ನವದೆಹಲಿ: ದೆಹಲಿ ಹಾಗೂ ಎನ್‌ಸಿಆರ್ ಪ್ರದೇಶಗಳಲ್ಲಿ ಅ.31ರ ವರೆಗೆ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿ ಸುಪ್ರೀಂಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.
ಸೆ.12 ರಂದು ಪಟಾಕಿಗಳ ಮೇಲಿನ ಮಾರಾಟಕ್ಕೆ ಅನುಮತಿ ನೀಡಲಾಗಿತ್ತಾದರೂ, ಇದೀಗ ದೀಪಾವಳಿ ಹಿನ್ನೆಲೆಯಲ್ಲಿ ಪುನಃ ನಿಷೇಧ ಆದೇಶ ಹೊರಡಿಸಲಾಗಿದೆ. ಸುಪ್ರೀಂ ಆದೇಶವನ್ನು ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಬೆಂಬಲಿಸಿದೆ.
ದೀಪಾವಳಿ ಬಳಿಕ ಭಾರೀ ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿರುವ ಹಿನ್ನೆಲೆ ಯಲ್ಲಿ ಈ ತೀರ್ಪು ನೀಡಲಾಗಿದೆ. ಆದರೆ ಈ ಆದೇಶ ಟ್ವಿಟರ್‌ನಲ್ಲಿ ಭಾರಿ ಮಾತಿನ ಸಮರಕ್ಕೆ ವೇದಿಕೆಯಾಗಿದೆ. ಲೇಖಕ ಚೇತನ್ ಭಗತ್ ಈ ಬಗ್ಗೆ ಟ್ವೀಟ್ ಮಾಡಿದ್ದು, “ಪಟಾಕಿಗಳಿಲ್ಲದೇ ಮಕ್ಕಳು ದೀಪಾವಳಿ ಆಚರಿಸುವುದು ಹೇಗೆ? ಮೊಹರಂನಲ್ಲಿ ರಕ್ತ ಹರಿಸುವುದನ್ನೂ ನಿಷೇಧಿ ಸುವ ಧೈರ್ಯವನ್ನು ಯಾಕೆ ತೋರುವುದಿಲ್ಲ? ದೀಪಾವಳಿಯಲ್ಲಿ ಪಟಾಕಿ ನಿಷೇಧಿಸುವುದು ಕ್ರಿಸ್‌ಮಸ್‌ನಲ್ಲಿ ಕ್ರಿಸ್‌ಮಸ್ ಟ್ರೀ ನಿಷೇಧಿಸು ವುದಕ್ಕೆ ಮತ್ತು ಬಕ್ರೀದ್‌ನಲ್ಲಿ ಕುರಿ ನಿಷೇಧಿಸು ವುದಕ್ಕೆ ಸಮನಾಗಿದೆ. ನಿಷೇಧದ ಬದಲಿಗೆ ನವೀನ ಚಿಂತನೆಗಳನ್ನು ಪ್ರೋತ್ಸಾಹಿಸಿ’ ಎಂದು ಹೇಳಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯಿಸಿದ್ದು, “ದೀಪಾವಳಿ ದೀಪಗಳ ಹಬ್ಬ. ಪಟಾಕಿ ನಮ್ಮ ಸಂಸ್ಕೃತಿ ಎಂದು ಪರಿಗಣಿಸಬೇಡಿ’ ಎಂದಿದ್ದಾರೆ.
1000 ಕೋಟಿ ರೂ. ನಷ್ಟ!
ಸುಪ್ರೀಂಕೋರ್ಟ್ ನಿರ್ಧಾರ ತಮಿಳು ನಾಡಿನ ಶಿವಕಾಶಿಗೆ ಭಾರಿ ಹೊಡೆತ ನೀಡಲಿದೆ. ಇಲ್ಲಿನ ಪಟಾಕಿ ತಯಾರಕರಿಗೆ ಸುಮಾರು 1000 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಲಿದೆ ಎನ್ನಲಾಗಿದೆ. ದೀಪಾವಳಿ ಸಮಯದಲ್ಲೇ ನಮಗೆ ಲಾಭ ಸಿಗುತ್ತದೆ. ಪಟಾಕಿಯಿಂದ ವರ್ಷದಲ್ಲಿ ಒಂದೇ ದಿನ ಮಾಲಿನ್ಯವಾಗುತ್ತದೆ. ಆದರೆ ವಾಹನಗಳಿಂದ ದಿನದ 24 ಗಂಟೆಯೂ ಮಾಲಿನ್ಯ ಉಂಟಾಗುತ್ತದೆ. ಆದರೆ, ಈ ಬಗ್ಗೆ ಯಾರೂ ಯಾವುದೇ ಕ್ರಮ ಕೈಗೊಳ್ಳು ವುದಿಲ್ಲ ಎಂದು ಶಿವಕಾಶಿ ಪಟಾಕಿ ತಯಾರ ಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.