Advertisement

ಫೈರಿಂಗ್‌ ರೇಂಜ್‌ ನಿಷೇಧಿತ ಪ್ರದೇಶದಲ್ಲಿ ಬಾಂಬ್‌ ಸ್ಫೋಟ

06:05 AM Oct 01, 2018 | Team Udayavani |

ಬೆಳಗಾವಿ: ಫೈರಿಂಗ್‌ ರೇಂಜ್‌ ನಿಷೇಧಿತ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿದ ನಾಲ್ವರು ದನಗಾಹಿಗಳು ತರಬೇತಿಯ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿಟ್ಟಿದ್ದ ಬಾಂಬ್‌ ಆಕಸ್ಮಿಕವಾಗಿ ಸ್ಫೋಟಗೊಂಡ ಪರಿಣಾಮ ಗಾಯಗೊಂಡ ಘಟನೆ ಖಾನಾಪುರ ತಾಲೂಕಿನ ತೋರಾಳಿ ಬಳಿ ಶನಿವಾರ ಸಂಜೆ ನಡೆದಿದೆ.

Advertisement

ತೋರಾಳಿ ಬಳಿ ಇರುವ ಕೇಂದ್ರ ಮೀಸಲು ಪೊಲೀಸ್‌ ಪಡೆಯ ಕೋಬ್ರಾ ಪಡೆ ತರಬೇತಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ತೋರಾಳಿ ಗ್ರಾಮದ ಶಿವಾಜಿ ಪಾಟೀಲ (47), ಮಹದೇವ ನಾಯಕ (60),ಬಾಲಕೃಷ್ಣ ಪಾಟೀಲ (48) ಹಾಗೂ ರಾಮಲಿಂಗ ಪಾಟೀಲ (47) ಎಂದು ಗುರುತಿಸಲಾಗಿದೆ.

ನಿಷೇಧಿತ ಫೈರಿಂಗ್‌ ರೇಂಜ್‌ನಲ್ಲಿ ನಾಲ್ವರು ತಮ್ಮ ಜಾನುವಾರುಗಳನ್ನು ಕರೆತರಲು ಅಕ್ರಮ ಪ್ರವೇಶ ಮಾಡಿದ್ದಾಗ ಈ ಘಟನೆ ನಡೆದಿದೆ. ತರಬೇತಿಗಾಗಿ ನೆಲದಲ್ಲಿ ಹುದುಗಿಸಿಟ್ಟಿದ್ದ ಬಾಂಬ್‌ ಮೇಲೆ ಗೊತ್ತಾಗದೆ ಕಾಲಿಟ್ಟಿದ್ದರಿಂದ ಅದು ಸ್ಫೋಟಗೊಂಡಿದೆ. ಈ ಸ್ಫೋಟದ ಸದ್ದು ಕೇಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಆರ್‌ಪಿಎಫ್‌ ಸಿಬ್ಬಂದಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

ಪ್ರಾಣಾಪಾಯದಿಂದ ಪಾರಾಗಿದ್ದು, ಅದರಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿವೆ. ಖಾನಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎಂದು ಎಸ್‌ಪಿ ಸುಧೀರಕುಮಾರ ರೆಡ್ಡಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next