕರ್ನಾಟಕ, ಗೋವಾ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಬಾಲಾಜಿ ಕ್ರಿಯೇಶನ್‌ ಇದರ ಟಿ ಆ್ಯಂಡ್‌ ಸಿ ಬ್ರಾಂಡ್‌ ಪ್ರಸಿದ್ಧಿ ಪಡೆದಿದೆ. ನಮ್ಮ ಬಹು ವಿನ್ಯಾಸದ ಪುರುಷರ ಮತ್ತು ಮಹಿಳೆಯರ ಬ್ರಾಂಡೆಡ್‌ ಉಡುಗೆಗಳು ಬೃಹತ್‌ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಮಾತಾಪಿತರ ಆಶೀರ್ವಾದ, ಸಹೋದರರ ಸಾಂಘಿಕ ಸಹಕಾರ ಈ ನನ್ನ ಯಶಸ್ಸಿನ ಗುಟ್ಟಾಗಿದೆ. ಮುಂದೆ ಇಲ್ಲಿ ಮಹಿಳೆಯರಿಗಾಗಿಯೇ ಸೀರೆ, ಉಡುಗೆಗಳ ವಿಭಾಗವನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದು, ಅದನ್ನು ಕಾರ್ಯಗತಗೊಳಿಸಲಾಗುವುದು. ಪ್ರಾರಂಭದ ದಿನಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದರೂ ನನ್ನ ಪ್ರಯತ್ನಕ್ಕೆ ಪ್ರತಿಫಲ ದೊರೆತಿದೆ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಆಹಾರ್‌ನ ಉಪಾಧ್ಯಕ್ಷರಾದ ಡಾ| ಸತೀಶ್‌ ಬಿ. ಶೆಟ್ಟಿ, ಸಿಎ ಅಶ್ವಜಿತ್‌ ಹೆಜ್ಮಾಡಿ, ಮಹಾರಾಷ್ಟ್ರ ಇಂಟೆಲಿಜೆನ್ಸ್‌ ಡಿಪಾರ್ಟ್‌ಮೆಂಟ್‌ನ ಅಸಿಸ್ಟೆಂಟ್‌ ಕಮಿಷನರ್‌ ವಿನೋದ್‌ ತಾಬ್ಡೆ, ರಮಾನಾಥ ಕೋಟ್ಯಾನ್‌ ಅವರ ಪತ್ನಿ ಪ್ರತಿಭಾ ಕೋಟ್ಯಾನ್‌ ಮತ್ತು ಮಕ್ಕಳು, ಸಹೋದರರಾದ ಜಯಪ್ರಕಾಶ್‌ ಕೋಟ್ಯಾನ್‌, ರಾಜೇಶ್‌ ಕೋಟ್ಯಾನ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಉಡುಪುಗಳ ವಿಪುಲ ಸಂಗ್ರಹ: ಒಂದು ವರ್ಷದ ಅತ್ಯಲ್ಪ ಅವಧಿಯಲ್ಲೇ ಜನಪ್ರಿಯತೆ ಗಳಿಸಿರುವ  ಶ್ರೀ ಬಾಲಾಜಿ ಸಿಲ್ಕ್ ಹೌಸ್‌ನಲ್ಲಿ ದಕ್ಷಿಣ ಭಾರತೀಯ ಅದರಲ್ಲೂ ಕರಾವಳಿ ಕರ್ನಾಟಕದ ವಿವಿಧ ಶೈಲಿಯ ಉಡುಗೆಗಳು, ಮದುಮಗಳಿಗೆ ಒಪ್ಪುವ ಪ್ಯೂರ್‌ ಸಿಲ್ಕ್, ಕಾಂಚಿ ಸಿಲ್ಕ್, ಬನಾರಸ್‌ ಸಿಲ್ಕ್, ಧರ್ಮಾವರಂ ಸಿಲ್ಕ್, ಪ್ಯೂರ್‌ ಕಾಟನ್‌ ಮರ್ಸಿ ರೈಸ್ಡ್ ಕಾಟನ್‌ ಸೀರೆಗಳು,ಅನ್‌ ಸ್ವಿಚ್ಡ್ ಸಲ್ವಾರ್‌ ಸ್ಯೂಟ್‌ ಪೀಸಸ್‌, ಸೌವಾರಿ ಪ್ಯೂರ್‌ ಸಿಲ್ಕ್ ಸೀರೆಗಳು, ಮಹಿಳೆಯರ ರೆಡಿಮೆಡ್‌ ಚೂಡಿದಾರ್‌, ಸಲ್ವಾರ್‌ ಕಮೀಸ್‌, ಕುರ್ತಿಸ್‌, ಲೆಗ್ಗಿನ್ಸ್‌, ಪೆಟಿಕೋಟ್‌ ಲಭ್ಯವಿದೆ.

ಮದುಮಗನಿಗೆ ಒಪ್ಪುವ ವೈವಿಧ್ಯಮಯ ಉಡುಗೆಗಳು, ಪೇಟ ಸಹಿತ ಕಾಟನ್‌ ಸೀರೆಗಳು, ಪ್ಯೂರ್‌ ಸಿಲ್ಕ್ ಸೀರೆಗಳು, ಅನೆನ್‌ ಫ್ಯಾನ್ಸಿ ಸೀರೆಗಳು, ಆರ್ಟ್‌ ಸಿಲ್ಕ್ ಸೀರೆಗಳು, ಕೇರಳ ಶೈಲಿಯ ಸೀರೆಗಳು, ಟಿ ಆ್ಯಂಡ್‌ ಸಿ ಗುಣಮಟ್ಟದ ಪುರುಷರ ಎಲ್ಲ ವಿಧಗಳ ಉಡುಗೆಗಳು, ಗಿಫ್ಟ್‌ಬ್ಯಾಗ್‌ಗಳು ವಿಲೇಪಾರ್ಲೆ ಪಶ್ಚಿಮದ ಬಾಲಾಜಿ ಸಿಲ್ಕ್ ಹೌಸ್‌ನಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿವೆ.

ಯಶಸ್ಸಿನ ಹಿಂದಿರುವ ವ್ಯಕ್ತಿ ರಮಾನಾಥ ಕೋಟ್ಯಾನ್‌. ಅವರೋರ್ವ ಸರಳ ಸ್ವಭಾವದವರು. ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವ ವ್ಯಕ್ತಿತ್ವ ಅವರದ್ದು. ವ್ಯಾವಹಾರಿಕವಾಗಿ ಓರ್ವ ವ್ಯಕ್ತಿ ವೈಶಿಷ್ಟ éಪೂರ್ಣ ಉದ್ಯಮದ ಮೂಲಕ ಯಶಸ್ಸು ಪಡೆಯಬೇಕಾದರೆ ತನ್ನ ಉತ್ಪನ್ನಗಳ ಬಗ್ಗೆ ವಿಶೇಷ ಪರಿಕಲ್ಪನೆ, ಚಿಂತನೆ ಹೊಂದಿರಬೇಕು. ಆ ಕೌಶಲ ಕೋಟ್ಯಾನ್‌ ಸಹೋದರರಲ್ಲಿದೆ.-ದಯಾ ಶೆಟ್ಟಿ ಟಿ ಆ್ಯಂಡ್‌ ಸಿ ಬ್ರ್ಯಾಂಡ್‌ ಅಂಬಾಸಿಡರ್‌,  ಬಾಲಿವುಡ್‌ ನಟ

 

-ಚಿತ್ರ-ವರದಿ: ರಮೇಶ್‌ ಉದ್ಯಾವರ

 

Advertisement

Udayavani is now on Telegram. Click here to join our channel and stay updated with the latest news.

Next