Advertisement

ಕಟ್ಟಡಕ್ಕೆ ಬೆಂಕಿ: ಸಿಲುಕಿಕೊಂಡವರ ರಕ್ಷಣೆ

08:40 PM Apr 19, 2019 | Sriram |

ಮಹಾನಗರ: ಇಲ್ಲಿನ ಖಾಸಗಿ ಹೊಟೇಲ್‌ ಒಂದರಲ್ಲಿ ಬೆಳಗ್ಗೆ 11ಗಂಟೆ ವೇಳೆಗೆ ಇದ್ದಕ್ಕಿದ್ದಂತೆ ದಟ್ಟ ಹೊಗೆ ಕಾಣಿಸಿಕೊಂಡಿದೆ. ಆದಾಗಲೇ ಸೈರನ್‌ ಮೊಳಗಿತು. ಹೊಟೇಲ್‌ನಲ್ಲಿ ಇದ್ದ ಸಿಬಂದಿ ಗ್ರಾಹಕರು ಹೊರ ಓಡಿ ಬಂದರು. ಕ್ಷಣಾರ್ಧದಲ್ಲಿ ಅಗ್ನಿಶಾಮಕ ದಳ, ಎನ್‌ಡಿಆರ್‌ಎಸ್‌ ಸಿಬಂದಿ, ಸ್ವಯಂ ಸೇವಕರು ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಿದರು.

Advertisement

ಇದು ಕರ್ನಾಟಕ ರಾಜ್ಯ ಅಗ್ನಿಶಾಮಕ ಸೇವಾ ಇಲಾಖೆಯು 2019ನೇ ಸಾಲಿನ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ನಗರದ ಓಶಿಯನ್‌ ಪರ್ಲ್ ಹೊಟೇಲ್‌ನಲ್ಲಿ ಶುಕ್ರವಾರ ನಡೆಸಿದ ಅಣುಕು ಕಾರ್ಯಾಚರಣೆಯ ಚಿತ್ರಣ.

ಕಟ್ಟಡ ಕುಸಿತ, ಕಟ್ಟಡಗಳಲ್ಲಿ ಉಂಟಾ ಗಬಹುದಾದ ಅವಘಡ ಸಂದರ್ಭ ಕೈಗೊಳ್ಳಬಹುದಾದ ಸುರಕ್ಷಿತ ಕ್ರಮ, ಯಾವ ರೀತಿ ಕಾರ್ಯಾಚರಣೆ ನಡೆಯುತ್ತವೆ ಎಂಬುದನ್ನು ಜನ ಸಾಮಾನ್ಯರಿಗೆ ತಿಳಿಸಲಾಯಿತು.

ಇಂತಹ ಸಮಯದಲ್ಲಿ ಜನರು ಯಾವ ರೀತಿ ರಕ್ಷಣಾ ಕಾರ್ಯದಲ್ಲಿ ತೊಡಗಬಹುದು, ಅವಘಡದ ಸಂದರ್ಭ ಮೊದಲು ಏನು ಮಾಡಬೇಕು ಎಂಬುದರ ಕುರಿತು ಅರಿವು ಮೂಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next