Advertisement

ರಜೌರಿಯಲ್ಲಿ ಸೇನಾ ಶಿಬಿರದ ಹೊರಗೆ ಗುಂಡಿನ ದಾಳಿ; ಇಬ್ಬರು ನಾಗರಿಕರ ಸಾವು

12:58 PM Dec 16, 2022 | Team Udayavani |

ರಜೌರಿ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಸೇನಾ ಶಿಬಿರದ ಹೊರಗೆ ಶುಕ್ರವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಗುಂಡಿನ ದಾಳಿ ಮತ್ತು ನಂತರದ ನಾಗರಿಕ ಸಾವುನೋವುಗಳಿಗೆ “ಅಪರಿಚಿತ ಭಯೋತ್ಪಾದಕರು ಕಾರಣ” ಎಂದು ಸೇನೆಯು ದೂಷಿಸಿದರೆ, ಸೇನಾ ಸಿಬ್ಬಂದಿಯು ಗುಂಡಿನ ದಾಳಿ ನಡೆಸಿ ಸಾವುನೋವುಗಳಿಗೆ ಕಾರಣವಾಯಿತು ಎಂದು ಅಧಿಕಾರಿಗಳು ಈ ಹಿಂದೆ ಹೇಳಿದ್ದರು.

ಘಟನೆಯ ನಂತರ, ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸೇನಾ ಶಿಬಿರದ ಆಲ್ಫಾ ಗೇಟ್‌ನ ಹೊರಗೆ ಪ್ರತಿಭಟನಾ ನಿರತರು ಶಿಬಿರದ ಮೇಲೆ ಕಲ್ಲು ತೂರಿದರು.

ಘಟನೆಯ ತನಿಖೆಗೆ ಒತ್ತಾಯಿಸಿ ಜಮ್ಮು-ಪೂಂಚ್ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಇವರನ್ನು ಸಮಾಧಾನಪಡಿಸಲು ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಭಯೋತ್ಪಾದಕರ ಮೇಲಿನ ಕಾಂಗ್ರೆಸ್ ಪ್ರೇಮ ಜಗಜ್ಜಾಹೀರು ಮಾಡಿದ ಡಿಕೆಶಿ: ನಳಿನ್‍ ಕುಮಾರ್

Advertisement

ಬೆಳಿಗ್ಗೆ 6.15 ರ ಸುಮಾರಿಗೆ ಸ್ಥಳೀಯರ ಗುಂಪು ಕೆಲಸಕ್ಕಾಗಿ ಸೇನಾ ಗೇಟ್ ಬಳಿಗೆ ಬಂದಾಗ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು.

ಮೃತರನ್ನು ರಾಜೌರಿ ನಿವಾಸಿಗಳಾದ ಕಮಲ್ ಕುಮಾರ್ ಮತ್ತು ಸುರಿಂದರ್ ಕುಮಾರ್ ಎಂದು ಅಧಿಕಾರಿಗಳು ಗುರುತಿಸಿದ್ದು, ಗಾಯಗೊಂಡ ಉತ್ತರಾಖಂಡದ ಅನಿಲ್ ಕುಮಾರ್ ಅವರನ್ನು ಸೇನೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೇನೆಯ ವೈಟ್ ನೈಟ್ ಕಾರ್ಪ್ಸ್ ತನ್ನ ಅಧಿಕೃತ ಹ್ಯಾಂಡಲ್‌ ನಲ್ಲಿ ಟ್ವೀಟ್ ಮಾಡಿದ್ದು, “ಮಿಲಿಟರಿ ಆಸ್ಪತ್ರೆಯ ಬಳಿಯ ರಾಜೌರಿಯಲ್ಲಿ ಅಪರಿಚಿತ ಭಯೋತ್ಪಾದಕರು ಮುಂಜಾನೆ ಗುಂಡಿನ ದಾಳಿ ನಡೆಸಿದ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಪೊಲೀಸರು, ಭದ್ರತಾ ಪಡೆಗಳು ಮತ್ತು ನಾಗರಿಕ ಆಡಳಿತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಪಟ್ಟಣದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next