Advertisement
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ರಾಮ ಲಿಂಗಾರೆಡ್ಡಿ, ಭೈರತಿ ಸುರೇಶ್ ರವಿವಾರ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿರುವ ರಾಜ್ಯ ಸರಕಾರ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ ನೀಡಿದೆ. ದುರದೃಷ್ಟಕರ: ಸಿಎಂ
ಪಟಾಕಿ ದುರಂತದಲ್ಲಿ 14 ಮಂದಿ ಮೃತಪಟ್ಟಿರುವುದು ದುರದೃಷ್ಟಕರ ಎಂದು ಸಿಎಂ ಸಿದ್ದರಾಮಯ್ಯ ದುಃಖೀಸಿದ್ದಾರೆ. ಸ್ಫೋಟಕಗಳನ್ನು ಮಾರಾಟ ಮಾಡುವ ಗೋದಾಮಿನಲ್ಲಿ ಸುರಕ್ಷ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂಬುದು ಅಧಿಕಾರಿಗಳ ಪರಿಶೀಲನೆ ವೇಳೆ ಕಂಡುಬಂದಿದೆ ಎಂದರು.
Related Articles
ಗೋದಾಮಿನಲ್ಲಿ ಪಟಾಕಿ ಇರಿಸಿದ್ದರೂ ಅಗ್ನಿಶಮನ ಉಪಕರಣಗಳನ್ನು ಇರಿಸಲಾಗಿರಲಿಲ್ಲ ಎಂಬ ಗೊತ್ತಾಗಿದೆ. ಹೀಗಾಗಿ ಮಾಲಕರ ನಿರ್ಲಕ್ಷ್ಯ ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಸಿಎಂ ಹೇಳಿದರು. ಘಟನೆಯಲ್ಲಿ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ ಮೂಲದ 14 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಕೆಲವರು ವಿದ್ಯಾರ್ಥಿಗಳಾಗಿದ್ದು, ರಜಾ ದಿನಗಳಲ್ಲಿ ಓದಿಗಾಗಿ ಹಣ ಸಂಪಾದನೆಗೆಂದು ಬಂದಿದ್ದರು. ಗೋದಾಮಿನಲ್ಲಿ ಅಗತ್ಯ ಮುನ್ನೆಚ್ಚರಿಕೆ, ಸುರಕ್ಷ ಕ್ರಮಗಳನ್ನು ಕೈಗೊಂಡಿರಲಿಲ್ಲ. ಗೋದಾಮು ಅಧಿಕೃತವೋ ಅಲ್ಲವೋ ಎಂಬುದನ್ನು ಪರಿಶೀಲಿಸಬೇಕಿದೆ ಎಂದರು.
Advertisement
ಘಟನೆ ಕುರಿತು ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. 14 ಜನ ಮೃತಪಟ್ಟಿರುವುದು ದೊಡ್ಡ ದುರಂತ.ಸಿದ್ದರಾಮಯ್ಯ, ಮುಖ್ಯಮಂತ್ರಿ ಐವರ ವಿರುದ್ಧ ಪ್ರಕರಣ, ಮೂವರ ಬಂಧನ
ಘಟನೆ ಸಂಬಂಧ ಅತ್ತಿಬೆಲೆ ಠಾಣೆಯಲ್ಲಿ ಗೋದಾಮು ಮಾಲಕ ರಾಮ ಸ್ವಾಮಿ ರೆಡ್ಡಿ, ಆತನ ಪುತ್ರ ನವೀನ್ ರೆಡ್ಡಿ, ಗೋದಾಮು ಮ್ಯಾನೇಜರ್ ಲೋಕೇಶ್, ಜಾಗದ ಮಾಲಕರಾದ ಜಯಮ್ಮ, ಅನಿಲ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದುವರೆಗೆ ರಾಮಸ್ವಾಮಿ ರೆಡ್ಡಿ, ನವೀನ್ ರೆಡ್ಡಿ , ಅನಿಲ್ ರೆಡ್ಡಿಯನ್ನು ಬಂಧಿಸಲಾಗಿದೆ. ಇಬ್ಬರಿಗಾಗಿ ಶೋಧ ನಡೆಯುತ್ತಿದೆ.