Advertisement

ಅಗ್ನಿಶಾಮಕ ಸಿಬ್ಬಂದಿ ಯೋಧರಿಗೆ ಸಮ

05:53 AM Jul 07, 2020 | Lakshmi GovindaRaj |

ಹುಣಸೂರು: ಆಪತ್ಕಾಲದಲ್ಲಿ ಜೀವ ಒತ್ತೆ ಇಟ್ಟು ಕಾರ್ಯ ನಿರ್ವಹಿಸುವ ಅಗ್ನಿಶಾಮಕ ದಳ ಸಿಬ್ಬಂದಿ ದೇಶ ಕಾಯುವ ಯೋಧರಿಗೆ ಸಮ ಎಂದು ಶಾಸಕ ಮಂಜುನಾಥ್‌ ಬಣ್ಣಿಸಿದರು. ಹುಣಸೂರು-ಮೈಸೂರು ಹೆದ್ದಾರಿ ಬಳಿಯ ಅಗ್ನಿಶಾಮಕ ಠಾಣೆಯಲ್ಲಿ ಶಾಸಕ ಮಂಜುನಾಥ್‌  ವೈಯಕ್ತಿಕವಾಗಿ ಬೋರ್‌ವೆಲ್‌ ಕೊರೆಸಿ ನೀರು ಪೂರೈಕೆ‌ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

Advertisement

ಅಗ್ನಿಶಾಮಕ ದಳ ಸಿಬ್ಬಂದಿ ಎಂಥ ಸಂದರ್ಭದಲ್ಲೂ ಮನೆ, ಬ್ಯಾರನ್‌, ಅಂಗಡಿ  ಮತ್ತಿತರ ಕಡೆಗಳಲ್ಲಿ ಬೆಂಕಿ, ನೀರಿನ ಅವಘಡ ಇತ್ಯಾದಿ ತುರ್ತು ಸಂದರ್ಭದಲ್ಲಿ ಪ್ರಾಣ ಲೆಕ್ಕಿಸದೇ ಕೆಲಸ ನಿರ್ವಹಿಸುತ್ತಾರೆ. ಅವರ ಅಗತ್ಯಗಳನ್ನು ಪೂರೈಸುವುದು ನಮ್ಮ ಕರ್ತವ್ಯ ಎಂದರು. ಇಲ್ಲಿನ ಸಿಬ್ಬಂದಿಗೆ ಲಾಕ್‌ಡೌನ್‌ ಸಂದರ್ಭದಲ್ಲಿ ಆಹಾರ  ಕಿಟ್‌ ವಿತರಿಸುವ ವೇಳೆ ಬೋರ್‌ವೆಲ್‌ ನಿಷ್ಕ್ರಿಯಗೊಂಡಿರುವುದು ಗಮನಕ್ಕೆ ತಂದಿದ್ದರು.

ತಾಲೂಕಿನ ಜನರ ಹಿತದೃಷ್ಟಿಯಿಂದ ತಾವು ಮಾರನೇ ದಿನವೇ ಕೊಳವೆ ಬಾವಿ ಕೊರೆಸಿಕೊಡಲಾಯಿತು. ಇದೀಗ ಇಲ್ಲಿಯೇ ನೀರಿನ ಟ್ಯಾಂಕ್‌ಗೆ ನೀರು  ತುಂಬಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು. ಅಗ್ನಿಶಾಮಕ ಠಾಣಾಧಿಕಾರಿ ದಿನೇಶ್‌ ಆನಂದ್‌ ಮಾತನಾಡಿ, 2014ರಲ್ಲಿ ಶಾಸಕರ ಅವಧಿಯಲ್ಲೇ ಅಗ್ನಿಶಾಮಕ ಠಾಣೆಗೆ ಸ್ವಂತ ಕಟ್ಟಡ ನಿರ್ಮಿಸಿಕೊಟ್ಟಿದ್ದರು. ಈಗ ವೈಯಕ್ತಿಕ  ವೆಚ್ಚದಲ್ಲಿ ಬೋರ್‌ವೆಲ್‌ ಕೊರೆಸಿಕೊಟ್ಟಿದ್ದಾರೆಂದು ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ಅಗ್ನಿಶಾಮಕ ದಳದ ಪ್ರಮುಖ್‌ ಮಹದೇವ್‌, ತಾಪಂ ಅಧ್ಯಕ್ಷೆ ಪದ್ಮಮ್ಮ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರವಿಪ್ರಸನ್ನಕುಮಾರ್‌, ನಗರಸಭಾ ಸದಸ್ಯ  ಮನು, ಗ್ರಾಪಂ ಸದಸ್ಯ ರವಿ, ವಕೀಲ ಪುಟ್ಟರಾಜು ಇತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next