Advertisement

ಸಿಟಿ ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು ಖಾಲಿ

10:48 PM Aug 10, 2019 | Team Udayavani |

ಮಂಗಳೂರು ನಗರದಲ್ಲಿ ಹೆಚ್ಚಿನ ಮಂದಿ ಪ್ರಯಾಣಕ್ಕೆ ಸಿಟಿ ಬಸ್‌ಗಳನ್ನೇ ನಂಬಿಕೊಂಡಿದ್ದಾರೆ. ಹೀಗಿರುವಾಗ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯು ಪ್ರತಿಯೊಬ್ಬ ಬಸ್‌ ಮಾಲಕರ ಕರ್ತವ್ಯವಾಗಿದೆ. ಬಸ್‌ ಪ್ರಯಾಣದಲ್ಲಿ ಅಪಘಾತವಾದರೆ ಅಥವಾ ಅನಾರೋಗ್ಯಕ್ಕೆ ತುತ್ತಾದರೆ ಮುಂಜಾಗೃತಾ ದೃಷ್ಟಿಯಿಂದ ಪ್ರತಿ ಬಸ್‌ನ‌ಲ್ಲಿಯೂ ತುರ್ತು ಚಿಕಿತ್ಸಾ ಪೆಟ್ಟಿಗೆ ಇಟ್ಟಿರಬೇಕು. ಆದರೆ ನಗರದಲ್ಲಿ ಸಂಚರಿಸುವ ಅನೇಕ ಬಸ್‌ಗಳಲ್ಲಿ ಈ ನಿಯಮವನ್ನು ಪಾಲನೆ ಮಾಡಲಾಗುತ್ತಿಲ್ಲ.

Advertisement

ಮಂಗಳೂರು ನಗರದಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೆ ಸುಮಾರು 300ಕ್ಕೂ ಮಿಕ್ಕಿ ಸಿಟಿ ಬಸ್‌ಗಳು ಸಂಚರಿಸುತ್ತವೆ. ಕೆಲವೊಂದು ಬಸ್‌ಗಳು ಗ್ರಾಮೀಣ ಪ್ರದೇಶಗಳಲ್ಲಿಯೂ ಸಂಚರಿಸುತ್ತವೆ.ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆಗಳ ಸೌಲಭ್ಯ ಇರುವುದಿಲ್ಲ. ಈ ಸಮಯದಲ್ಲಿ ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಔಷಧ ಗಳಿದ್ದರೆ ಸಹಕಾರಿಯಾಗಬಹುದಾಗಿದೆ.

ಕೆಲವೊಂದು ಸಿಟಿ ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಒಳಗಡೆ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಪ್ರಥಮಚಿಕಿತ್ಸಾ ಪರಿಕರಗಳನ್ನು ಇರಿಸಲಾಗಿಲ್ಲ. ಮಳೆಗಾಲವಾಗಿದ್ದು, ಅಪಘಾತವಾಗುವ ಸಂಭವ ಹೆಚ್ಚಿರುತ್ತದೆ. ಹೀಗುರುವಾಗ ನಿಯಮ ಉಲ್ಲಂಘನೆ ಮಾಡುವ ಬಸ್‌ಗಳ ವಿರುದ್ಧ ಸಾರಿಗೆ ಇಲಾಖೆ ಕೂಡಲೇ ಕಾರ್ಯಾಚರಣೆ ನಡೆಸಿ ದಂಡ ವಿಧಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next