Advertisement

ಪಟಾಕಿ ನಿಷೇಧ ತೆರವು?

12:30 AM Mar 13, 2019 | Team Udayavani |

ಹೊಸದಿಲ್ಲಿ: ಸುಡುಮದ್ದುಗಳಿಗೆ ಸುಪ್ರೀಂ ಕೋರ್ಟ್‌ ಹೇರಿರುವ ನಿಷೇಧ ತೆರವಾಗಬಹುದೇ? ಮಂಗಳವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಪೀಠ ನೀಡಿರುವ ಹೇಳಿಕೆಗಳು ಈ ಬಗ್ಗೆ ಸುಳಿವು ನೀಡಿದೆ. ಪಟಾಕಿ ನಿಷೇಧದಿಂದ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್‌, “ಪಟಾಕಿಗಳಿಗಿಂತ ಹೆಚ್ಚಿನ ಮಾಲಿನ್ಯವನ್ನು ವಾಹನಗಳು ಉಂಟುಮಾಡುತ್ತವೆ. ಆದರೂ, ಜನರೇಕೆ ಪಟಾಕಿ ಕಾರ್ಖಾನೆಗಳನ್ನೇ ದೂರುತ್ತಾರೆ’ ಎಂದು ಪ್ರಶ್ನಿಸಿದೆ. ಅಲ್ಲದೆ, ಪಟಾಕಿ ಉತ್ಪಾದನಾ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುವ ಅನೇಕರು ಕೆಲಸ ಕಳೆದುಕೊಂಡ ಬಗ್ಗೆ ವಿಷಾದ ವ್ಯಕ್ತಪಡಿಸಿದ ನ್ಯಾಯಪೀಠ, ನಾವು ನಿರುದ್ಯೋಗ ಸೃಷ್ಟಿಯಾಗಲು ಬಯಸುವುದಿಲ್ಲ ಎಂದಿದೆ. ಹೀಗಾಗಿ, ನಿಷೇಧ ತೆರವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next