Advertisement

ಪಟಾಕಿಗಳಿದ್ದ ಮಿನಿ ವ್ಯಾನ್‌ ಸ್ಫೋಟ: ಇಬ್ಬರ ಸಾವು

07:04 PM Oct 01, 2019 | Team Udayavani |

ವಿಲ್ಲುಪುರಂ: ಮಿನಿ ವ್ಯಾನ್‌ನಲ್ಲಿ ಸಾಗಿಸಲಾಗುತ್ತಿದ್ದ ಸುಡುಮದ್ದುಗಳು ಸ್ಫೋಟಗೊಂಡ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿ, 12 ಮಂದಿ ಗಾಯಗೊಂಡ ಘಟನೆ ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದಿದೆ. ವಾಹನದಲ್ಲಿ ಬೆಂಕಿ ಕಾಣಿಸಿಕೊಂಡೊಡನೆ, ಒಳಗಿದ್ದ ಇಬ್ಬರೂ ವಾಹನ ನಿಲ್ಲಿಸಿ, ಹೊರಗೆ ಬಂದರು. ಅಷ್ಟರಲ್ಲಿ ವ್ಯಾನ್‌ ಸ್ಫೋಟಗೊಂಡಾಗಿತ್ತು. ಸಮೀಪದಲ್ಲಿದ್ದ ಮನೆಗಳಿಗೂ ಹಾನಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next