Advertisement
ಹಳೇ ಪ್ರಕರಣದ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ವೇಳೆ ಕೋರ್ಟ್ ಆವರಣದಲ್ಲಿ ಏಕಾಏಕಿ ದುಷ್ಕರ್ಮಿಗಳು ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಜಲನಗರ ಪೊಲೀಸರು ಕೂಡಲೇ ಬಾಗಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಐದು ಸುತ್ತಿನ ಗುಂಡಿನ ದಾಳಿಯಲ್ಲಿ ಮೂರು ಗುಂಡು ಬಾಗಪ್ಪ ದೇಹದೊಳಕ್ಕೆ ಹೊಕ್ಕಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ.
Related Articles
Advertisement
ಗನ್ ಬಿಟ್ಟು ಇರುತ್ತಿರಲಿಲ್ಲ ಬಾಗಪ್ಪ ಹರಿಜನ್!
ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ಸದಾ ತನ್ನ ಜತೆ ಗನ್ ಇಟ್ಟುಕೊಂಡೇ ತಿರುಗಾಡುತ್ತಿದ್ದ. ಬಾಗಪ್ಪನಿಗೆ ಗನ್ ಗಳ ಮೇಲೆ ಅತಿಯಾದ ವ್ಯಾಮೋಹ. ಹಾಗಾಗಿ ಆತ ತನ್ನ ಜತೆ ಗನ್ ಇಟ್ಟುಕೊಂಡೇ ಇರುತ್ತಿದ್ದು, ತನ್ನನ್ನು ಕಂಡರೆ ಎಲ್ಲರಲ್ಲೂ ಭಯ ಇರಬೇಕೆಂಬುದು ಬಾಗಪ್ಪನ ಇರಾದೆಯಾಗಿತ್ತಂತೆ!
ಕಾಲಿಗೆ ಬಿದ್ದು ಹಿಂದಿನಿಂದ ಬಾಗಪ್ಪನಿಗೆ ಗುಂಡಿಟ್ಟ ದುಷ್ಕರ್ಮಿ!
ವಿಚಾರಣೆಗಾಗಿ ಕೋರ್ಟ್ ಗೆ ಆಗಮಿಸುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ನಮಸ್ಕಾರ ಬಾಗಪ್ಪ ಎಂದು ಕಾಲಿಗೆ ನಮಸ್ಕರಿಸಿದ್ದ. ಬಳಿಕ ನಮಸ್ಕಾರ ಎಂದು ಬಾಗಪ್ಪ ಮುಂದಕ್ಕೆ ಹೋಗುತ್ತಿದ್ದಂತೆಯೇ ಹಿಂದಿನಿಂದ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದ. ದಾಳಿಯಿಂದ ಬಾಗಪ್ಪ ನೆಲಕ್ಕೆ ಬಿದ್ದಾಗ ಆತನ ಎದೆ ಮೇಲೆ 4 ಸುತ್ತು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವುದಾಗಿ ವರದಿ ತಿಳಿಸಿದೆ.