Advertisement

ಗೃಹದಿಗ್ಬಂಧನ ಉಲ್ಲಂಘಿಸಿದರೆ ಎಫ್ಐಆರ್‌

05:07 AM Jun 27, 2020 | Lakshmi GovindaRaj |

ಬೆಂಗಳೂರು: ಹೊರ ರಾಜ್ಯಗಳಿಂದ ಬಂದವರಿಗೆ 14 ದಿನಗಳ ಕ್ವಾರಂಟೈನ್‌ ಮಾಡಲಾಗುತ್ತಿದ್ದು, ನಿಯಮ ಉಲ್ಲಂಘಿಸಿದವರನ್ನು ಸಾಂಸ್ಥಿಕ ದಿಗ್ಬಂಧನಕ್ಕೆ ಒಳಪಡಿಸಲಾಗುವುದಲ್ಲದೇ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು  ಎಂದು ಬಿಬಿಎಂಪಿ ವಿಶೇಷ ಆಯುಕ್ತ ಜೆ. ಮಂಜುನಾಥ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಗೃಹ ದಿಗ್ಬಂಧನದಲ್ಲಿರುವವರ ಮೇಲೆ ನಿಗಾ ಇಡಲು ಬಿಬಿಎಂಪಿಯು ವಿವಿಧ ಮಟ್ಟದಲ್ಲಿ ತಂಡಗಳನ್ನು ರಚಿಸಿದೆ. ಈ  ಹಿಂದೆ ಗೃಹ ದಿಗ್ಬಂದನ ಉಲ್ಲಂಘಿಸಿದವರಿಗೆ ಕೇವಲ ಎಚ್ಚರಿಕೆ ನೀಡಲಾಗುತ್ತಿತ್ತು. ಇದೀಗ ಈ ತಂಡಗಳಿಗೆ ಉಲ್ಲಂಘನೆ ಪ್ರಕರಣಗಳಲ್ಲಿ ತಕ್ಷಣ ಸಾಂಸ್ಥಿಕ ದಿಗ್ಬಂಧನಕ್ಕೆ ಒಳಪಡಿಸಲು ಹಾಗೂ ಎಫ್‌ಐಆರ್‌ ದಾಖಲಿಸಲು ಸೂಚನೆ ನೀಡಲಾಗಿದೆ  ಎಂದರು.

ಕಳೆದ 24 ಗಂಟೆಗಳಲ್ಲಿ ಗೃಹ ದಿಗ್ಬಂದನ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ 12 ಜನರನ್ನು ಸಾಂಸ್ಥಿಕ ದಿಗ್ಬಂಧನಕ್ಕೆ ಒಳಪಡಿಸಲಾಗಿದ್ದು, 30 ಜನರ ವಿರುದ್ದ ಎಫ್‌ ಐಆರ್‌ ದಾಖಲಿಸಲಾಗಿದೆ ಎಂದರು.  ಈಗಾಗಲೇ 57 ಸಾವಿರ ಜನರು ಪಾಲಿಕೆಯ ವ್ಯಾಪ್ತಿಯಲ್ಲಿ ಗೃಹ ದಿಗ್ಬಂದನಕ್ಕೆ ಒಳಪಟ್ಟಿದ್ದು, ಈ ವರೆಗೆ ಬಂದಿರುವ 1104 ಉಲ್ಲಂಘನೆ ಪ್ರಕರಣಗಳನ್ನು ಪರಿಶೀಲಿಸಲಾಗಿದೆ.

ಇದರಲ್ಲಿ 929 ಪ್ರಕರಣಗಳಲ್ಲಿ ಎಚ್ಚರಿಕೆ ನೀಡಲಾಗಿದೆ.  ಕ್ವಾರಂಟೈನ್‌ ಇರುವವರ ನೆರೆಹೊರೆಯ ವರು, ಸಾರ್ವಜನಿಕರು ವಾಟ್ಸ್‌ ಆ್ಯಪ್‌ 9777-777-684, ದೂ.ಸಂ- 080-4545-1111, ಟ್ವಿಟರ್‌ ಹ್ಯಾಂಡಲ್@DIPR_COVID19 ಮೂಲಕ ದೂರು ನೀಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next